ERV Police shivamogga ಪಟಾಕಿ ಕಿರಿಕಿರಿ: ಪೊಲೀಸ್ ಎಂಟ್ರಿ
ಶಿವಮೊಗ್ಗ: ನಗರದ ಪೇಪರ್ ಟೌನ್‌ನಲ್ಲಿ ಪಟಾಕಿ ಹೊಡೆಯುವುದರಿಂದ ತೊಂದರೆಯಾಗುತ್ತಿದೆ ಎಂದು ನೆರೆಹೊರೆಯವರು ಇಆರ್‌ವಿ ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಪಟಾಕಿ ಹೊಡೆಯುತ್ತಿದ್ದ ವ್ಯಕ್ತಿಗೆ ಎಚ್ಚರಿಕೆ ನೀಡಿದ್ದು, ಮುಂದಿನ ಬಾರಿ ದೂರು ದಾಖಲಿಸುವುದಾಗಿ ತಿಳಿಸಿದ್ದಾರೆ.

ERV Police shivamogga ಡಿಜೆ ಅಬ್ಬರಕ್ಕೆ ಬ್ರೇಕ್ ಹಾಕಿದ ಪೊಲೀಸ್
ಶಿವಮೊಗ್ಗ: ನ್ಯೂಟೌನ್‌ನಲ್ಲಿ ಅತಿಯಾದ ಡಿಜೆ ಸದ್ದಿನಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಇಆರ್‌ವಿ ಪೊಲೀಸರಿಗೆ ದೂರು ಬಂದಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಡಿಜೆ ಮಾಲೀಕರಿಗೆ ಧ್ವನಿ ಕಡಿಮೆ ಮಾಡುವಂತೆ ತಿಳುವಳಿಕೆ ನೀಡಿ, ಎಚ್ಚರಿಕೆ ನೀಡಿದ್ದಾರೆ.



ಲಾರಿ-ಕಾರು ಭೀಕರ ಅಪಘಾತ
ಶಿವಮೊಗ್ಗ: ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಲಾರಿ ಮತ್ತು ಕಾರು ನಡುವೆ ಭೀಕರ ಅಪಘಾತ ಸಂಭವಿಸಿದೆ. ಈ ಘಟನೆಯಲ್ಲಿ ಕಾರು ಚಾಲಕನಿಗೆ ಗಂಭೀರ ಗಾಯಗಳಾಗಿದ್ದು, ಇಆರ್‌ವಿ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ, ಸಾರ್ವಜನಿಕರ ನೆರವಿನೊಂದಿಗೆ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.
