Protest against forest minister : ಅರಣ್ಯ ಸಚಿವರ ವಿರುದ್ದ ಜಾನುವಾರುಗಳ ಸಹಿತ ರೈತರ ಬೃಹತ್ ಪ್ರತಿಭಟನೆ / ಕಾರಣವೇನು
Protest against forest minister ಸಾಗರ: ಜಾನುವಾರುಗಳನ್ನು ಅರಣ್ಯ ಪ್ರದೇಶದಲ್ಲಿ ಮೇಯಿಸುವುದನ್ನು ನಿಷೇಧಿಸಿರುವ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರ ಆದೇಶವನ್ನು ವಿರೋಧಿಸಿ ಜುಲೈ 28ರಂದು ಸಾಗರದಲ್ಲಿ ರೈತ ಸಂಘದ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಈ ಪ್ರತಿಭಟನೆಯು ಜಾನುವಾರುಗಳ ಸಹಿತ ನಡೆಯಲಿದ್ದು, ಸಚಿವರ ಆದೇಶವನ್ನು ಕೂಡಲೇ ಹಿಂಪಡೆಯುವಂತೆ ಆಗ್ರಹಿಸಲಾಗುವುದು ಎಂದು ರೈತ ಸಂಘದ ಜಿಲ್ಲಾ ಘಟಕ ತಿಳಿಸಿದೆ.
ರೈತ ಸಂಘದ ಜಿಲ್ಲಾ ಘಟಕದ ದಿನೇಶ್ ಶಿರವಾಳ ಅವರು ಮಾತನಾಡಿ, ಸಚಿವರ ಅವೈಜ್ಞಾನಿಕ ಆದೇಶದಿಂದಾಗಿ ರೈತರು ಆತಂಕಗೊಂಡಿದ್ದಾರೆ. ಜಾನುವಾರುಗಳನ್ನು ಮೇಯಿಸಲು ಎಲ್ಲಿಗೆ ಹೋಗಬೇಕು ಎಂಬ ಪ್ರಶ್ನೆ ಎದುರಾಗಿದೆ. ಜಾನುವಾರುಗಳು ಕಾಡಿನಲ್ಲಿ ಮೇಯುವುದರಿಂದ ಪರಿಸರಕ್ಕೆ ಯಾವುದೇ ಹಾನಿಯಾಗುವುದಿಲ್ಲ, ಬದಲಾಗಿ ಗಿಡಬಳ್ಳಿಗಳು ಚಿಗುರುತ್ತವೆ. ನೂರಾರು ವರ್ಷಗಳಿಂದ ಈ ಸಂಪ್ರದಾಯ ನಡೆದು ಬಂದಿದೆ. ಅರಣ್ಯ ನಾಶಕ್ಕೆ ಬೇರೆ ಕಾರಣಗಳಿವೆ, ಜಾನುವಾರುಗಳ ಮೇಯಿಸುವಿಕೆ ಕಾರಣವಲ್ಲ ಎಂದರು.