Tunga and bhadra water level : ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಶಿವಮೊಗ್ಗ ಜಿಲ್ಲೆಯ ಪ್ರಮುಖ ಜಲಾಶಯಗಳಾದ ತುಂಗಾ ಮತ್ತು ಭದ್ರಾ ಡ್ಯಾಂಗಳಲ್ಲಿ ನೀರಿನ ಒಳಹರಿವು ಗಣನೀಯವಾಗಿ ಹೆಚ್ಚಾಗಿದ್ದು, ಜಲಾಶಯಗಳು ಗರಿಷ್ಠ ಮಟ್ಟ ತಲುಪುವತ್ತ ಸಾಗಿವೆ. ಇಂದು (ಜುಲೈ 26, 2025) ಬೆಳಿಗ್ಗೆ ವರದಿಯ ಪ್ರಕಾರ, ಎರಡೂ ಜಲಾಶಯಗಳ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ.
Tunga and bhadra water level : ತುಂಗಾ ಜಲಾಶಯದ ಸ್ಥಿತಿ
ತುಂಗಾ ಜಲಾಶಯಕ್ಕೆ ಪ್ರಸ್ತುತ 49,139.0 ಕ್ಯೂಸೆಕ್ ನೀರು ಹರಿದುಬರುತ್ತಿದೆ. ಜಲಾಶಯದಿಂದ ಒಟ್ಟು 50,667.0 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ತುಂಗಾ ಜಲಾಶಯದ ಪೂರ್ಣ ಪ್ರಮಾಣದ ನೀರಿನ ಮಟ್ಟ 588.24 ಮೀಟರ್‌ಗಳು ಆಗಿದ್ದು, ಇದರ ಒಟ್ಟು ಸಂಗ್ರಹ ಸಾಮರ್ಥ್ಯ 3.24 ಟಿಎಂಸಿ ಆಗಿದೆ. ಪ್ರಸ್ತುತ ಲೈವ್ ಸಾಮರ್ಥ್ಯ 2.411 ಟಿಎಂಸಿ ಇದೆ. ಇಂದು ಜಲಾಶಯದ ನೀರಿನ ಮಟ್ಟ 587.84 ಮೀಟರ್ ತಲುಪಿದೆ.

ಭದ್ರಾ ಜಲಾಶಯದ ಸ್ಥಿತಿ
ಭದ್ರಾ ಜಲಾಶಯಕ್ಕೆ 21,568 ಕ್ಯೂಸೆಕ್ ಒಳಹರಿವು ದಾಖಲಾಗಿದೆ. ಕ್ರಸ್ಟ್ ಗೇಟ್‌ಗಳ ಮೂಲಕ ಅಷ್ಟೇ ಪ್ರಮಾಣದ ನೀರನ್ನು 21568 ಕ್ಯೂಸೆಕ್ ನೀರನ್ನು ಹೊರ ಹರಿಸಲಾಗುತ್ತಿದೆ. ಭದ್ರಾ ಜಲಾಶಯದ ಪೂರ್ಣ ಪ್ರಮಾಣದ ನೀರಿನ ಮಟ್ಟ 186 ಅಡಿ 0 ಇಂಚು ಆಗಿದ್ದು, ಇದರ ಒಟ್ಟು ಸಂಗ್ರಹ ಸಾಮರ್ಥ್ಯ 71.535 ಟಿಎಂಸಿ ಆಗಿದೆ. ಇಂದು ಬೆಳಿಗ್ಗೆ 6 ಗಂಟೆಯ ವರದಿಯ ಪ್ರಕಾರ, ಜಲಾಶಯದ ನೀರಿನ ಮಟ್ಟ 180 ಅಡಿ 6 ಇಂಚು ತಲುಪಿದ್ದು, ಪ್ರಸ್ತುತ 64.777 ಟಿಎಂಸಿ ನೀರು ಸಂಗ್ರಹವಾಗಿದೆ.


