Shivamogga Rural Police july 11 : ನವುಲೆಯಲ್ಲಿ ಲೇಔಟ್ ಮಾಲೀಕನ ಮೇಲೆ ಮಾರಣಾಂತಿಕ ಹಲ್ಲೆ

prathapa thirthahalli
Prathapa thirthahalli - content producer

Shivamogga Rural Police ಶಿವಮೊಗ್ಗ:  ಲೇಔಟ್ ಓನರ್ ಒಬ್ಬರ ಕಾರನ್ನು ಅಡ್ಡಗಟ್ಟಿ ಅವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ನವುಲೆಯ ಬಾರ್ಗವ ಲೇಔಟ್ ಬಳಿ ನಡೆದಿದೆ. ಹಲ್ಲೆಯ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಹಲ್ಲೆಗೊಳಗಾದವರನ್ನು ಲೇಔಟ್ ಮಾಲೀಕ ಅನಿಲ್​ ಪಾಟೀಲ್​ ಎಂದು ಗುರುತಿಸಲಾಗಿದೆ. 

Shivamogga Rural Police  ಘಟನೆಗೆ ಕಾರಣವೇನು

ಅನಿಲ್ ಪಾಟೀಲ್ ಮೇಲೆ ಹಲ್ಲೆ ನಡೆಸಿರುವ ಆರೋಪಿಯ ಮಾವ ಅನಿಲ್ ಪಾಟೀಲ್ ಅವರ ಕಚೇರಿ ಮುಂದೆ ಆಗಾಗ್ಗೆ ಆಟೋ ನಿಲ್ಲಿಸುತ್ತಿದ್ದರು ಎನ್ನಲಾಗಿದೆ. ಈ ಕುರಿತು ಅನಿಲ್, ತಮ್ಮ ಮನೆ ಮುಂದೆ ಆಟೋ ನಿಲ್ಲಿಸದಂತೆ ಆರೋಪಿಯ ಮಾವನೊಂದಿಗೆ ಜಗಳ ನಡೆಸಿದ್ದಾರೆ. ಇದೇ ವಿಚಾರವಾಗಿ ಕೋಪಗೊಂಡ ಆರೋಪಿಗಳು ಇಬ್ಬರು ಮರುದಿನ ಅನಿಲ್ ಪಾಟೀಲ್ ರವರು ತೆರಳುತ್ತಿದ್ದಾಗ ಅವರ ಕಾರನ್ನು ಅಡ್ಡಗಟ್ಟಿ ನನ್ನ ಮಾವನೊಂದಿಗೆ ಯಾಕೆ ಜಗಳ ಮಾಡಿದ್ದೀಯಾ ಎಂದು ಪ್ರಶ್ನಿಸಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಇದೀಗ ಆರೋಪಿಗಳು ತಲೆ ಮರಿಸಿಕೊಂಡಿದ್ದು ಆರೋಪಿ ಪತ್ತೆಗಾಗಿ ಶಿವಮೊಗ್ಗ ಗ್ರಾಮಾಂತರ ಪೊಲೀಸರು ಎರಡು ತಂಡಗಳನ್ನ ಮಾಡಿ ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.

Shivamogga Rural Police ಹಲ್ಲೆ ನಡೆಸುತ್ತಿರುವ ಆರೋಪಿಗಳು
ಹಲ್ಲೆ ನಡೆಸುತ್ತಿರುವ ಆರೋಪಿಗಳು

 

Share This Article