Cow theft Chikkamagaluru : july 11, ಪೊಲೀಸರ ಮೇಲೆ ಕಬ್ಬಿಣದ ರಾಡ್ ಬೀಸಿ ದನ ಕಳ್ಳತನಕ್ಕೆ ಯತ್ನ : ಸಿಮಿಮೀಯ ರೀತಿಯಲ್ಲಿ ಇಬ್ಬರ ಬಂಧನ
ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಹಳುವಳ್ಳಿ ಗ್ರಾಮದಲ್ಲಿ ಝೈಲೋ ಕಾರಿನಲ್ಲಿ ನಾಲ್ಕು ಹಸುಗಳನ್ನು ಕಳ್ಳತನ ಮಾಡಿ ಸಾಗಿಸುತ್ತಿದ್ದು ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ.
ಗುರುವಾರ ಸಂಜೆ ಕಳ್ಳರು 4 ಹಸುಗಳನ್ನು ತಮ್ಮ ಝೈಲೋ ಎಂಬ ಕಾರಿನಲ್ಲಿ ಸಾಗಿಸುತ್ತಿದ್ದರು. ಕಳ್ಳತನದ ಮಾಹಿತಿ ಪಡೆದ ಕಳಸ ಠಾಣಾ ಪೊಲೀಸರು ಹಳುವಳ್ಳಿ ಗ್ರಾಮದ ಬಳಿ ಹಸುಗಳನ್ನು ಸಾಗಿಸುತ್ತಿದ್ದ ಝೈಲೋ ಕಾರನ್ನು ಅಡ್ಡಗಟ್ಟಲು ಯತ್ನಿಸಿದ್ದಾರೆ, ಆದರೆ ಕಳ್ಳರು ಪೊಲೀಸರ ಮೇಲೆ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿ ಎಸ್ಕೇಪ್ ಆಗಲು ಯತ್ನಿಸಿದ್ದಾರೆ. ಆದರೂ ಎದೆಗುಂದದ ಪೊಲೀಸರು ಸಿನಿಮೀಯ ರೀತಿಯಲ್ಲಿ ಚೇಸ್ ಮಾಡಿ ಇಬ್ಬರು ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರಿಂದ ಕಳ್ಳತನಕ್ಕೆ ಬಳಸಿದ್ದ ಝೈಲೋ ಕಾರು, ಕಬ್ಬಿಣದ ರಾಡ್, 4 ಮೊಬೈಲ್ ಫೋನ್‌ಗಳು ಮತ್ತು ಕಳವು ಮಾಡಿದ್ದ 4 ಹಸುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


