Sigandur Bridge Naming Controversy : ಸಿಗಂದೂರು ಸೇತವೆಗೆ ಹೊಸ ಹೆಸರು? ಹೈ ಕೋರ್ಟ್​ಗೆ ರಿಟ್​ ಅರ್ಜಿ ಸಲ್ಲಿಕೆ

prathapa thirthahalli
Prathapa thirthahalli - content producer

Sigandur Bridge Naming Controversy : ಸಿಗಂದೂರು ಸೇತವೆಗೆ ಹೊಸ ಹೆಸರು ? ಹೈ ಕೋರ್ಟ್​ಗೆ ರಿಟ್​ ಅರ್ಜಿ ಸಲ್ಲಿಕೆ

ಶಿವಮೊಗ್ಗ: ಜುಲೈ 14 ರಂದು ಲೋಕಾರ್ಪಣೆಗೆ ಸಿದ್ಧವಾಗಿರುವ ಸಿಗಂದೂರು ಸೇತುವೆಯ (Sigandur Bridge) ನಾಮಕರಣಕ್ಕೆ ಸಂಬಂಧಿಸಿದಂತೆ ಇದೀಗ ಹೊಸ ವಿವಾದ ಭುಗಿಲೆದ್ದಿದೆ. 

ಈ ಹಿಂದೆ ಸಂಸದ ಬಿ.ವೈ. ರಾಘವೇಂದ್ರ ಅವರು ಸೇತುವೆಗೆ ಸಿಗಂದೂರು ಚೌಡೇಶ್ವರಿ ಸೇತುವೆ ಎಂದು ಹೆಸರಿಸುವುದಾಗಿ ಸಿಎಂ ಗೆ ಮನವಿ ಸಲ್ಲಿಸುವುದಾಗಿ ಹೇಳಿದ್ದರು. ಆದರೆ ಇದರ ನಡುವೆ ಸಾಗರದ ರೈತರೊಬ್ಬರು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ  ಅವರ ಹೆಸರಿಡುವಂತೆ ಕೋರಿ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ.

- Advertisement -

ಶಿವಮೊಗ್ಗ ಜಿಲ್ಲೆಯ ಅಭಿವೃದ್ಧಿಗೆ ಮತ್ತು ನಿರ್ದಿಷ್ಟವಾಗಿ ಸಿಗಂದೂರು ಸೇತುವೆ ನಿರ್ಮಾಣಕ್ಕೆ ಬಿ.ಎಸ್. ಯಡಿಯೂರಪ್ಪ ಅವರ ಕೊಡುಗೆಯನ್ನು ಪರಿಗಣಿಸಿ, ಅವರ ಹೆಸರನ್ನು ಸೇತುವೆಗೆ ನಾಮಕರಣ ಮಾಡಬೇಕು ಎಂದು ಸಾಗರ ತಾಲೂಕಿನ ರೈತ ಹರನಾಥರಾವ್ ಅವರು ನ್ಯಾಯಾಲಯವನ್ನು ಕೋರಿದ್ದಾರೆ.

ಈ ಅರ್ಜಿ ಕುರಿತು ವಕೀಲರಾದ ಶಿವಶ್ರೀನಿವಾಸ್ ಮತ್ತು ಸಂತೋಷ್ ಅವರು ವಾದ ಮಂಡಿಸಲಿದ್ದಾರೆ. ನ್ಯಾಯಮೂರ್ತಿ ಸುನೀತಾ ದತ್ತ ಯಾದವ್  ಅವರು ವಿಚಾರಣೆ ನಡೆಸಲಿದ್ದು, ಸೇತುವೆಯ ಹೆಸರಿನ ಕುರಿತ ತೀರ್ಪು ಸದ್ಯದಲ್ಲೇ ಹೊರಬೀಳುವ ಸಾಧ್ಯತೆಯಿದೆ. ಸಿಗಂದೂರು ಸೇತುವೆ ಉದ್ಘಾಟನೆಗೆ ಕೆಲವೇ ದಿನಗಳು ಬಾಕಿ ಇರುವಾಗ, ಈ ಕಾನೂನು ಹೋರಾಟವು ಸಾರ್ವಜನಿಕರಲ್ಲಿ ಕುತೂಹಲ ಮೂಡಿಸಿದೆ.

Sigandur Bridge Naming Controversy
Sigandur Bridge Naming Controversy

 

 

TAGGED:
Share This Article
Leave a Comment

Leave a Reply

Your email address will not be published. Required fields are marked *