Shivamogga city tour : ಶಿವಮೊಗ್ಗ ಸಿಟಿ ಟೂರ್: 725 ಹಲವು ಸ್ಥಳಗಳ ದರ್ಶನ | ಯಾವಾಗ..?
ಶಿವಮೊಗ್ಗ: ಪ್ರವಾಸೋದ್ಯಮಕ್ಕೆ ಹೆಚ್ಚು ಒತ್ತು ನೀಡಿ, ವಾರಾಂತ್ಯದ ಪ್ರವಾಸಗಳನ್ನು ಯಶಸ್ವಿಯಾಗಿ ಆಯೋಜಿಸುತ್ತಿರುವ ‘ನಮ್ಮ ಕನಸಿನ ಶಿವಮೊಗ್ಗ” ಸಂಸ್ಥೆಯ ಅಂಗಸಂಸ್ಥೆಯಾದ ಶಿವಮೊಗ್ಗ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆಯು, ನಗರದ ಸುತ್ತಮುತ್ತಲಿನ ಪ್ರಮುಖ ಆಕರ್ಷಣೆಗಳಿಗೆ ಒಂದು ದಿನದ ಪ್ರವಾಸವನ್ನು ಘೋಷಿಸಿದೆ.
Shivamogga city tour ಜುಲೈ 20, 2025 ರ ಭಾನುವಾರದಂದು ಈ ವಿಶೇಷ ಪ್ರವಾಸವನ್ನು ಆಯೋಜಿಸಲಾಗಿದೆ. ಪ್ರವಾಸಿಗರು ಸಕ್ರೇಬೈಲು ಆನೆ ಬಿಡಾರ, ಹುಲಿ ಮತ್ತು ಸಿಂಹ ಧಾಮ, ಮತ್ತೂರು ಗಣಪತಿ ದೇವಸ್ಥಾನ, ಗುಡೇಮರಡಿ ಮಲ್ಲೇಶ್ವರ ದೇವಸ್ಥಾನ, ಮತ್ತು ನಿಧಿಗೆಯ ದೋಣಿ ವಿಹಾರ ಸ್ಥಳಗಳಿಗೆ ಭೇಟಿ ನೀಡಬಹುದಾಗಿದೆ. ಶಿವಮೊಗ್ಗದಿಂದ ಬೆಳಿಗ್ಗೆ 7:30ಕ್ಕೆ ಹೊರಟು, ಅಂದೇ ಸಂಜೆ 6:30ರೊಳಗೆ ನಗರಕ್ಕೆ ವಾಪಸ್ ತಲುಪುವ ವ್ಯವಸ್ಥೆ ಮಾಡಲಾಗಿದೆ. ಈ ಪ್ರವಾಸಕ್ಕೆ ಪ್ರತಿ ವ್ಯಕ್ತಿಗೆ 725 ಶುಲ್ಕ ನಿಗದಿಪಡಿಸಲಾಗಿದೆ. ಇದರಲ್ಲಿ ಬಸ್ ಪ್ರಯಾಣ, ಬೆಳಿಗ್ಗೆ ಉಪಹಾರ, ಮಧ್ಯಾಹ್ನದ ಊಟ, ಸಕ್ರೇಬೈಲು ಆನೆ ಬಿಡಾರ ಹಾಗೂ ಹುಲಿ. ಮತ್ತು ಸಿಂಹಧಾಮದ ಪ್ರವೇಶ ಶುಲ್ಕ (ಸಫಾರಿ ಹೊರತುಪಡಿಸಿ) ಮತ್ತು ನಿಧಿಗೆ ಕೆರೆಯಲ್ಲಿ ದೋಣಿ ವಿಹಾರದ ಶುಲ್ಕ ಸೇರಿರುತ್ತದೆ.
ಈ ಪ್ರವಾಸದಲ್ಲಿ ಕೇವಲ 45 ಜನರಿಗೆ ಮಾತ್ರ ಭಾಗವಹಿಸಲು ಅವಕಾಶವಿದ್ದು. ಮೊದಲು ಹೆಸರು ನೋಂದಾಯಿಸಿದವರಿಗೆ ಆದ್ಯತೆ ನೀಡಲಾಗುವುದು ಎಂದು ಶಿವಮೊಗ್ಗ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆ ಕಾರ್ಯದರ್ಶಿ ಎನ್. ಗೋಪಿನಾಥ್ ಅವರು ತಿಳಿಸಿದ್ದಾರೆ. ಆಸಕ್ತರು ತಮ್ಮ ಹೆಸರನ್ನು ದಿಲೀಪ್ ನಾಡಿಗ್ (ದೂರವಾಣಿ: 6361124316) ರವರನ್ನು ಸಂಪರ್ಕಿಸಬಹುದು.

