railway news ಜೂನ್​ 26, 2025 :  ಹಬ್ಬನಘಟ್ಟ-ಅರಸೀಕೆರೆ ಕಾಮಗಾರಿ | ಈ ದಿನ ಶಿವಮೊಗ್ಗದ ಕೆಲವು ರೈಲುಗಳ ಸಂಚಾರ ಸ್ಥಗಿತ

prathapa thirthahalli
Prathapa thirthahalli - content producer

railway news ಶಿವಮೊಗ್ಗ : ವಿಶ್ವೇಶ್ವರಯ್ಯ ಜಲ ನಿಗಮ ಲಿಮಿಟೆಡ್ (ವಿಜೆಎನ್ಎಲ್) ವತಿಯಿಂದ ಜೂನ್ 30, 2025 ರಂದು ಹಬ್ಬನಘಟ್ಟ ಮತ್ತು ಅರಸೀಕೆರೆ ನಡುವೆ ನಡೆಯಲಿರುವ ಕಾಲುವೆ ಕ್ರಾಸಿಂಗ್ ಕಾಮಗಾರಿಯಿಂದಾಗಿ ಹಲವು ರೈಲು ಸೇವೆಗಳಲ್ಲಿ ಬದಲಾವಣೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಕೆಲವು ರೈಲುಗಳನ್ನು ರದ್ದುಪಡಿಸಲಾಗಿದೆ, ಕೆಲವು ರೈಲುಗಳ ಸಂಚಾರವನ್ನು ಭಾಗಶಃ ರದ್ದುಗೊಳಿಸಲಾಗಿದೆ, ಮತ್ತೆ ಕೆಲವು ರೈಲುಗಳನ್ನು ನಿಯಂತ್ರಿಸಿ, ಮರುನಿಗದಿಪಡಿಸಲಾಗಿದೆ.

railway news : ರದ್ದಾದ ರೈಲುಗಳು:

ರೈಲು ಸಂಖ್ಯೆ. 56267 ಅರಸೀಕೆರೆ  – ಮೈಸೂರು ಪ್ಯಾಸೆಂಜರ್, ದಿನಾಂಕ 30.06.2025 ರ ಪ್ರಯಾಣವನ್ನು ರದ್ದುಪಡಿಸಲಾಗಿದೆ.

- Advertisement -

ರೈಲು ಸಂಖ್ಯೆ. 16206 ಮೈಸೂರು – ತಾಳಗುಪ್ಪ ಎಕ್ಸಪ್ರೆಸ್, ದಿನಾಂಕ 30.06.2025 ರ ಪ್ರಯಾಣವನ್ನು ರದ್ದುಪಡಿಸಲಾಗಿದೆ.

ರೈಲು ಸಂಖ್ಯೆ. 16205 ತಾಳಗುಪ್ಪ – ಮೈಸೂರು ಎಕ್ಸಪ್ರೆಸ್, ದಿನಾಂಕ 30.06.2025ರ ಪ್ರಯಾಣವನ್ನು ರದ್ದುಪಡಿಸಲಾಗಿದೆ.

 

ಭಾಗಶಃ ರದ್ದುಗೊಂಡ ರೈಲು:

ಜೂನ್ 30, 2025 ರಂದು ಮೈಸೂರಿನಿಂದ ಶಿವಮೊಗ್ಗ ಟೌನ್‌ಗೆ ಹೊರಡುವ ರೈಲು ಸಂಖ್ಯೆ 16225 ಮೈಸೂರು – ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್ ಮೈಸೂರು ಮತ್ತು ಅರಸೀಕೆರೆ ನಡುವೆ ರದ್ದುಗೊಂಡಿದೆ. ಈ ರೈಲು ಅರಸೀಕೆರೆಯಿಂದ ತನ್ನ ನಿಗದಿತ ಸಮಯದಲ್ಲಿ ಪ್ರಯಾಣ ಮುಂದುವರಿಸಲಿದೆ.

 

railway news : ನಿಯಂತ್ರಿಸಲಾದ ರೈಲು:

ಜೂನ್ 30, 2025 ರಂದು ಸಂಚರಿಸುವ ರೈಲು ಸಂಖ್ಯೆ 56266 ಮೈಸೂರು – ಅರಸೀಕೆರೆ ಪ್ಯಾಸೆಂಜರ್ ರೈಲನ್ನು ಮಾರ್ಗ ಮಧ್ಯೆ 60 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ.

ಮರುನಿಗದಿಪಡಿಸಿದ ರೈಲುಗಳು:

ಜೂನ್ 30, 2025 ರಂದು ಅರಸೀಕೆರೆಯಿಂದ ಹೊರಡಬೇಕಿದ್ದ ರೈಲು ಸಂಖ್ಯೆ 56265 ಅರಸೀಕೆರೆ – ಮೈಸೂರು ಪ್ಯಾಸೆಂಜರ್ ರೈಲು 60 ನಿಮಿಷಗಳ ಕಾಲ ತಡವಾಗಿ ಹೊರಡಲಿದೆ.

ಅದೇ ದಿನ ಮೈಸೂರಿನಿಂದ ಹೊರಡುವ ರೈಲು ಸಂಖ್ಯೆ 06269 ಮೈಸೂರು – ಎಸ್‌ಎಂವಿಟಿ ಬೆಂಗಳೂರು ಪ್ಯಾಸೆಂಜರ್ ವಿಶೇಷ ರೈಲು ಕೂಡ 60 ನಿಮಿಷಗಳ ಕಾಲ ಮರುನಿಗದಿಪಡಿಸಲಾಗಿದೆ.

 

 

TAGGED:
Share This Article
prathapa thirthahalli
content producer
Follow:
Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
Leave a Comment

Leave a Reply

Your email address will not be published. Required fields are marked *