karnataka Lokayukta Crackdown / ಶಿವಮೊಗ್ಗದಲ್ಲಿ ಲೋಕಾಯುಕ್ತ ರೇಡ್​/ ಕೋಟಿ ಕೋಟಿ ಲೆಕ್ಕಕ್ಕೆ ಸಿಕ್ಕಿದ್ದೇನು?

ajjimane ganesh

ಶಿವಮೊಗ್ಗ ಲೋಕಾಯುಕ್ತ ದಾಳಿ: ಕೃಷಿ ವಿವಿ ಪ್ರಾಧ್ಯಾಪಕನ ₹6.34 ಕೋಟಿ ಮೌಲ್ಯದ ಆಸ್ತಿ ಪತ್ತೆ /Karnataka Lokayukta Crackdown: Disproportionate Assets Case Shakes Up State Officials

ಶಿವಮೊಗ್ಗ: ಆದಾಯ ಮೀರಿ ಆಸ್ತಿ ಸಂಪಾದನೆ ಆರೋಪದಡಿ ರಾಜ್ಯಾದ್ಯಂತ ಲೋಕಾಯುಕ್ತ ಅಧಿಕಾರಿಗಳು  ನಿನ್ನೆ ದಿನ ಭರ್ಜರಿ ಕಾರ್ಯಾಚರಣೆ ನಡೆಸಿದ್ದರು. ಒಟ್ಟು 8 ಅಧಿಕಾರಿಗಳಿಗೆ ಸಂಬಂಧಿಸಿದ 45 ಸ್ಥಳಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ್ದ ಲೋಕಾಯುಕ್ತರು, ಕೋಟ್ಯಂತರ ರೂಪಾಯಿ ಮೌಲ್ಯದ ಸ್ಥಿರಾಸ್ತಿ ಮತ್ತು ಚರಾಸ್ತಿಗಳನ್ನು ಪತ್ತೆ ಹಚ್ಚಿದ್ದಾರೆ. 

- Advertisement -
/Karnataka Lokayukta Crackdown: Disproportionate Assets Case Shakes Up State Officials
/Karnataka Lokayukta Crackdown: Disproportionate Assets Case Shakes Up State Officials

ಈ ದಾಳಿಗಳ ಪೈಕಿ ಶಿವಮೊಗ್ಗದ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಸಹಾಯಕ ಸಂಶೋಧನಾ ನಿರ್ದೇಶಕ (ADR ಕೋಆರ್ಡಿನೇಟರ್) ಮತ್ತು ಪ್ರಾಧ್ಯಾಪಕ ಡಾ. ಪ್ರದೀಪ್ ಅವರಿಗೆ ಸೇರಿದ  ಸ್ಥಳಗಳಲ್ಲಿಯು ಶೋಧ ಕಾರ್ಯ ನಡೆದಿತ್ತು. ಸದ್ಯ ಈ ದಾಳಿಯಲ್ಲಿ  ಡಾ. ಪ್ರದೀಪ್ ಅವರ ಒಟ್ಟು ₹6.34 ಕೋಟಿ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ ಎಂದು ಲೋಕಾಯುಕ್ತ ಪ್ರಕಟಣೆ ತಿಳಿಸಿದೆ.

/Karnataka Lokayukta Crackdown: Disproportionate Assets Case Shakes Up State Officials
/Karnataka Lokayukta Crackdown: Disproportionate Assets Case Shakes Up State Officials

ಪತ್ತೆಯಾದ ಆಸ್ತಿ ವಿವರಗಳು: karnataka Lokayukta Crackdown

ಡಾ. ಪ್ರದೀಪ್ ಅವರ ಬಳಿ ಪತ್ತೆಯಾದ ಆಸ್ತಿಗಳ ಪಟ್ಟಿ ಹೀಗಿದೆ:

  • ಸ್ಥಿರಾಸ್ತಿ: 5 ನಿವೇಶನಗಳು, 1 ವಾಸದ ಮನೆ ಮತ್ತು 16.7 ಎಕರೆ ಕೃಷಿ ಜಮೀನು – ಇವುಗಳ ಒಟ್ಟು ಮೌಲ್ಯ ₹4.45 ಕೋಟಿ ಎಂದು ಅಂದಾಜಿಸಲಾಗಿದೆ.
  • ನಗದು ಮತ್ತು ಬ್ಯಾಂಕ್‌ ಬ್ಯಾಲೆನ್ಸ್: ಬ್ಯಾಂಕ್ ಖಾತೆಗಳಲ್ಲಿ ₹29.75 ಲಕ್ಷ, ದಾಳಿ ವೇಳೆ ₹10 ಸಾವಿರ ನಗದು ಮತ್ತು ₹25 ಸಾವಿರ ಮೌಲ್ಯದ ವಿದೇಶಿ ಕರೆನ್ಸಿ ಪತ್ತೆಯಾಗಿದೆ.
  • ಇತರೆ ಚರಾಸ್ತಿಗಳು: ₹34.75 ಲಕ್ಷ ಮೌಲ್ಯದ ಚಿನ್ನಾಭರಣ, ₹30 ಲಕ್ಷ ಮೌಲ್ಯದ ವಾಹನಗಳು (ಮೂರು ಕಾರುಗಳು ಮತ್ತು ಮೂರು ಬೈಕ್‌ಗಳು), ₹15.50 ಲಕ್ಷ ಮೌಲ್ಯದ ಮೇಕೆ ಮತ್ತು ಹಸುಗಳು, ₹50 ಲಕ್ಷ ಮೌಲ್ಯದ ಫಾರ್ಮ್‌ ಹೌಸ್‌, ಮತ್ತು ₹28.75 ಲಕ್ಷ ಮೌಲ್ಯದ ಇತರೆ ವಸ್ತುಗಳು ಪತ್ತೆಯಾಗಿವೆ.
  • ಇದಲ್ಲದೆ, ಜವಾರಿ ಕೋಳಿ ಫಾರಂ, ಬಾತುಕೋಳಿ, ಪಾರಿವಾಳ ಫಾರಂ, ಕುರಿ ಮತ್ತು ಗೋವುಗಳ ಫಾರಂಗಳು ಸಹ ಇರುವುದು ಕಂಡುಬಂದಿದೆ. 400 ಗ್ರಾಂ ಚಿನ್ನ, 3 ಕೆ.ಜಿ. ಬೆಳ್ಳಿ, 20 ಕೈಗಡಿಯಾರಗಳು (ಕೆಲವು ವಿದೇಶಿ ಬ್ರಾಂಡ್‌ಗಳು), ಮತ್ತು 50 ಜೊತೆ ಶೂಗಳು ಸಹ ದೊರೆತಿವೆ.

ಲೋಕಾಯುಕ್ತ ಅಧಿಕಾರಿಗಳು ತನಿಖೆಯನ್ನು ಮುಂದುವರೆಸಿದ್ದಾರೆ. karnataka Lokayukta Crackdown

Disproportionate Assets Case Shakes Up State Officials
Disproportionate Assets Case Shakes Up State Officials
karnataka Lokayukta Crackdown
karnataka Lokayukta Crackdown

ಇನ್ನಷ್ಟು ಸುದ್ದಿಗಳಿಗಾಗಿ : malendutoday.com / shivamoggalive.com

Share This Article
Leave a Comment

Leave a Reply

Your email address will not be published. Required fields are marked *