tunga dam water flow 17-06-25 ತುಂಗಾ ನದಿಯಲ್ಲಿ ಅಪಾಯ ಮಟ್ಟಕ್ಕೆ ತಲುಪಿದ ನೀರಿನ ಮಟ್ಟ | ಸಾರ್ವಜನಿಕರಿಗೆ ಎಚ್ಚರಿಕೆ

tunga dam water flow ತುಂಗಾ ನದಿಯಲ್ಲಿ ಅಪಾಯ ಮಟ್ಟಕ್ಕೆ ತಲುಪಿದ ನೀರಿನ ಮಟ್ಟ | ಸಾರ್ವಜನಿಕರಿಗೆ ಎಚ್ಚರಿಕೆ

tunga dam water flow ಶಿವಮೊಗ್ಗ: ಜಿಲ್ಲೆಯಲ್ಲಿ ಭಾರೀ ಮಳೆಯಾತ್ತಿದ್ದು, ಗಾಜನೂರಿನ ತುಂಗಾ ಜಲಾಶಯದಲ್ಲಿ ಒಳಹರಿವು ಹೆಚ್ಚಾಗಿದ್ದು ಡ್ಯಾಂ ನಿಂದ 43 ಸವಿರ ಕ್ಯೂಸೆಕ್​ ನೀರನ್ನು ಹೊರಬಿಡಲಾಗಿದೆ. ಶಿವಮೊಗ್ಗದ ಕೊರ್ಪಾಲಯ್ಯನ ಮಂಟಪ ಬಹುತೇಕ ಮುಳುಗಡೆ ಹಂತ ತಲುಪಿದೆ.

ಜಲಾನಯನ ಪ್ರದೇಶದಲ್ಲಿ ಮಳೆಯ ಆರ್ಭಟ ಹೆಚ್ಚಾಗಿದ್ದು, ಜಲಾಶಯಕ್ಕೆ 43 ಸಾವಿರ ಕ್ಯೂಸೆಕ್​ ನೀರು ಹರಿದು ಬರುತ್ತಿದೆ. ಅಷ್ಟೇ ಪ್ರಮಾಣದ ನೀರನ್ನು 22 ಕ್ರಸ್ಟ್​ ಗೇಟ್​ ಗಳಿಂದ ಹೊರಬಿಡಲಾಗಿದೆ.

ತುಂಗಾ ಜಲಾಶಯದ ಅಧಿಕಾರಿಗಳು ನದಿ ಪಾತ್ರದಲ್ಲಿ ವಾಸಿಸುವ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ. ನದಿ ದಂಡೆಗೆ ತೆರಳದಂತೆ, ಜಾನುವಾರುಗಳನ್ನು ನದಿ ಬಳಿ ಬಿಡದಂತೆ ಮತ್ತು ಯಾವುದೇ ಕಾರಣಕ್ಕೂ ನದಿ ದಾಟಲು ಪ್ರಯತ್ನಿಸದಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Leave a Comment