pavalam ant powder : ಇರುವೆ ಪುಡಿ ಗೋದಾಮಿನ ಮೇಲೆ ಅಧಿಕಾರಿಗಳ ದಾಳಿ | ಸಾವಿರಾರು ರೂಪಾಯಿ ಮೌಲ್ಯದ ಇರುವೆ ಪುಡಿ ಜಪ್ತಿ
ಶಿವಮೊಗ್ಗದಲ್ಲಿ ಅಧಿಕೃತ ಪರವಾನಿಗೆ ಇಲ್ಲದೆ ಮಾರಾಟ ಮಾಡುತ್ತಿದ್ದ ಪವಳಂ ಸಂಸ್ಥೆಯ ಪವಳಂ ಇರುವೆ ಪುಡಿ ಗೋದಾಮಿನ ಮೇಲೆ ಕೃಷಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಇಂದು ಕೃಷಿ ಇಲಾಖೆ ಅಧಿಕಾರಿಗಳು ಶಿವಮೊಗ್ಗದ ಗಾಂಧಿ ಬಜಾರ್ ನಲ್ಲಿರುವ ಪಟೇಲ್ ನಾವೆಲ್ಟೀಸ್ ಗೋದಾಮಿನ ಮೇಲೆ ಅನಿರೀಕ್ಷಿತ ದಾಳಿ ನಡೆಸಿದ್ದಾರೆ. ಈ ವೇಳೆ ಅಂಗಡಿ ಮಾಲೀಕ ಅಧಿಕೃತ ಪರವಾನಿಗೆ ಇಲ್ಲದೆ ಗೃಹಬಳಕೆ ಕೀಟನಾಶಕ ಮಾರಾಟ ಮಾಡುತ್ತಿರುವುದು ತಿಳಿದು ಬಂದಿದೆ. ಈ ಹಿನ್ನೆಲೆ ಅಧಿಕಾರಿಗಳು ಸುಮಾರು 64,800 ರೂಪಾಯಿ ಮೌಲ್ಯದ ಇರುವೆ ಪುಡಿ ಜಪ್ತಿ ಮಾಡಿ ಅಂಗಡಿ ಮಾಲಿಕರಿಗೆ ನೋಟಿಸ್ ನೀಡಿದ್ದಾರೆ.