shivamogga news today : ಸಿಎಂ, ಡಿಸಿಎಂ ಹಾಗೂ ಸಭಾಧ್ಯಕ್ಷರ ವಿರುದ್ಧ ಆಯನೂರು ಮಂಜುನಾಥ್ ವಾಗ್ದಾಳಿ | ಕಾರಣವೇನು
ಮಾರ್ಚ್ 25 ರಂದು 18 ಜನ ಶಾಸಕರ ಅಮಾನತ್ತು ನಿರ್ಣಯವನ್ನು ಸಭಾಧ್ಯಕ್ಷರು ಸಭೆ ನಡೆಸಿ ವಾಪಸ್ಸು ಪಡೆದಿದ್ದಾರೆ. ಆದರೆ ಈ ನಿರ್ಣಯ ಕಾಂಗ್ರೆಸ್ನ ಕೆಲ ಮುಖಂಡರುಗಳ ನಡುವೆ ಅಪಸ್ವರಕ್ಕೆ ಕಾರಣವಾಗಿದೆ. ಈ ಹಿನ್ನಲೆ ರಾಜ್ಯ ಕಾಂಗ್ರೆಸ್ ವಕ್ತಾರ ಆಯನೂರು ಮಂಜುನಾಥ್ ಅಮಾನತ್ತಾದ ಬಿಜೆಪಿ ಶಾಸಕರ ನಿರ್ಣಯವನ್ನು ಸಭಾಧ್ಯಕ್ಷರು ವಾಪಸ್ಸು ತೆಗೆದುಕೊಂಡಿದ್ದು ಕಾನೂನು ಬಾಹೀರವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ನಾನು ಕಾಂಗ್ರೆಸ್ ವಕ್ತಾರನಾಗಿ ಮಾತನಾಡುತ್ತಿಲ್ಲ ವ್ಯಕ್ತಿಗತವಾಗಿ ಮಾತನಾಡುತ್ತಿದ್ದೇನೆ ಎಂದ ಅವರು ಅಮಾನತ್ತು ವಾಪಸ್ಸು ಪಡೆದ ಸಭಾಧ್ಯಕ್ಷರ ನಿರ್ಣಯಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಹಾಗೆಯೇ ಶಾಸಕರನ್ನು ಅಮಾನತ್ತು ಗೊಳಿಸುವಾಗ 348ರ ಪ್ರಕಾರದ ಕಾನೂನನ್ನು ಬಳಸಲಾಗಿತ್ತು, ಆದರೆ ಅದನ್ನು ವಾಪಸ್ಸು ಪಡೆಯುವಾಗ ಏಕೆ ಯಾವುದೇ ಕಾನೂನನ್ನು ಬಳಸಿಲ್ಲ ಎಂದು ಪ್ರಶ್ನಿಸಿದರು.
shivamogga news today : ಸದನದ ಒಳಗೆ ತೆಗೆದುಕೊಂಡ ಅಮಾನತ್ತು ತೀರ್ಮಾನವನ್ನು ಸದನದಲ್ಲಿಯೇ ಪರಿಹರಿಸಬೇಕಿತ್ತು. ಆದರೆ ತಮ್ಮೊಳಗೆ ಮಾತನಾಡಿಕೊಂಡು ಸದನದ ಹೊರಗೆ ಈ ತೀರ್ಮಾನವನ್ನು ಕೈಗೊಂಡಿದ್ದಾರೆ. ಇದು ಸಂವಿಧಾನಕ್ಕೆ ಮಾಡಿದ ಅಪಮಾನವಾಗಿದೆ ಎಂದ ಅವರು ಈ ರೀತಿಯ ನಿರ್ಣಯವನ್ನು ದೇಶದ ಯಾವುದೇ ರಾಜ್ಯದಲ್ಲಿ ತೆಗೆದುಕೊಂಡಿಲ್ಲ, ಸಂವಿಧಾನದಿಂದ ಇವರೇ ಹೊರತು ಇವರಿಂದ ಸಂವಿಧಾನವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

18 ಜನ ಶಾಸಕರನ್ನು 6 ತಿಂಗಳುಗಳ ಕಾಲ ಅಮಾನತ್ತು ಮಾಡಲಾಗಿತ್ತು. ಆದರೆ ಅದನ್ನು ಇಷ್ಟು ಬೇಗ ವಾಪಸ್ಸು ಪಡೆಯುವ ಗಡಿಬಿಡಿ ಏನಿತ್ತು ಎಂಬುದು ನನಗೆ ಗೊತ್ತಿಲ್ಲ. ಅವರನ್ನು ಶಾಸಕ ಸ್ಥಾನದಿಂದ ಅಮಾನತ್ತು ಮಾಡಲಾಗಿಲ್ಲ. ಅವರನ್ನು ಸದನದ ಮೀಟಿಂಗ್ಗೆ ಮಾತ್ರ ಅಮಾನತ್ತು ಮಾಡಲಾಗಿತ್ತು. ಆದರೆ ಶಾಸಕರಿಗೆ ನಷ್ಟ ಆಗಿದ್ದು ದಿನಭತ್ಯೆ ಪಡೆಯದೇ ಇದ್ದಿದ್ದು ಮಾತ್ರ ಎಂದರು.