shivamogga rain news today : 4 ಜಿಲ್ಲೆಗೆ ರೆಡ್​ ಅಲರ್ಟ್! ಶಿವಮೊಗ್ಗದಲ್ಲಿಯು ಜೋರು ಮಳೆ

Malenadu Today

ರಾಜ್ಯದೆಲ್ಲೆಡೆ ಮಳೆ ಅಬ್ಬರ ಆರಂಭವಾಗಿದೆ. ನಿರೀಕ್ಷೆಗಿಂತಲೂ ವಿಪರೀತ ಎಂಬಂತೆ ವರ್ಷಧಾರೆ ಆಗುತ್ತಿರುವುದು ಆತಂಕವನ್ನು ಸಹ ಮೂಡಿಸಿದೆ. ಈ ನಡುವೆ ಹವಾಮಾನ ಇಲಾಖೆ ಬೆಂಗಳೂರು ಇದರ ಮಾಹಿತಿ ಪ್ರಕಾರ, ಮೇ 21 ರಂದು ಅಂದರೆ ಇವತ್ತು ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಿಗೆ ರೆಡ್ ಅಲರ್ಟ್ ನೀಡಲಾಗಿದೆ.  ದಕ್ಷಿಣ ಕನ್ನಡ, ಕೊಡಗು, ಹಾಸನ, ಹಾವೇರಿ, ಧಾರವಾಡ, ಬೆಳಗಾವಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಕೊಡಲಾಗಿದೆ. 

shivamogga rain news today

ಮುಂದಿನ ನಾಲ್ಕೈದು ದಿನಗಳಲ್ಲಿ ಮುಂಗಾರಿನ ಆಗಮನವೂ ಆಗಲಿದೆ. ಈ ಹಿನ್ನೆಲೆಯಲ್ಲಿ ಆಯಾ ಜಿಲ್ಲಾಡಳಿತ ಮಳೆ ಗಾಳಿಯಿಂದಾಗುವ ಅನಾಹುತಗಳ ಬಗ್ಗೆ ಎಚ್ಚರವಹಿಸಲು ಸರ್ಕಾರ ಸೂಚಿಸಿದೆ.  ಇನ್ನೂ ನಿನ್ನೆ  ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದೆ. ಐಎಂಡಿಯ ಪ್ರಕಾರ, ಆನವಟ್ಟಿಯಲ್ಲಿ ಹೆಚ್ಚು ಮಳೆಯಾಗಿದ್ದು,  ಸೊರಬ ತಾಲ್ಲೂಕು ಹೆಚ್ಚು ಮಳೆ ಕಂಡಿದೆ. ಇನ್ನೂ ಮಳೆ ಇವತ್ತು ಸಹ ಮುಂದುವರಿಯಲಿದ್ದು, ಹಲವೆಡೆ ವ್ಯಾಪಕ ಮಳೆಯಾಗುವ ಸೂಚನೆ ಇದೆ. 

 ಓದುಗರೆ ನಿಮ್ಮಲ್ಲಿ ಅಬ್ಬರದ ಮಳೆಯಾಗುತ್ತಿದ್ದರೆ ಅದರ ದೃಶ್ಯವನ್ನು ನಮಗೆ ಕಳುಹಿಸಿಕೊಡಿ! ನಾವು ಮಲೆನಾಡು ಟುಡೆ ಡಿಜಿಟಲ್ ಮೀಡಿಯಾದಲ್ಲಿ ಪ್ರಸಾರ ಮಾಡುತ್ತೇವೆ.

shivamogga rain news today

Share This Article