waqf bill protest :  ವಕ್ಫ್​ ಕಾಯ್ದೆ ತಿದ್ದುಪಡಿ ವಿರುದ್ಧ ​ಪ್ರತಿಭಟನೆ | ಪ್ರತಿಭಟನಾಕಾರರ ಆಗ್ರಹಗಳೇನು

prathapa thirthahalli
Prathapa thirthahalli - content producer

waqf bill protest : ಶಿವಮೊಗ್ಗದಲ್ಲಿ  ವಕ್ಫ್ ಕಾಯ್ದೆ ತಿದ್ದುಪಡಿ ವಿರೋಧಿಸಿ ಇಂದು ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ವತಿಯಿಂದ ಪ್ರತಿಭಟನಾ ನಡೆಸಲಾಯಿತು. ಶಿವಮೊಗ್ಗ ನಗರದ ವೀರಭದ್ರೇಶ್ವರ ಚಿತ್ರಮಂದಿರದ ಬಳಿ ಇರುವ ವಕ್ಫ್​ ಕಚೇರಿಯಿಂದ ಶುರುವಾದ ಪ್ರತಿಭಟನಾ ವೆರವಣಿಗೆ. ಜಿಲ್ಲಾಧಿಕಾರಿ ಕಚೇರಿವರೆಗೆ ವರೆಗೆ ನಡೆಯಿತು. ಈ ವೇಳೆ ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.  ಹಾಗೆಯೇ ಕೈ ಗೆ ಕಪ್ಪು ಪಟ್ಟಿ ಧರಿಸಿ ಆಕ್ರೋಶವನ್ನು ವ್ಯಕ್ತಪಡಿಸಿದರು. ಮೋದಿ ಹಠಾವ್​ ದೇಶ್ ಬಚಾವ್​, ವಕ್ಫ್​ ಕಾಯ್ದೆ ನಮ್ಮ ಹಕ್ಕು ನಮ್ಮ ಗುರುತು, ಎಂಬ ಭಿತ್ತಿ ಪತ್ರ ಹಿಡಿದು  ಸಾವಿರಾರೂ ಮುಸ್ಲಿಂ ಭಾಂದವರು ರಸ್ತೆಯಲ್ಲಿ ಸಾಗಿದರು. ಪ್ರತಿಭಟನೆ ವೇಳೆ ತಿರಂಗ ಪ್ಲಾಗ್ ಗಳು ಎಲ್ಲಡೆ ​ ರಾರಾಜಿಸಿದವು. ಮೆರವಣಿಗೆಯ ನಂತರ ಡಿಸಿ ಕಚೇರಿ ಮುಂಭಾಗದ ಸರ್ ಎಂ ವಿಶ್ವೇಶ್ವರಯ್ಯ ರಸ್ತೆಯಲ್ಲಿ ಸಭೆ ನಡೆಸಲಾಯಿತು. ಈ ವೇಳೆ ಮುಸ್ಲಿಂ ಮುಖಂಡರು ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನ ಮಂತ್ರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿದರು. 

waqf bill protest : ಕೇಂದ್ರ ಸರ್ಕಾರಕ್ಕೆ ಪ್ರತಿಭಟನಾಕಾರರ ಆಗ್ರಹಗಳೇನು

  • ವಕ್ಫ್ ತಿದ್ದುಪಡಿ ಕಾಯ್ದೆ 2025 ನ್ನು ತಕ್ಷಣ ರದ್ದುಗೊಳಿಸಬೇಕು. 
  • 1995 ರ ವಕ್ಫ್ ಕಾಯ್ದೆಯ ರಕ್ಷಣೆಯನ್ನು ಮರು ಸ್ಥಾಪಿಸಬೇಕು
  • ಎಲ್ಲಾ ಧಾರ್ಮಿಕ ಸಂಸ್ಥೆಗಳಿಗೆ ಸಮಾನ ನೀತಿಯನ್ನು ಖಾತರಿಪಡಿಸಬೇಕು.
  • ಭಾರತದ ಜಾತ್ಯಾತೀತ ಚೈತನ್ಯವನ್ನು ರಕ್ಷಿಸಬೇಕು
  • ಕೇಂದ್ರ ಸರ್ಕಾರ ಮುಸ್ಲಿಂ ಸಮುದಾಯದ ಭಾವನೆಗಳನ್ನು ಗೌರವಿಸಬೇಕು. 
  • ರಾಜ್ಯ ಮತ್ತು ಕೇಂದ್ರ ವಕ್ಫ್ ಮಂಡಳಿಗಳಲ್ಲಿ ಕಡ್ಡಾಯವಾಗಿ ಮುಸ್ಲಿಮರೇತರರನ್ನು ಕಡ್ಡಾಯವಾಗಿ ಸೇರಿಸುವುದು, ಸಂವಿಧಾನದ 26 ನೇ ವಿಧಿಯನ್ನು‌ ಉಲ್ಲಂಘಿಸುತ್ತದೆ
  • ಜಿಲ್ಲಾಧಿಕಾರಿಗಳೇ ನಿರ್ಧರಿಸುವ ಅಧಿಕಾರ ನೀಡುವುದು ವಕ್ಫ್ ಮಂಡಳಿ ಸ್ವಾಯತ್ತತೆಗೆ ಧಕ್ಕೆ ತರುತ್ತದೆ.
  • ವಕ್ಫ್ ರಚನೆಗೆ ನೊಂದಾಯಿತ ದಾಖಲೆ ಕಡ್ಡಾಯಗೊಳಿಸಬೇಕು
  • ವಕ್ಫ್ ಬೈ ಯೂಸರ್ ಪದ್ಧತಿ ರದ್ಧತಿಗೆ ಆಗ್ರಹ
  • ವಕ್ಫ್ ಸೃಷ್ಟಿಸಲು 5 ವರ್ಷಗಳ ಕಾಲ ಇಸ್ಲಾಂ ಅನುಸರಿಸಬೇಕೆಂಬ ನಿಯಮ ತೆಗೆಯಬೇಕು
  • ಪರಿಶಿಷ್ಟ ಮುಸಲ್ಮಾನರಿಗೆ ವಕ್ಫ್ ರಚಿಸಲು ನಿರಾಕರಿಸಬಾರದು ಎಂದು ಮುಸ್ಲಿಂ ಸಮುದಾಯದವರು ಮನವಿ ಪತ್ರದಲ್ಲಿ ಆಗ್ರಹಿಸಿದ್ದಾರೆ. 

ಪ್ರತಿಭಟನೆಯಲ್ಲಿ ಸಾವಿರಾರು ಮುಸ್ಲಿಂ ಭಾಂದವರು ಭಾಗವಹಿಸಿದ್ದರು. ಮುನ್ನೆಚ್ಚರಿಗೆ ಕ್ರಮವಾಗಿ ನಗರದಲ್ಲಿ  ಬೀಗಿ ಪೊಲೀಸ್ ಬಂಧೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ನಗರದ ಹಲವು ರಸ್ತೆಗಳಲ್ಲಿ ಬ್ಯಾರಿಗೇಡ್​ ಹಾಕಿ ಬಿಗಿ ಬಂದೋಬಸ್ತ್​ ಏರ್ಪಡಿಸಿದ್ದರು. ಪ್ರತಿಭಟನೆ ಕಾರಣದಿಂದ ಶಿವಮೊಗ್ಗದೆ ನಗರದ ಕೆಲ ರಸ್ತೆಗಳಲ್ಲಿ ಕೆಲ ಸಮಯ ಟ್ರಾಫಿಕ್​ ಜಾಮ್​ ಉಂಟಾಗಿ, ಸಾರ್ವಜನಿಕರು ಪರದಾಡಬೇಕಾಯಿತು. 

TAGGED:
Share This Article