Bhadravati news today : ಪಹಲ್ಗಾಮ್ ಘಟನೆ ಬೆನ್ನಲ್ಲೆ ಆ ಘಟನೆಯನ್ನು ನೋಡಿ ಸಂತೋಷ ಪಡುವಂತಹ ಮತ್ತು ಅದನ್ನು ಬಳಸಿ ಪ್ರಚೋದಿಸುವಂತಹ ಸೋಶೀಯಲ್ ಮೀಡಿಯಾ ಪೋಸ್ಟ್ಗಳು ಹಲವೆಡೆ ಕಂಡು ಬರುತ್ತಿದೆ. ಜೊತೆಯಲ್ಲಿಯೇ ಈ ರೀತಿಯ ಫೋಸ್ಟ್ ಗಳನ್ನು ಹಾಕುವವರನ್ನು ಪೊಲೀಸರು ಬಂಧಿಸುತ್ತಿದ್ದಾರೆ. ಇದಕ್ಕೆ ಪೂರಕ ಎಂಬಂತಹ ಘಟನೆ ಭದ್ರಾವತಿಯಲ್ಲಿ ನಡೆದಿದೆ.
Bhadravati news today/ ಸುಮುಟೋ ಕೇಸ್
ಇಲ್ಲಿನ ಪೊಲೀಸ್ ಠಾಣೆಯೊಂದರಲ್ಲಿ ಪ್ರಚೋದನಕಾರಿ ವಿಡಿಯೋ ಮೂಲಕ ದ್ವೇಷ ಬಿತ್ತುವ ಪ್ರಯತ್ನದ ಆರೋಪಕ್ಕೆ ಸಂಬಂಧಿಸಿದಂತೆ ಸುಮುಟೋ ಕೇಸ್ ದಾಖಲಿಸಲಾಗಿದೆ.
ಪೊಲೀಸರು ಸೋಶಿಯಲ್ ಮೀಡಿಯಾ ಮಾನಿಟಿರಿಂಗ್ ಸೆಲ್ ಮೂಲಕ ವಿವಿಧ ಸೋಶಿಯಲ್ ಮೀಡಿಯಾ ಅಕೌಂಟ್ಗಳನ್ನು ಪರಿಶೀಲಿಸುತ್ತಿದ್ದ ಸಂದರ್ಭದಲ್ಲಿ ಪೊಲೀಸರಿಗೆ ಪಾಕಿಸ್ತಾನದ ಹೆಸರು ಬಳಸಿಕೊಂಡು ಪ್ರಚೋದನಕಾರಿ ವಿಡಿಯೋ ಮಾಡಿರುವುದು ಕಾಣಿಸಿದೆ.
ಈ ಸಂಬಂಧ ಬಿಎನ್ಎಸ್ ಆಕ್ಟ್ ಅಡಿಯಲ್ಲಿ ಪಾಕಿಸ್ತಾನದ ಹೆಸರು ಬಳಸಿ ವಿಡಿಯೊ ಮಾಡಿ ಧಾರ್ಮಿಕವಾಗಿ ಎರಡು ಸಮುದಾಯಗಳ ನಡುವೆ ದ್ವೇಷ ಬಿತ್ತಲು ಯತ್ನಿಸಿದ ಆರೋಪದ ಅಡಿಯುಲ್ಲಿ ಇಬ್ಬರ ವಿರುದ್ಧ ಸ್ವಯಂಪ್ರೇರಿತ ಅಂದರೆ ಸುಮುಟೋ ಕೇಸ್ ದಾಖಲಿಸಲಾಗಿದೆ.