Protests Against kashmir Attack | ಶಿವಮೊಗ್ಗ : ಕಾಶ್ಮೀರದಲ್ಲಿ ಶಿವಮೊಗ್ಗ ಉದ್ಯಮಿ ಮಂಜುನಾಥ್ ರಾವ್ ರನ್ನು ಭಯೋತ್ಪಾದಕರು ಗುಂಡಿಟ್ಟು ಹತ್ಯೆ ಮಾಡಿದ್ದನ್ನು ಖಂಡಿಸಿ ಶಿವಮೊಗ್ಗದಲ್ಲಿ ಇಂದು ಮರ್ಕಜಿ ಸುನ್ನಿ ಜಾಮಿಯಾ ಮಸ್ಜಿದ್ ಸಂಘಟನೆಯ ಸದಸ್ಯರು ಪ್ರತಿಭಟನೆ ನಡೆಸಿದರು. ಜಿಲ್ಲಾಧಿಕಾರಿ ಕಚೇರಿ ಮುಂಬಾಗದಲ್ಲಿ ಪ್ರತಿಭಟನಾಕಾರರು ಪ್ರತಿಭಟನೆ ನಡೆಸಿ ಉಗ್ರಗಾಮಿಗಳನ್ನು ಗಲ್ಲಿಗೆ ಏರಿಸುವಂತೆ ಒತ್ತಾಯಿಸಿದರು.
Protests Against kashmir Attack ಕೊಲ್ಲುವವರಿಗೆ ಹಾಗು ಭಯೋತ್ಪಾದಕರಿಗೆ ಯಾವುದೇ ಧರ್ಮವಿಲ್ಲ
ಈ ವೇಳೆ ಮರ್ಕಜಿ ಸುನ್ನಿ ಜಾಮಿಯಾ ಮಸ್ಜಿದ್ ಪ್ರಮುಕರು ಮಾತನಾಡಿ ಇದೊಂದು ನಾಗರಿಕ ಸಮಾಜ ತಲೆ ತಗ್ಗಿಸುವಂತಹ ಘಟನೆ. ಈ ಸಂದರ್ಭದಲ್ಲಿ ನಾವು ಮೃತ ಮಂಜುನಾಥ್ ಕುಟುಂಬಕ್ಕೆ ಸಾಂತ್ವನ ಹೇಳುತ್ತಿದ್ದೇವೆ. ನಮ್ಮ ನಾಗರಿಕ ಸಮಾಜ ಎಂದಿಗೂ ಸಹ ಅವರೊಂದಿಗೆ ಇರುತ್ತದೆ. ಯಾವುದೇ ಧರ್ಮವಾಗಲಿ ಒಬ್ಬ ಮನುಷ್ಯನನ್ನು ಕೊಲ್ಲು ಎಂದು ಹೇಳುವುದಿಲ್ಲ. ಕೊಲ್ಲುವವರಿಗೆ ಹಾಗೂ ಭಯೋತ್ಪಾದಕರಿಗೆ ಯಾವುದೇ ಧರ್ಮವಿಲ್ಲ. ಅಧರ್ಮಿಯವಾಗಿ ನಡೆಯುತ್ತಿರುವವರು ಅಧರ್ಮಿಯರಾಗಿಯೇ ಸಾಯುತ್ತಾರೆ. ಈ ಹೇಯ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಈ ವೇಳೆ ಪ್ರತಿಭಟನಾಕಾರರು ಅಮರ್ ರಹೇ ಅಮರ್ ರಹೇ ಮಂಜುನಾಥ್ ರಾವ್ ಎಂದು ಘೋಷಣೆ ಕೂಗಿದರು.