ಮಲೆನಾಡು ಟುಡೆ ಸುದ್ದಿ, ಸೆಪ್ಟೆಂಬರ್ 13, 2025, ಶಿವಮೊಗ್ಗದಲ್ಲಿ ಶೇಕಡಾ ಐವತ್ತು ಪರ್ಸೆಂಟ್ ರಿಯಾಯಿತಿಯಲ್ಲಿ ಟ್ರಾಫಿಕ್ ಫೈನ್ ಕಟ್ಟಲು ನೀಡಿದ ಅವಕಾಶ ಉಪಯೋಗಕ್ಕೆ ಬಂದಿದೆ. ಉಳಿದೆಲ್ಲೆಡೆಗಿಂತಲೂ ಶಿವಮೊಗ್ಗದಲ್ಲಿ ಹೆಚ್ಚು ಫೈನ್ ಹಾಕುತ್ತಾರೆ ಎಂಬ ಜನರ ದೂರಿಗೂ ಪೂರಕ ಎಂಬಂತೆ ಕಳೆದ 21 ದಿನಗಳಲ್ಲಿ 2 ಕೋಟಿಗೂ ಅಧಿಕ ದಂಡ ಸಂಗ್ರಹವಾಗಿದೆ. ಕೊನೆದಿನವಾದ ನಿನ್ನೆ ದಿನ ಟ್ರಾಫಿಕ್ ಫೈನ್ ಕಟ್ಟಲು ಸಹ ಕ್ಯೂ ನಿರ್ಮಾಣವಾಗಿತ್ತು. ಈ ಹಿಂದೆ ಜನರು ಯಾವುದೆಕ್ಕೆಲ್ಲಾ ಸರತಿ ಸಾಲಿನಲ್ಲಿ ನಿಂತಿದ್ದರು ಎಂಬ ವಿಚಾರಗಳು ವೈರಲ್ ಆಗಿದ್ದವು. ಇದೀಗ ಟ್ರಾಫಿಕ್ ಫೈನ್ ಕಟ್ಟಲು ಸಹ ಸರತಿ ಸಾಲು ನಿಂತಿರುವ ದೃಶ್ಯಗಳು ಅಚ್ಚರಿ ಮೂಡಿಸಿದ್ದವು.

ಶಿವಮೊಗ್ಗ ಸೀನಪ್ಪಶೆಟ್ಟಿ ವೃತ್ತ ಸೇರಿದಂತೆ ವಿವಿಧ ಸರ್ಕಲ್ಗಳಲ್ಲಿ ಸಂಚಾರಿ ನಿಯಮ ಉಲ್ಲಂಘನೆಯ ಪ್ರಕರಣಗಳನ್ನು ಬಾಕಿ ಉಳಿಸಿಕೊಂಡಿದ್ದ ವಾಹನ ಸವಾರರು 50 ರಷ್ಟು ರಿಯಾಯಿತಿಯೊಂದಿಗೆ ದಂಡ ಕಟ್ಟಿ ಬಾಕಿ ಕ್ಲಿಯರ್ ಮಾಡಿಕೊಂಡಿದ್ದಾರೆ. ನಿನ್ನೆ ಒಂದೆ ದಿನ 11918 ಪ್ರಕರಣ ಇತ್ಯರ್ಥ ಕಂಡಿದ್ದು, 504450 ರೂಪಾಯಿ ದಂಡ ಸಂಗ್ರಹವಾಗಿದೆ. ಮೊನ್ನೆ ದಿನ308000 ದಂಡ ಸಂಗ್ರಹವಾಗಿತ್ತು. ಒಟ್ಟಾರೆ 21 ದಿನಗಳಲ್ಲಿ 2,09,38,750 ರೂಪಾಯಿ ದಂಡ ಸಂಗ್ರಹವಾಗಿದೆ ಎಂದು ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ನೀಡಿದೆ. ವಿಶೇಷ ಅಂದರೆ, ರಾತ್ರಿಯಾದರೂ ಟ್ರಾಫಿಕ್ ಫೈನ್ ಕಟ್ಟುವವರ ಸಂಖ್ಯೆ ಕಡಿಮೆಯಾಗಿರಲಿಲ್ಲ. ಅಲ್ಲಿ ಇಲ್ಲಿ ಹಣ ಅಡ್ಜೆಸ್ಟ್ ಮಾಡಿಕೊಂಡು ಬಂದ ಮಂದಿ ಸರತಿಸಾಲಿನಲ್ಲಿ ದಂಡ ಕಟ್ಟಿ, ನಿಟ್ಟುಸಿರು ಬಿಟ್ಟರು.
ಶಿವಮೊಗ್ಗ ಟ್ರಾಫಿಕ್ ಫೈನ್ ರಿಯಾಯಿತಿ, ಟ್ರಾಫಿಕ್ ಫೈನ್ ಡಿಸ್ಕೌಂಟ್ ಕರ್ನಾಟಕ, ಟ್ರಾಫಿಕ್ ಫೈನ್ ಪಾವತಿ, ದಂಡ ರಿಯಾಯಿತಿ, ಸಂಚಾರಿ ನಿಯಮ ಉಲ್ಲಂಘನೆ, Shivamogga traffic fine discount, 50% fine discount, traffic police fines, Karnataka traffic rules, pending traffic challans. #TrafficFines, #DiscountOffer, #Shivamogga, #PoliceDepartment, #TrafficRules.



ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ, ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook, whatsapp, whatsapp chanel , instagram, youtube, telegram , google business, malenadu today epaper, malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!