SHIVAMOGGA | MALENADUTODAY NEWS | ಮಲೆನಾಡು ಟುಡೆ | Mar 21, 2025

ಶಿವಮೊಗ್ಗ | ಮಹಿಳೆಯೊಬ್ಬರು ಬಂಗಾರದ ಅಂಗಡಿಯಲ್ಲಿ ಬಂಗಾರ ಖರೀದಿಸಿ ಸಿಟಿ ಬಸ್ ನಲ್ಲಿ ಮನೆಗೆ ಹೋಗಿ ನೋಡಿದಾಗ ಮಹಿಳೆಗೆ ದೊಡ್ಡದೊಂದು ಆಘಾತ ಎದುರಾಗಿದೆ. ಅದೇನೆಂದರೆ. ಮಹಿಳೆ ಬ್ಯಾಗಿನಿಂದ ಕಳ್ಳರು ಲಕ್ಷಾಂತರ ಮೌಲ್ಯದ ಬಂಗಾರವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ. ಈ ಹಿನ್ನಲೆ ಮಹಿಳೆ ವಿನೋಬಾ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಈ ಸಂಬಂಧ ಪ್ರಕರಣ ದಾಖಲಾಗಿದೆ.
ಏನಿದು ಘಟನೆ

ನಾಗರತ್ನಮ್ಮ ಎನ್ನುವವರು. ಹೊಸ ಮಾಂಗಲ್ಯ ಸರವನ್ನು ತೆಗೆದುಕೊಳ್ಳಲು ಗೋಪಿ ವೃತ್ತದಲ್ಲಿರುವ ಆಭರಣ ಜ್ಯೂವೆಲರ್ಸ್ ಅಂಗಡಿಗೆ ತೆರಳಿದ್ದರು. ಆ ಅಂಗಡಿಯಲ್ಲಿ 1.93 ಲಕ್ಷ ಮೌಲ್ಯದ 21 ಗ್ರಾಂ ತೂಕದ ಮಾಂಗಲ್ಯ ಸರ ಹಾಗೂ ಅದಕ್ಕೆ 7 ಗ್ರಾಂ ತೂಕದ ತಾಳಿ, ಲಕ್ಷ್ಮಿ ಕಾಸು, ಗುಂಡುಗಳನ್ನು ಜ್ಯೂವೆಲರಿ ಅಂಗಡಿಯಲ್ಲೇ ಕೊಂಡು ಕೊಂಡಿದ್ದರು. ಒಟ್ಟು 2.50 ಲಕ್ಷದ ಆಭರಣವನ್ನು ಬ್ಯಾಗಿನಲ್ಲಿ ಇರಿಸಿಕೊಂಡು ಸಿಟಿ ಬಸ್ ಹತ್ತಿ ಅಲ್ಲಿಂದ ಗಾಂಧಿ ಬಜಾರ್ಗೆ ಹೋಗಿದ್ದರು. ನಂತರ ಎಸ್.ಎನ್.ಸರ್ಕಲ್ನಲ್ಲಿ ಸಿಟಿ ಬಸ್ ಹತ್ತಿದ್ದರು. ಈ ಬಸ್ಸು ಬಸ್ ನಿಲ್ದಾಣದವರೆಗೆ ಹೋಗಿ ತಿರುಗಿ ಮಾರುಕಟ್ಟೆಗೆ ಬಂದಿತ್ತು. ಈ ವೇಳೆಯಲ್ಲೆ ಚಿನ್ನದ ಸರ ಕಳುವಾಗಿರುವ ಕುರಿತು ಮಹಿಳೆ ಶಂಕೆ ವ್ಯಕ್ತಪಡಿಸಿದ್ದಾರೆ. ಈ ಹಿನ್ನಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗಾಗಿ ಶೋಧ ನಡೆಸುತ್ತಿದ್ದಾರೆ.
SUMMARY | The thieves stole gold worth lakhs of rupees from the woman’s bag.
KEYWORDS | thieves, stole gold, woman, shivamogga,