112 Helpline : ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ನ್ಯೂಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಬಸ್ ನಿಲ್ದಾಣ ಮಹಿಳೆಯೊಬ್ಬರು ತನ್ನ ಮಗುವಿನ ಜೊತೆಗೆ ಕಣ್ಣೀರು ಹಾಕುತ್ತಾ ಕುಳಿತಿದ್ದರು. ಈ ಬಗ್ಗೆ ವಿಷಯ ತಿಳಿದು ಸಂಕಷ್ಟದಲ್ಲಿದ್ದ ತಾಯಿ ಮತ್ತು ಮಗುವಿಗೆ ಪೊಲೀಸರು ನೆರವಾಗಿ ಮಾನವೀಯತೆ ಮೆರೆದಿದ್ದಾರೆ.
112 Helpline ನಡೆದಿದ್ದೇನು?
ಇಲ್ಲಿನ ಬಸ್ ನಿಲ್ದಾಣದಲ್ಲಿ ಮಹಿಳೆಯೊಬ್ಬರು ಮಗುವಿನೊಂದಿಗೆ ಅಳುತ್ತಾ ಕುಳಿತಿರುವ ಬಗ್ಗೆ 112 ಸಹಾಯವಾಣಿಗೆ ಸಾರ್ವಜನಿಕರೊಬ್ಬರು ಕರೆ ಮಾಡಿದ್ದರು. ಕರೆಯ ವಿವರ ಆಲಿಸಿ ಸ್ಥಳಕ್ಕೆ ಬಂದ ನ್ಯೂಟೌನ್ ಠಾಣೆಯ ಸಿಬ್ಬಂದಿಗಳಿಗೆ ಮಹಿಳೆಯ ಬಗ್ಗೆ ಮಾಹಿತಿ ಸಿಕ್ಕಿದೆ. ತಕ್ಷಣವೇ ಆಕೆಯ ಬಳಿಗೆ ಹೋದ ಸಿಬ್ಬಂದಿ ಮಹಿಳೆಯನ್ನು ವಿಚಾರಿಸಿದ್ದಾರೆ. ಆಗ ಮಹಿಳೆ ಕೌಟುಂಬಿಕ ಸಮಸ್ಯೆಯಿಂದ ತೀವ್ರವಾಗಿ ನೊಂದಿರುವುದಾಗಿ ತಿಳಿಸಿದ್ದಾರೆ. ಕಷ್ಟದಲ್ಲಿದ್ದ ಮಹಿಳೆಯ ಮಾತನ್ನು ಆಲಿಸಿದ ಪೊಲೀಸ್ ಸಿಬ್ಬಂದಿ, ಮಹಿಳೆಗೆ ದೈರ್ಯ ತುಂಬಿದಿದ್ದಾರೆ.
ನಂತರ, ಮಹಿಳೆ ಮತ್ತು ಮಗುವನ್ನು ಸುರಕ್ಷಿತವಾಗಿ ಮಹಿಳಾ ಸಾಂತ್ವಾನ ಕೇಂದ್ರಕ್ಕೆ ಬಿಟ್ಟುಬಂದಿದ್ದಾರೆ. ಅಲ್ಲದೆ ನ್ಯೂಟೌನ್ ಪೊಲೀಸ್ ಠಾಣೆಗೆ ಮಾಹಿತಿ ಒದಗಿಸಿದ್ದಾರೆ. ಪ್ರತಿದಿನ ಇಂತಹ ಬಹಳಷ್ಟು ಘಟನೆಗಳಲ್ಲಿ ಪೊಲೀಸರು ಸಾರ್ವಜನಿಕರಿಗೆ ನೆರವಾಗುತ್ತಾರೆ. ಈ ಬಗ್ಗೆ ಹೆಚ್ಚು ಸುದ್ದಿಯಾಗುವುದಿಲ್ಲ. ಇದೀಗ ನ್ಯೂಟೌನ್ ಪೊಲೀಸ್ ಠಾಣೆ ವ್ಯಾಪ್ತಿ 112 ಸಿಬ್ಬಂದಿ ಸಹ ತಮ್ಮ ಡ್ಯೂಟಿ ಮುಗಿಸಿ, ತೃಪ್ತ ಭಾವದಿಂದಿದ್ದಾರೆ. ಆದರೆ, ಅವರು ಮಾಡಿರುವ ಕೆಲಸವು ಶ್ಲಾಘನೆಗೆ ಅರ್ಹವಾಗಿದ್ದು. ಇನ್ನೊಂದು ವಿಚಾರವೆಂದರೆ, ಏನೇ ಸಮಸ್ಯೆಗಳಿದ್ದರೂ, ಸಂಕಷ್ಟದಲ್ಲಿ 112 ನಂಬರ್ ನೆನಪು ಮಾಡಿಕೊಳ್ಳಿ.

