SHIVAMOGGA | MALENADUTODAY NEWS | ಮಲೆನಾಡು ಟುಡೆ
Oct 8, 2024 | SHIVAMOGGA RAILWAY NEWS |
ಮೈಸೂರಿನಿಂದ ಸೊಲ್ಲಾಪುರಕ್ಕೆ ಹೋಗುವ ಟ್ರೈನ್ ಹತ್ತಿದ್ದ ಯುವಕನೊಬ್ಬ ಆ ಟ್ರೈನ್ ಬ್ಯಾಡಗಿಯಲ್ಲಿ ನಿಲ್ಲಿಸುವುದಿಲ್ಲ ಎಂದು ತಿಳಿದು ಕೆಳಕ್ಕೆ ಇಳಿಯಲು ಹೋಗಿ ಜೀವಕ್ಕೆ ಅಪಾಯ ತಂದುಕೊಳ್ಳುತ್ತಿದ್ದ ಘಟನೆ ದಾವಣಗೆರೆಯ ರೈಲು ನಿಲ್ದಾಣದಲ್ಲಿ ನಡೆದಿದೆ. ಈ ವೇಳೆ ಆರ್‌ಪಿಎಫ್ ಪೊಲೀಸ್ ಮುಖ್ಯ ಪೇದೆ ಆ ಯುವಕನ ಜೀವ ಕಾಪಾಡಿದ್ದಾರೆ.
ದಾವಣಗೆರೆ ರೈಲು ನಿಲ್ದಾಣದಲ್ಲಿ ಮೈಸೂರು ಟು ಸೊಲ್ಲಾಪುರ ಟ್ರೈನ್ ಹೊರಟಿತ್ತು. ಈ ವೇಳ ಆ ಟ್ರೈನ್ ಹತ್ತಿದ್ದ ಯುವಕ ಬ್ಯಾಡಗಿ ಸ್ಟಾಪ್ ಇದೆಯಾ ಎಂದು ವಿಚಾರಿಸಿದ್ದಾರೆ. ಇಲ್ಲ ಎನ್ನುತ್ತಲೇ ಹೋಗುತ್ತಿದ್ದ ಟ್ರೈನ್ ಕೆಳಕ್ಕೆ ಇಳಿಯಲು ಮುಂದಾಗಿದ್ದಾನೆ. ಆಗ ಆಯ ತಪ್ಪಿ ಬಿದ್ದಿದ್ದ ಅಷ್ಟರಲ್ಲಿ ಅಲ್ಲಿದ್ದ ಪೇದೆ ಸತೀಶ್ ಯುವಕನನ್ನ ಇನ್ನೊಂದು ಬದಿಗೆ ಎಳೆದು ಜೀವ ಉಳಿಸಿದ್ದಾರೆ.
ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕನಿಗೆ ಸಹಾಯ
ಇತ್ತ ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ಪ್ಲಾಟ್‌ಫಾರಮ್‌ನಲ್ಲಿ ಎಡವಿ ಕಾಲಿಗೆ ಪೆಟ್ಟು ಮಾಡಿಕೊಂಡ ಪ್ರಯಾಣಿಕರೊಬ್ಬರಿಗೆ ರೈಲ್ವೆ ಪೊಲೀಸರು ತುರ್ತು ಸಹಾಯವನ್ನ ಒದಗಿಸಿದ್ದಾರೆ. ಅವರನ್ನ ತಕ್ಷಣವೇ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಿ, ಸೂಕ್ತ ಪ್ರಾಥಮಿಕ ಚಿಕಿತ್ಸೆ ಒದಗಿಸಲಾಗಿದೆ. ಈ ಸಂಬಂಧ ಆರ್‌ಪಿಎಫ್ ತನ್ನ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಬರೆದುಕೊಂಡಿದೆ.


RPF staff rescued passenger pic.twitter.com/GObfan5N3d
— malenadutoday.com (@malnadtoday) October 8, 2024
SUMMARY | MissionJeevanRaksha RPF-Davangere saved the life of one passenger who suddenly jumped from the moving train and went in the gap between PF and train no 16535. Immediately on duty, RPF staff rescued the said passenger and saved his life. @rpf_india_offic
KEYWORDS | MissionJeevanRaksha , RPF-Davangere , saved the life of one passenger, jumped from the moving train, train no 16535, RPF staff rescued passenger, Shivamogga railway station