SHIVAMOGGA | MALENADUTODAY NEWS | ಮಲೆನಾಡು ಟುಡೆ | Apr 11, 2025
ಶಿವಮೊಗ್ಗ | ಸರ್ಜಿ ಫೌಂಡೇಶನ್ ಮತ್ತು ಸ್ಪರ್ಧಾ ಲೈನ್ಸ್ ಸಂಸ್ಥೆಗಳು ಜಂಟಿಯಾಗಿ ಸರ್ಜಿ ಸ್ಕಾಲರ್ಶಿಪ್ ಟೆಸ್ಟ್ ಎಂಬ ಶೀರ್ಷಿಕೆಯ ಅಡಿಯಲ್ಲಿ ದಿನಾಂಕ 11 ಮೇ 2025 ರಂದು ಕೆಎಎಸ್ ಹಾಗೂ ಐಎಎಸ್ ಪರೀಕ್ಷೆ ಬರೆಯಲು ಇಚ್ಛಿಸುವ ಆಕಾಂಕ್ಷಿಗಳಿಗೆ ಸ್ಕಾಲರ್ಶಿಪ್ ಟೆಸ್ಟ್ ನಡೆಸಲಾಗುವುದು ಎಂದು ವಿಧಾನ ಪರಿಷತ್ ಶಾಸಕರಾದ ಡಾ. ಧನಂಜಯ್ ಸರ್ಜಿ ತಿಳಿಸಿದರು.
ಇಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಕರ್ನಾಟಕ ಲೋಕಸೇವಾ ಆಯೋಗ ನಡೆಸುವ ಕೆಎಎಸ್ ಪರೀಕ್ಷೆ ಬರೆದು ರಾಜ್ಯ ಸೇವೆಗೆ ಸೇರಬೇಕು. ಅಥವಾ ಬ್ಯಾಂಕಿಂಗ್ ಪರೀಕ್ಷೆ ಬರೆದು ಉತ್ತಮ ಸಂಬಳದ ಜಾಬ್ ಪಡೆಯಬೇಕು ಎಂಬ ಇಂತಹ ಕನಸು ಹೊತ್ತ ಮನಸ್ಸುಗಳ ಸಂಖ್ಯೆ ರಾಜ್ಯದಲ್ಲಿ ಕಡಿಮೆ ಏನಿಲ್ಲ. ಪ್ರತಿ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಕೇಂದ್ರಗಳಲ್ಲಿ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳ ದಂಡು ರಾಜ್ಯದ ಪ್ರತಿ ಕೇಂದ್ರಗಳಲ್ಲೂ ತುಂಬಿಯೇ ಇರುತ್ತವೆ. ಆದರೆ ಕೆಲವರಿಗೆ, ಬಡತನ ಹಿನ್ನೆಲೆಯ ಉದ್ಯೋಗ ಆಕಾಂಕ್ಷಿಗಳಿಗೆ ಪರೀಕ್ಷೆ ತರಬೇತಿ ಕೇಂದ್ರಗಳು ಕೇಳುವ ಶುಲ್ಕ ಬರಿಸಲು ಸಾಧ್ಯವಾಗದೇ, ಇತ್ತ ಸ್ವಯಂ ಮಾರ್ಗದರ್ಶನವು ಸಾಲದೇ ಸಮಸ್ಯೆ ಎದುರಿಸುವ ಅಭ್ಯರ್ಥಿಗಳಿಗೆ ಉತ್ತಮ ಅವಕಾಶ ಕಲ್ಪಿಸಲು ಹೊರಟಿದ್ದೇವೆ
ವರದಿಗಳ ಪ್ರಕಾರ ನಮ್ಮ ರಾಜ್ಯದಲ್ಲಿ ಪ್ರತಿ ವರ್ಷ ಸುಮಾರು 1,50,000 ದಿಂದ 2,00,000 ಅಭ್ಯರ್ಥಿಗಳು ಕೆ.ಪಿ.ಎಸ್.ಸಿ ಪರೀಕ್ಷೆಗೆ ಅರ್ಜಿ ಹಾಕುತ್ತಾರೆ ಇದರಲ್ಲಿ 10,000 ದಿಂದ 12,000 ಅಭ್ಯರ್ಥಿಗಳು ಪ್ರಿಲಿಮ್ಸ್ ಪರೀಕ್ಷೆ ಕ್ಲಿಯರ್ ಮಾಡಿದರೆ 1,500 ದಿಂದ 2,000 ಅಭ್ಯರ್ಥಿಗಳು ಮೈನ್ಸ್ ಕ್ಲಿಯರ್ ಮಾಡಿ 300 ರಿಂದ 400 ಅಭ್ಯರ್ಥಿಗಳು ಆಯ್ಕೆಯಾಗುತ್ತಾರೆ. ಇದರಲ್ಲಿ ಒಂದುವರೆ ಲಕ್ಷ ಅಭ್ಯರ್ಥಿಗಳು ಸರಿಯಾದ ಮಾರ್ಗದರ್ಶನ ಇಲ್ಲದೆ, ಗುಣಮಟ್ಟದ ತರಬೇತಿ ಇಲ್ಲದೆ ಪರೀಕ್ಷೆಗೆ ಸರಿಯಾದ ಪೂರ್ವಸಿದ್ಧತೆ ಇಲ್ಲದೆ ಹಲವಾರು ಅಭ್ಯರ್ಥಿಗಳು ವಿಫಲರಾಗುತ್ತಾರೆ.
ಯು.ಪಿ.ಎಸ್.ಸಿ ಮತ್ತು ಕೆ.ಪಿ.ಎಸ್.ಸಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೇರ್ಗಡೆಯಾಗಬೇಕು ಅಂದರೆ ಸುಮಾರು 11 ರಿಂದ 18 ತಿಂಗಳ ಸಮಗ್ರ ಅಧ್ಯಯನ ಅಗತ್ಯವಾಗಿರುತ್ತದೆ. ಪರೀಕ್ಷೆಗೆ ಬೇಕಾದ ಸ್ಟಾರ್ಟರ್ಜಿ ಇರಬೇಕು, ತಜ್ಞರಿಂದ ನಿಖರ ಮಾರ್ಗದರ್ಶನ ಬೇಕಾಗುತ್ತದೆ ಇವುಗಳಿಗೆ ಅಭ್ಯರ್ಥಿಗಳು ತರಬೇತಿ ಪಡೆಯಲು ಹೋದರೆ 2 ರಿಂದ 3 ಲಕ್ಷ ಫೀಸ್ ಕಟ್ಟಬೇಕಾಗುತ್ತದೆ, ಅದರಲ್ಲಿ ಅವರ ಸ್ಟಡಿ ಮೆಟಿರಿಯಲ್ ನಿಯತಕಾಲಿಕೆಗಳಿಗೆ ಅಂತ 50 ಸಾವಿರದಿಂದ 1 ಲಕ್ಷ ಖರ್ಚಾಗುತ್ತದೆ. ಹಾಗಾಗಿ ನಮ್ಮ ಸರ್ಜಿ ಫೌಂಡೇಶನ್ ಈ ಸ್ಕಾಲರ್ಶಿಪ್ ಟೆಸ್ಟ್ ನಡೆಸಿ ಇದರಲ್ಲಿ ಆಯ್ಕೆಯಾಗುವ ಪ್ರತಿಭೆ ಇರುವ ಪ್ರತಿಭಾವಂತ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಅವರಿಗೆ ಸೂಕ್ತವಾದ ಮಾರ್ಗದರ್ಶನ ಮಾಡುವಲ್ಲಿ ಈ ಸ್ಕಾಲರ್ಶಿಪ್ ಟೆಸ್ಟ್ ಉಪಯುಕ್ತವಾಗುತ್ತದೆ. ಈ ಸ್ಕಾಲರ್ ಶಿಪ್ ಗೆ ನೈಋತ್ಯ ಪದವೀಧರರ ಕ್ಷೇತ್ರಗಳಾದ ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣಕನ್ನಡ, ಕೊಡಗು, ಉಡುಪಿ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಪರೀಕ್ಷೆ ನೋಂದಣಿಗೆ ಮೇ 09 ಕೊನೆಯ ದಿನಾಂಕ ವಾಗಿದ್ದು. ಆ ಟೆಸ್ಟ್ ನಲ್ಲಿ ಪಾಸಾದ 100 ಜನ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ತರಬೇತಿ ಸಂದರ್ಭದಲ್ಲಿ ಅವರ ಪೂರ್ಣ ಪ್ರಮಾಣದ ಖರ್ಚನ್ನು ನಮ್ಮ ಸಂಸ್ಥೆ ಬರಿಸುತ್ತದೆ ಎಂದರು.
ಯಾರೆಲ್ಲ ಪರೀಕ್ಷೆ ಬರೆಯಬಹುದು
ಇದಕ್ಕೆ ಅರ್ಜಿ ಹಾಕಲು ಇಚ್ಛಿಸುವ ಅಭ್ಯರ್ಥಿಗಳು ರಾಜ್ಯದ ಯಾವುದೇ ವಿಶ್ವವಿದ್ಯಾಲಯದಿಂದ ಪದವಿ ಪಡೆದವರಾಗಿರಬೇಕು. ಅಂತಿಮ ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವವರು. ಪ್ರಸ್ತುತ ಕೊನೆಯ ವರ್ಷ ಸೆಮಿಸ್ಟರ್ ನಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣಕನ್ನಡ, ಕೊಡಗು, ಉಡುಪಿ ಮತ್ತು ದಾವಣಗೆರೆ ಜಿಲ್ಲೆಯವರಾಗಿರಬೇಕು.
ಈ ಕೋರ್ಸ್ ನಿಂದಾ IAS / KAS ಪರೀಕ್ಷಾ ಪೂರ್ವ ಸಿದ್ದತಾ ತಯಾರಿಕೆಗೆ 11 ತಿಂಗಳು ನಿರಂತರ ಆನ್ಲೈನ್ ಕೋರ್ಸ್ ಸಿಗುತ್ತದೆ ಹಾಗೆಯೇ N C E R T ಪಠ್ಯಧಾರಿತ ಪ್ರಮುಖ ವಿಷಯಗಳ ಆನ್ಲೈನ್ ಫೌಂಡೇಶನ್ ತರಗತಿಗಳು ನಡೆಸಲಾಗುವುದು. ಈ ತರಬೇತಿಗಳು ಕನ್ನಡ ಮತ್ತು ಇಂಗ್ಲಿಷ್ ಎರಡು ಭಾಷೆಗಳಲ್ಲಿಯೂ ನಡೆಯಲಿದ್ದು. ನುರಿತ ಮಾರ್ಗದರ್ಶಕರಿಂದ ಪರಿಕ್ಷೆಯ ಕುರಿತು ಮಾರ್ಗದರ್ಶನ ದೊರೆಯಲಿದೆ. ಬೆಂಗಳೂರಿಗೆ ಬಂದು ಅಫ್ಲೈನ್ ಕ್ಲಾಸ್ ಅಟೆಂಡ್ ಆಗಲು ಸಾಧ್ಯವಾಗದೇ ಇರುವವರಿಗೆ ಆನ್ಲೈನ್ ಕ್ಲಾಸ್‌ನ್ನು ತೆಗೆದುಕೊಳ್ಳುವ ಅವಕಾಶ ಕಲ್ಪಿಸಿದ್ದೇವೆ. ಎಂದರು
ಹೆಚ್ಚಿನ ಮಾಹಿತಿಗಾಗಿ ಅಥವಾ ಪರೀಕ್ಷಾ ನೋಂದಣಿಗೆ 7204747789 ಈ ನಂಬರ್ ಗೆ ಸಂಪರ್ಕಿಸಬಹುದು
SUMMARY | The scholarship test will be conducted on 11th May 2025 for the aspirants who wish to appear for the KAS and IAS exams under the title ‘Sergi Scholarship Test’ jointly by Sergi Foundation and Competition Lines
KEYWORDS | The scholarship, KAS, IAS exams, Sergi Scholarship, Sergi Foundation,