SHIVAMOGGA | MALENADUTODAY NEWS | ಮಲೆನಾಡು ಟುಡೆ Dec 28, 2024
ಶಿವಮೊಗ್ಗ ಪೊಲೀಸರು ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡುವವರಿಗೆ ದುಬಾರಿ ದಂಡ ಹಾಕಿಸುವುದರಲ್ಲಿ ಹೆಸರುವಾಸಿಯಾಗುತ್ತಿದ್ದಾರೆ. ಅದರಲ್ಲಿಯು ವೀಲ್ಹೀಂಗ್ ಪ್ರಕರಣಗಳನ್ನು ಸೋಶಿಯಲ್ ಮೀಡಿಯಾದಲ್ಲಿಯೇ ಹುಡುಕಿ ಫೈನ್ ಹಾಕಿಸುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಬೈಕ್ ವಿಲ್ಹೀಂಗ್ ಮಾಡಿದ ಬೈಕ್ ಸವಾರನಿಗೆ ಬರೋಬ್ಬರಿ ಆರು ಸಾವಿರ ರೂಪಾಯಿ ದಂಡವನ್ನು ಕೋರ್ಟ್ ಮೂಲಕ ಕಟ್ಟಿಸಿದ್ದಾರೆ.
ನಗರದಲ್ಲಿ ಬೈಕ್ ವೀಲಿಂಗ್ ಮಾಡಿದ್ದ ವಿದ್ಯಾರ್ಥಿಯೊಬ್ಬನಿಗೆ 6 ಸಾವಿರ ರೂಪಾಯಿ ದಂಡ ವಿಧಿಸಿ ಶಿವಮೊಗ್ಗ ಜಿಲ್ಲಾ ಪ್ರಧಾನ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಗುರುವಾರ ಆದೇಶಿಸಿದೆ. ಆರೋಪಿಯು ನಂಬರ್ ಪ್ಲೇಟ್ ಇಲ್ಲದೇ ನಗರದಲ್ಲಿ ಬೈಕ್ ಓಡಿಸುತ್ತಿದ್ದಾಗ ಪಶ್ಚಿಮ ಸಂಚಾರ ಠಾಣೆ ಪಿಎಸ್‌ಐ ತಿರುಮಲೇಶ್ ನೇತೃತ್ವದಲ್ಲಿ ತಡೆದು ವಿಚಾರಣೆ ಮಾಡಲಾಗಿದೆ. ಆ ವೇಳೆ, ಮೊಬೈಲ್ ಪರಿಶೀಲಿಸಿದಾಗ ಬೈಕ್ ವೀಲಿಂಗ್ ಮಾಡಿದ ವಿಡಿಯೊ ಚಿತ್ರೀಕರಿಸಿದ್ದು, ಇನ್ ಸ್ಟಾಗ್ರಾಂನಲ್ಲಿ ಪತ್ತೆಯಾಗಿತ್ತು. ಆತನ ವಿರುದ್ಧ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಒಪ್ಪಿಸಲಾಗಿತ್ತು.
ಸೈಬರ್ ವಂಚನೆ ಬಗ್ಗೆ ಎಚ್ಚರವಿರಲಿ, ಸೈಬರ್ ವಂಚನೆಗೆ ಒಳಗಾದಲ್ಲಿ ಕೂಡಲೇ 1930 ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ದೂರು ದಾಖಲಿಸಿ. ನಂತರ ಹತ್ತಿರದ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿ. pic.twitter.com/31foOnyui0
— SP Shivamogga (@Shivamogga_SP) December 28, 2024
ಇನ್ನೂ ಹೊಸ ವರ್ಷದಲ್ಲಿ ಸೈಬರ್ ಅಪರಾಧ ಪ್ರಕರಣಗಳಿಂದ ಜಾಗೃತರಾಗಿರುವಂತೆ ಎಚ್ಚರಿಕೆ ನೀಡುವ ಸಂಬಂದ ಯೂಟ್ಯೂಬರ್ ವಿಕ್ಕಿಪೀಡಿಯಾ ಮತ್ತು ಅಮಿತ್ ಚಿಟ್ಟೆ ರಚಿಸಿರುವ ಹೊಸ ಹಾಡಿಗೆ ಪೊಲೀಸ್ ಇಲಾಖೆ ಕೈ ಜೋಡಿಸಿದೆ. ಈ ವಿಡಿಯೋವನ್ನು ಎಸ್‌ಪಿ ಮಿಥುನ್ ಕುಮಾರ್ ತಮ್ಮ ಟ್ವಿಟ್ಟರ್ ಅಕೌಂಟ್ ನಲ್ಲಿ ಷೇರ್ ಮಾಡಿದ್ದು ಜಾಗೃತಿ ಮೂಡಿಸುತ್ತಿದ್ದಾರೆ.
View this post on Instagram
SUMMARY | Bike wheeling case, student booked by Shivamogga Traffic Police, Shivamogga District Principal Civil and JMFC Court, SP Mithun Kumar, video, I am Nandini, Wikipedia, Amit Chitte,vickypedia_007
KEY WORDS | Bike wheeling case, student booked by Shivamogga Traffic Police, Shivamogga District Principal Civil and JMFC Court, SP Mithun Kumar, video, I am Nandini, vickypedia_007, Amit Chitte,