SHIVAMOGGA| MALENADUTODAY NEWS | ಮಲೆನಾಡು ಟುಡೆ Feb 18, 2025
ರಾಜ್ಯಸರ್ಕಾರ ಬಿ ಖಾತೆ ನೀಡುವ ಸಂಬಂಧ ಮೂರು ತಿಂಗಳ ಅಭಿಯಾನಕ್ಕೆ ಎಲ್ಲಾ ಜಿಲ್ಲಾಡಳಿತಕ್ಕೂ ಸೂಚನೆ ನೀಡಿದೆ. ಇಷ್ಟಕ್ಕೂ ಏನೀದು ಬಿ ಖಾತೆ ಶಿವವಮೊಗ್ಗದಲ್ಲಿ ಯಾವಾಗಿನಿಂದ ನೀಡಲಾಗುತ್ತದೆ ಎಂಬುದರ ವಿವರ ಹೀಗಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಅಗತ್ಯ ದಾಖಲೆಗಳನ್ನು ನೀಡಿ ಮೂರು ತಿಂಗಳೊಳಗೆ, ಇ-ಖಾತೆಯನ್ನು ಪಡೆಯುಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಗುರುದತ್ತ ಹೆಗಡೆ ತಿಳಿಸಿದ್ದಾರೆ.
ಎ ಖಾತೆ, ಬಿ ಖಾತೆ
ಎ ಖಾತೆ ಅಂದರೆ, ಖರೀದಿಸಿರುವ ಅಥವಾ ಸ್ವಂತ ಜಾಗ, ಸರ್ಕಾರಿ ಸಂಸ್ಥೆಯ ಅಧಿಕೃತ ನಿಯಮಗಳ ಅಡಿಯಲ್ಲಿರುವ ಬಾಬ್ತಾದರೆ, ಅದಕ್ಕೆ ಎ ಖಾತೆಯನ್ನು ನೀಡಲಾಗುತ್ತದೆ. ಸ್ಥಳೀಯ ಆಡಳಿತವೂ ಆಯ ಜಾಗದ ಮಾಲೀಕರಿಗೆ, ಅವರ ಸ್ವತ್ತಿಗೆ ಸಂಬಂಧಿಸಿದಂತೆ ಅಧಿಕೃತ ಖಾತೆಯನ್ನು ನೀಡುತ್ತದೆ. ಈ ಖಾತೆಯ ಮೂಲಕ ಜಾಗದ ಮಾಲೀಕರು ಕಂದಾಯದಾರರಾಗುತ್ತಾರೆಷ್ಟೆ ಅಲ್ಲದೆ, ತಮ್ಮ ಸ್ವತ್ತಿಗೆ ಉತ್ತಮ ವ್ಯಾಲ್ಯುವನ್ನು ಪಡೆಯುತ್ತಾರೆ.
ಆದರೆ ಸಿಟಿ ಪ್ರದೇಶದಲ್ಲಿ ಸ್ಥಳೀಯ ಆಡಳಿತದಲ್ಲಿ ನಮೂದಾಗದ ಅಥವಾ ಕೃಷಿ ಜಾಗವನ್ನು ನಿಯಮಬದ್ಧವಾಗಿ ಪರಿವರ್ತನೆ ಮಾಡದೆ ನಿವೇಶನಗಳನನ್ನಾಗಿ ಮಾಡಿದ ಸ್ಥಳ ಅಥವಾ ಯಾವುದೇ ಜಾಗದಲ್ಲಿ ಯಾವುದೇ ನಿಯಮಗಳನ್ನು ಪಾಲಿಸದೇ ಕಟ್ಟಲಾದ ಕಟ್ಟಡ ಮನೆ ಇತ್ಯಾದಿಗಳನ್ನು ಅಕ್ರಮ ಎಂದು ಹೇಳಲಾಗುತ್ತದೆ. ಈ ಸ್ಥಳಗಳಿಗೆ ಆಡಳಿತ ವ್ಯವಸ್ಥೆ ನೀರು, ಕರೆಂಟು, ಯುಜಿಡಿ ಸೇರಿದಂಥೆ ವಿವಿಧ ಸೌಲಭ್ಯಗಳನ್ನು ಕಲ್ಪಿಸುತ್ತಿರುತ್ತದೆ. ಆದರೆ ಅಕ್ರಮ ಜಾಗವಾದ್ದರಿಂದ, ಟ್ಯಾಕ್ಸ್ ಫಿಕ್ಸ್ ಮಾಡಲು ಸಾಧ್ಯವಾಗುತ್ತಿಲ್ಲ. ಇದೀಗ ಇಂತಹ ಅನಧಿಕೃತ ಸ್ಥಳ,ಕಟ್ಟಡ, ಮನೆ ಇತ್ಯಾದಿಗಳಿಂದ ಕಂದಾಯ ಕಟ್ಟಿಸಿಕೊಳ್ಳುವ ಸಲುವಾಗಿ ಸರ್ಕಾರ ಬಿ ಖಾತೆ ನೀಡಲು ತೀರ್ಮಾನಿಸಿದೆ.
ಬಿ ಖಾತೆಯೆಂದರೆ, ಗುರುತಿಸಿದ ಜಾಗ ಅಧಿಕೃತ ಎಂದಾಗುವುದಿಲ್ಲ. ಆದರೆ ಸರ್ಕಾರಿ ಸೌಲಭ್ಯಗಳನ್ನು ಪಡೆದುಕೊಳ್ಳಲು ಕೆಲವು ಬ್ಯಾಂಕ್‌ಗಳಲ್ಲಿ ಸಾಲ ಪಡೆಯಲು ಅನುಕೂಲವಾಗುತ್ತದೆ. ಸದ್ಯ ಈ ವಿಚಾರದಲ್ಲಿ ಸರ್ಕಾರದ ಆದೇಶದಂತೆ ಶಿವಮೊಗ್ಗ ಜಿಲ್ಲಾಡಳಿತ ಸಹ ಬಿ ಖಾತೆ ಮಾಡಿಕೊಳ್ಳುವ ಸಂಬಂಧ ಸೂಚನೆಯನ್ನು ನೀಡಿದೆ.
ಜಿಲ್ಲಾಡಳಿತದ ಸೂಚನೆ
ಮಹಾನಗರ ಪಾಲಿಕೆ ಹಾಗೂ ಪೌರಸಭೆಗಳ ವ್ಯಾಪ್ತಿಗಳಲ್ಲಿರುವ ನಿವೇಶನಗಳು /ಕಟ್ಟಡಗಳಿಗೆ ಎ-ಖಾತಾ ಮತ್ತು ಬಿ-ಖಾತಾ ಪಡೆಯಲು ಕರ್ನಾಟಕ ಪೌರಸಭೆಗಳ ತೆರಿಗೆ ನಿಯಮ 2025 ಮತ್ತು ಮಹಾನಗರ ಪಾಲಿಕೆಗಳ ತೆರಿಗೆ ನಿಯಮ 2025 ರಲ್ಲಿ ಅವಕಾಶ ಕಲ್ಪಿಸಲಾಗಿದೆ.
2024 ರ ಸೆಪ್ಟೆಂಬರ್ 10 ರ ಅಂತ್ಯದವರೆಗೆ ಅನಧಿಕೃತ ಬಡಾವಣೆಗಳಲ್ಲಿ ನಿರ್ಮಿಸಿಕೊಂಡಿರುವ ನಿವೇಶನಗಳ/ಕಟ್ಟಡಗಳಿಗೆ ಬಿ-ಖಾತೆ ನೀಡಲು ಅವಕಾಶ ಕಲ್ಪಿಸಿಕೊಡಲಾಗಿದ್ದು, ಇಂತಹ ಪ್ರಕರಣಗಳ ವ್ಯಾಪ್ತಿಗೆ ಬರುವ ಆಸ್ತಿ ಮಾಲೀಕರು ತಮ್ಮ ವ್ಯಾಪ್ತಿಯ ಮಹಾನಗರಪಾಲಿಕೆ, ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳಲ್ಲಿ ದಾಖಲೆಗಳನ್ನು ಸಲ್ಲಿಸಿ ಇ-ಖಾತೆಯನ್ನು ಪಡೆಯಬಹುದಾಗಿದೆ.
ಯಾವೆಲ್ಲಾ ದಾಖಲೆಗಳು ಬೇಕು
ಎ-ಖಾತಾ ಪಡೆಯಲು ಆಸ್ತಿಗೆ ಸಂಬಂಧಿಸಿದಂತೆ ಸ್ವತ್ತಿನ ಮಾಲೀಕತ್ವ ಸಾಬೀತು ಮಾಡಿಸುವ ನೊಂದಾಯಿತ ಮಾರಾಟ ಪತ್ರ / ದಾನ ಪತ್ರ/ ವಿಭಾಗ ಪತ್ರಗಳು ಅಥವಾ ಸರ್ಕಾರದ ನಿಗಮ ಮಂಡಳಿಗಳಿಂದ ನೀಡಲಾದ ಹಕ್ಕು ಪತ್ರಗಳು/ ಮಂಜೂರಾತಿ ಪತ್ರಗಳು ಕಂದಾಯ ಇಲಾಖೆಯಿಂದ 94 ಸಿಸಿ ಅಡಿ ನೀಡಲಾದ ಹಕ್ಕು ಪತ್ರ, ಸಕ್ಷಮ ಪ್ರಾಧಿಕಾರದಿಂದ ಅನುಮೋದನೆಯಾದ ಧೃಡೀಕೃತ ಪ್ರತಿ ಮತ್ತು ನಿವೇಶನಗಳ ಬಿಡುಗಡೆ ಪತ್ರ, ಪ್ರಸಕ್ತ ಸಾಲಿನವರೆಗೆ ಋಣಭಾರ ಪ್ರಮಾಣ ಪತ್ರ, ಚಾಲ್ತಿ ಸಾಲಿನ ಆಸ್ತಿ ತೆರಿಗೆ ಪಾವತಿ ರಶೀದಿ, ಮಾಲೀಕರ ಪೋಟೋ ಮತ್ತು ಸ್ವತ್ತಿನ ಫೋಟೋ, ಮಾಲೀಕರ ಗುರುತಿನ ದಾಖಲೆಯ ಪ್ರತಿ ಸಲ್ಲಿಸಬೇಕು.
ಹಾಗೂ ಬಿ-ಖಾತಾ ಪಡೆಯಲು ಆಸ್ತಿಗೆ ಸಂಬಂಧಿಸಿದಂತೆ ಸ್ವತ್ತಿನ ಮಾಲೀಕತ್ವ ಸಾಬೀತು ಪಡಿಸಲು 2024 ಸೆ.10 ರ ಪೂರ್ವದಲ್ಲಿ ನೊಂದಾಯಿತ ಮಾರಾಟ ಪತ್ರಗಳು/ದಾನ ಪತ್ರ/ವಿಭಾಗ ಪತ್ರಗಳು/ಹಕ್ಕು ಖುಲಾಸೆ ಪತ್ರಗಳು, ಪ್ರಸಕ್ತ ಸಾಲಿನವರೆಗೆ ಋಣಭಾರ ಪ್ರಮಾಣ ಪತ್ರ, ಚಾಲ್ತಿ ಸಾಲಿನ ಆಸ್ತಿ ತೆರಿಗೆ ಪಾವತಿ ರಶೀದಿ, ಮಾಲೀಕರ ಫೋಟೋ ಮತ್ತು ಸ್ವತ್ತಿನ ಫೋಟೋ, ಮಾಲೀಕರ ಗುರುತಿನ ದಾಖಲೆಯ ಚೀಟಿ ಪ್ರತಿಯನ್ನು ಸಲ್ಲಿಸಬೇಕು. ಈ ಎಲ್ಲಾ ದಾಖಲೆಗಳನ್ನು ಈ ಪ್ರಕಟಣೆ ದಿನಾಂಕದಿಂದ ಮೂರು ತಿಂಗಳೊಳಗೆ ಸಲ್ಲಿಸಿ, ಇ-ಖಾತೆಯನ್ನು ಪಡೆಯುಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಗುರುದತ್ತ ಹೆಗಡೆ ತಿಳಿಸಿದ್ದಾರೆ.
SUMMARY | report about b khata of karnataka government , b khata in karnataka
KEY WORDS | report about b khata of karnataka government , b khata in karnataka