SHIVAMOGGA | MALENADUTODAY NEWS | ಮಲೆನಾಡು ಟುಡೆ Jan 27, 2025
ಲೈನ್ ಪರ್ಮಿಟ್ ಇಲ್ಲದೆ ಪ್ರೈವೇಟ್ ಬಸ್ ರೂಟ್‌ಗಳಲ್ಲಿಯು KSRTC ಬಸ್ ಓಡಿಸಲಾಗುತ್ತಿದೆ ಎಂದು ಆರೋಪಿಸಿ ಸಾಗರ ಪೇಟೆಯಲ್ಲಿ ಖಾಸಿ ಬಸ್‌ನ ಮಾಲೀಕರು ಇವತ್ತು ಜೋರು ಪ್ರತಿಭಟನೆ ನಡೆಸಿದರು. ಇಲ್ಲಿನ ಓಲ್ಟ್ ಬಸ್ ನಿಲ್ದಾಣದ ಬಳಿಯಲ್ಲಿ ಪ್ರತಿಭಟನೆ ನಡೆಸಿದರು. ಸಾಗರ ಪ್ರಾಂತ್ಯ ಬಸ್ ಮಾಲೀಕರ ಸಂಘ ಹಾಗೂ ಎಜೆಂಟರ್‌ಗಳ ಸಂಘದ ವತಿಯಿಂದ ಪ್ರತಿಭಟನೆ ನಡೆಸಿದ ಸದಸ್ಯರು ತಮ್ಮ ಸಮಸ್ಯೆಗಳನ್ನು ಆಲಿಸುವಂತೆ ಸಾಗರ ಉಪ ವಿಭಾಗಾಧಿಕಾರಿಗಳ ಕಚೇರಿಯಲ್ಲಿ ಮನವಿ ಸಲ್ಲಿಸಿದರು. ಇದೇ ವೇಳೆ ತಮ್ಮ ಕೆಎಸ್‌ಆರ್‌ಟಿಸಿ ಬಸ್‌ಗಳ ಅನಧಿಕೃತ ಸಂಚಾರದ ಬಗ್ಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾದಿಕಾರಿಯವರ ಬಳಿ ಉಪವಿಭಾಗಾಧಿಕಾರಿ ಕಚೇರಿ ಮೂಲಕ ಮನವಿ ಮಾಡಿದರು.
ಬಸ್ ಮಾಲೀಕರು ಏಜೆಂಟರ ಸಮಸ್ಯೆ ಎಂದರೆ ಈ ಭಾಗದಲ್ಲಿ ಕೆಎಸ್‌ಆರ್‌ಟಿಸಿ ಹೆಚ್ಚುವರಿ ಬಸ್‌ಗಳನ್ನು ರಸ್ತೆಗಿಳಿಸಿದೆ. ಅಲ್ಲದೆ ಈ ಸಂಬಂಧ ಸೂಕ್ತ ಲೈನ್ ಪರ್ಮಿಟ್ ತೆಗೆದುಕೊಳ್ಳದೆ ಖಾಸಗಿ ಬಸ್ ರೂಟ್‌ಗಳಲ್ಲಿಯ ಸರ್ಕಾರಿ ಬಸ್‌ಗಳನ್ನು ಓಡಿಸಲಾಗುತ್ತಿದೆ. ಮೇಲಾಗಿ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಕಡಿಮೆ ಟಿಕಟ್ ದರ ಇರುವುದಿರಂದ ಹೆಚ್ಚುವರಿ ಅನಧಿಕೃತ ಬಸ್‌ಗಳ ಓಡಾಟದಿಂದ ಖಾಸಗಿ ಬಸ್‌ಗಳ ಓಡಾಟಕ್ಕೆ ಸಮಸ್ಯೆಯಾಗುತ್ತಿದೆ ಎಂದು ಬಸ್ ಮಾಲೀಕರು ದೂರಿದ್ದಾರೆ.
SUMMARY |In Sagar City, members of Sagar Province Bus Owners and Bus Agents Association staged a protest against KSRTC buses
KEY WORDS | In Sagar City, Sagar Province Bus Owners and Bus Agents Association, KSRTC buses