SHIVAMOGGA | MALENADUTODAY NEWS | ಮಲೆನಾಡು ಟುಡೆ Nov 7, 2024
ದಕ್ಷಿಣ ಕನ್ನಡ | ಇಲ್ಲಿನ ಕಾವೂರು ಪೊಲೀಸರು ದನಗಳ್ಳತನ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಇವರ ವಿರುದ್ಧ ಬಜ್ಪೆ ಪೊಲೀಸ್ ಠಾಣೆಯಲ್ಲಿ 7, ಉಡುಪಿಯ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ 1 ಮತ್ತು ಶಿರಸಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ 2 ಹಾಗೂ ಶಿವಮೊಗ್ಗ ಜಿಲ್ಲೆಯ ಸಾಗರ ಟೌನ್ ಪೊಲೀಸ್ ಠಾಣೆಯಲ್ಲಿ ದಾಖಲಾದ 2 ಜಾನುವಾರು ಕಳ್ಳತನ ಸೇರಿದಂತೆ ಒಟ್ಟು ಹನ್ನೆರಡು ಪ್ರಕರಣಗಳಿವೆ. ಬಂಧಿತ ಆರೋಪಿಗಳು ಫೈಝಲ್ ಅಲಿಯಾಸ್ ಫೈಝಲ್ ಕೊಂಚಾರ್ (40) , ಸುಹೈಬ್ ಅಖ್ತರ್ (24) ಎಂದು ಗುರುತಿಸಲಾಗಿದೆ.
ಸೊರಬದಲ್ಲಿ ಸಾಗರ ನಿವಾಸಿ ಅರೆಸ್ಟ್
ಶಿವಮೊಗ್ಗ ಜಿಲ್ಲೆ ಸೊರಬ ಪಟ್ಟಣದಲ್ಲಿ ಗಾಂಜಾ ಮಾರುತ್ತಿದ್ದ ಸಾಗರದ ನಿವಾಸಿಯೊಬ್ಬನನ್ನ ಪೊಲೀಸರು ಬಂಧಿಸಿದ್ದಾರೆ. ಸೊರಬ ಪೊಲೀಸ್ ಠಾಣೆ ಪೊಲೀಸರು ಈ ದಾಳಿ ನಡೆಸಿದ್ದು, ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿ ಮನೀಶ್ ಖಾರ್ವಿಯನ್ನ ಬಂಧಿಸಿದ್ದಾರೆ. ಅಲ್ಲದೆ ಆತನಿಂದ 10,000/- ರೂಗಳ 100 ಗ್ರಾಂ ತೂಕದ ಒಣ ಗಾಂಜಾವನ್ನು, ರೂ 600 ನಗದು ಹಣ ಮತ್ತು ಕೃತ್ಯಕ್ಕೆ ಬಳಸಿದ ದ್ವಿಚಕ್ರ ವಾಹನ ವನ್ನು ಅಮಾನತ್ತು ಪಡಿಸಿಕೊಂಡಿದ್ದಾರೆ.
ವಾಟ್ಸಾಪ್ ವಾಯ್ಸ್ ಮೆಸೇಜ್‌ನಿಂದ ಕಳ್ಳನ ಬಂಧನ
ಇನ್ನೊಂದೆಡೆ ಭದ್ರಾವತಿಯಲ್ಲಿ ನಡೆದ ಕಳ್ಳತನ ಪ್ರಕರಣದಲ್ಲಿ ಭದ್ರಾವತಿ ಪೊಲೀಸರು ಐಟಿ ಕಂಪನಿಯ ಉದ್ಯೋಗಿಯೊಬ್ಬನನ್ನ ಬಂಧಿಸಿದ್ದಾರೆ. ದಿನಾಂಕ : 15-08-2024 ರಂದು ಇಲ್ಲಿನ ಹೊಸಮನೆ ನಿವಾಸಿಯೊಬ್ಬರ ಮನೆಯಲ್ಲಿ ಕಳ್ಳತನವಾಗಿತ್ತು. ಸಂಬಂಧಿಕರ ಮನೆಗೆ ಹಬ್ಬಕ್ಕೆ ಹೋಗಿ ವಾಪಸ್ ಬರುವಾಗ ಕಳ್ಳತನವಾಗಿರುವುದು ಗೊತ್ತಾಗಿತ್ತು. ಈ ಸಂಬಂಧ ಭದ್ರಾವತಿ ಹೊಸಮನೆ ಪೊಲೀಸ್ ಕೇಸ್ ದಾಖಲಿಸಿಕೊಂಡು ಇದೀಗ ಎಸ್ ಎಸ್ ನಿತಿನ್, 27 ವರ್ಷ ನನ್ನ ಬಂಧಿಸಿದೆ. ಈತ ಕದ್ದ ಚಿನ್ನದ ವಿಚಾರದಲ್ಲಿ ತನ್ನ ಸ್ನೇಹಿತರೀಗೆ ವಾಟ್ಸಾಪ್ ವಾಯ್ಸ್ ಮೆಸೇಜ್ ಕಳುಹಿಸಿದ್ದ. ತನ್ನ ಸಂಬಂಧಿಯ ಮನೆಯಲ್ಲಿಯೇ ಕಳ್ಳತನ ಮಾಡಿದ್ದ ಈತ ಅದನ್ನ ಕರಗಿಸಿಟ್ಟಿದ್ದ. ಆ ಬಳಿಕ ಅದನ್ನ ಮಾರಲು ವಾಯ್ಸ್ ಮಸೇಜ್ ಕಳುಹಿಸಿದ್ದ. ಈತನ ಮೇಲೆ ಅನುಮಾನ ಬಂದು ಪೊಲೀಸರು ವಾಯ್ಸ್ ಮೆಸೇಜ್ ಪರೀಶಿಲಿಸಿ ಆರೋಪಿಯನ್ನ ವಶಕ್ಕೆ ಪಡೆದಿದ್ದಾರೆ. ಅಲ್ಲದೆ 20 ಲಕ್ಷ ಮೌಲ್ಯದ ಚಿನ್ನ ಕಳ್ಳತನ ಕೇಸ್‌ನ 16.50 ಲಕ್ಷ ಮೌಲ್ಯದ ಚಿನ್ನವನ್ನ ರಿಕವರಿ ಮಾಡಿದ್ದಾರೆ.
SUMMARY | Mangaluru, Dakshina Kannada, Cattle Theft Case, Sirsi Market Police Station, Shivamogga Sagar Town Police Station, Bhadravathi Hosamane, Hosamane Police Station, Sagar Town, Soraba Police Station,
KEYWORDS | Mangaluru, Dakshina Kannada, Cattle Theft Case, Sirsi Market Police Station, Shivamogga Sagar Town Police Station, Bhadravathi Hosamane, Hosamane Police Station, Sagar Town, Soraba Police Station,