SHIVAMOGGA | MALENADUTODAY NEWS
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ
Sep 19, 2024
ಒಂದೊಳ್ಳೆ ಮನಸ್ಸುಗಳ ತತ್ತಕ್ಷಣದ ಪ್ರಯತ್ನದಿಂದ ಶಿವಮೊಗ್ಗ ಸಹ್ಯಾದ್ರಿ ಕಾಲೇಜಿನ ಸ್ಟೇಡಿಯಂನ ಅಂದಗೆಡುವುದು ತಪ್ಪಿದಂತಾಗಿದೆ. ಏಕೆಂದರೆ ಇಲ್ಲಿ ಕಾರ್ ರೇಸ್‌ಗೆ ಅವಕಾಶ ನೀಡಲು ಎಲ್ಲಾ ರೀತಿಯ ತಯಾರಿ ನಡೆದಿತ್ತು. ಈ ಬಗ್ಗೆ ಮಲೆನಾಡು ಟುಡೆ ವರದಿ ಮಾಡುತ್ತಿರುವಾಗಲೇ ಕಾರ್ ರೇಸ್‌ಗೆ ಅವಕಾಶ ನೀಡಲು ವಿರೋಧವೂ ಸಹ ವ್ಯಕ್ತವಾಯಿತು. ಇದೀಗ ಮಲೆನಾಡು ಟುಡೆಗೆ ಕಾರ್ ರೇಸ್‌ಗೆ ಸಹ್ಯಾದ್ರಿ ಸ್ಟೇಡಿಯಂನಲ್ಲಿ ಅವಕಾಶ ನೀಡಲಾಗದು ಎಂಬ ಮಾಹಿತಿ ಲಭ್ಯವಾಗಿದೆ.
ಸಹ್ಯಾದ್ರಿ ಕಾಲೇಜು ಸ್ಟೇಡಿಯಂ
ಶಿವಮೊಗ್ಗದಲ್ಲಿ ಅತ್ಯಂತ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಸರ್ಕಾರಿ ಜಾಗವೆಂಬುದು ಇದ್ದರೆ ಅದು ಸಹ್ಯಾದ್ರಿ ಕಾಲೇಜಿನ ಸ್ಟೇಡಿಯಂ. ಈ ಸ್ಟೇಡಿಯಂ ನ್ನು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಅಂದಿನ ರಿಜಿಸ್ಟ್ರಾರ್ ಭೋಜಾನಾಯ್ಕ್ ಆಸಕ್ತಿ ವಹಿಸಿ ಸ್ಟ್ರೇಡಿಯಂಗೆ ಕಾಯಕಲ್ಪ ನೀಡಿದ್ದರು. ತದನಂತರ ಬಂದ ರಿಜಿಸ್ಟ್ರಾರ್ ಆಗಲಿ ವಿಸಿಯಾಗಲಿ ಸ್ಟೇಡಿಯಂ ಕಡೆ ಮುಖ ಮಾಡಿ ಕೂಡ ನೋಡಲಿಲ್ಲ. ಪಾಳು ಬಿದ್ದು ಕೊಂಪೆಯಂತಾಗಿದ್ದ ಸಹ್ಯಾದ್ರಿ ಸ್ಟೇಡಿಯಂ ಅನೈತಿಕ ಚಟುವಚಿಕೆಗಳ ತಾಣವಾಗಿ, ಕ್ರೈಂಗಳಿಗೆ ದಾರಿ ಮಾಡಿಕೊಟ್ಟಿತ್ತು.
ಸಹ್ಯಾದ್ರಿ ಕ್ರಿಕೆಟ್ ಅಸೋಸಿಯೇಶನ್
ಹೀಗಿರುವ ಸನ್ನಿವೇಶದಲ್ಲಿ ಸ್ಟೇಡಿಯಂ ನಲ್ಲಿ ಹಲವು ವರ್ಷಗಳಿಂದ ಮಕ್ಕಳಿಗೆ ಕ್ರಿಕೇಟ್ ತರಬೇತಿ ನೀಡುತ್ತಿರುವ ಸಹ್ಯಾದ್ರಿ ಕ್ರಿಕೇಟ್ ಅಸೋಸಿಯೇಷನ್ ನವರು ಮೈದಾನವನ್ನು ಆಗ್ಗಾಗ್ಗೆ ಕ್ಲೀನ್ ಮಾಡಿಸುತ್ತಿದ್ದಾರೆ. ಇದರಿಂದ ಸ್ಥಳೀಯರು ಪ್ರತಿದಿನ ಇಲ್ಲಿ ವಾಕ್ ಮಾಡಲು ಸಹ ಸಹಾಯವಾಗುತ್ತಿದೆ. ಅಲ್ಲದೆ ಮೈದಾನವೂ ತಕ್ಕಮಟ್ಟಿಗೆ ಇದೆ.
ಇನ್ನೂ ಇತ್ತಿಚ್ಚಿನ ವರ್ಷಗಳಲ್ಲಿ ಸಹಾದ್ರಿ ವಿಜ್ಞಾನ, ಕಲಾ, ಮತ್ತು ವಾಣಿಜ್ಯ ವಿಭಾಗದ ಪ್ರಿನ್ಸಿಪಾಲರ ಶ್ರಮದಿಂದಾಗಿ ಸ್ಟೇಡಿಯಂ ಒಂದು ರೂಪ ಪಡೆದುಕೊಂಡಿದೆ. ಮೈದಾನದಲ್ಲಿ ಕ್ರಿಕೇಟ್, ಫುಟ್ ಬಾಲ್ ಸೇರಿದಂತೆ ಅಥ್ಲೇಟಿಕ್ ಗೇಮ್ ಗಳು ನಡೆಯುತ್ತಿದೆ. ಸರ್ಕಾರಿ ಹಾಗು ಖಾಸಗಿ ವಲಯದ ಗೇಮ್ ಗಳು ಅನುಮತಿ ಪಡೆದುಕೊಂಡು ಇಲ್ಲಿ ಆಯೋಜನೆಗೊಳ್ಳುತ್ತದೆ.
ಕಾರ್ ರೇಸ್‌ಗೆ ಅವಕಾಶ?
ಈ ಮಧ್ಯೆ ಸಹ್ಯಾದ್ರಿ ಕಾಲೇಜು ಆವರಣದಲ್ಲಿ ಕಾರು ರೇಸ್‌ಗೆ ಅವಕಾಶ ನೀಡಲಾಗುತ್ತಿದೆ ಎಂಬ ವಿಚಾರ ಹೊರಬಿದ್ದಿತ್ತು. ಹಾಗೂ ಹೀಗೂ ತಕ್ಕಮಟ್ಟಿಗೆ ಇರುವಂತಹ ಮೈದಾನದಲ್ಲಿ ಕಾರು ರೇಸ್ ನಡೆದು ನೆಲ ಹಾಳಾದರೆ ಮತ್ತೆ ಅದನ್ನು ಸರಿಪಡಿಸಲು ಯಾರು ಮುಂದೆ ಬರೋದಿಲ್ಲ.
ಕಳೆದ ಮೂರು ವರ್ಷದ ಹಿಂದೆ ಇದೇ ಸ್ಟೇಡಿಯಂ ನಲ್ಲಿ ಚಿಕ್ಕಮಗಳೂರು ಮೂಲದ ಸಂಸ್ಥೆ ಕಾರು ರೇಸ್ ಹಮ್ಮಿಕೊಂಡು ಮೈದಾನವನ್ನೆಲ್ಲಾ ಹಾಳು ಗೆಡವಿತ್ತು. ರೇಸ್‌ನ ಪರಿಣಾಮವಾಗಿ ಅಲ್ಲಲ್ಲಿ ದೊಡ್ಡ ದೊಡ್ಡ ಗುಂಡಿಗಳೇ ಮೂಡಿದ್ದವು. ಆಯೋಜಕರಿಗೆ ಲಾಸ್ ಆಯಿತು ಎಂದು ಅವರು ಮೈದಾನವನ್ನು ಮತ್ತೆ ಯಥಾಸ್ಥಿತಿಗೆ ತಂದುಕೊಡಲಿಲ್ಲ. ಗುಂಡಿಗಳಿಗೆ ಕನಿಷ್ಠ ಮಣ್ಣು ಕೂಡ ಹಾಕಲಿಲ್ಲ. ಒಟ್ಟಿನಲ್ಲಿ ರೇಸ್ ನಲ್ಲಿ ವೇಗವಾಗಿ ಚಲಿಸುವ ವಾಹನ ಸಡನ್ ಆಗಿ ಕ್ರಾಸ್ ಆಗುವಾಗ ಗುಂಡಿಗಳು ದೊಡ್ಡದಾಗುತ್ತದೆ. ಒಂದೆಡೆ ಮಣ್ಣು ಸಂಗ್ರಹಗೊಂಡು ಸ್ಟೇಡಿಯಂನ ಮೂಲಸ್ವರೂಪ ಹೊರಟು ಹೋಗುತ್ತದೆ. ಹೀಗಾಗಿ ಸ್ಟೇಡಿಯಂ ನನ್ನು ಯಾವುದೇ ಕ್ರಿಕೇಟ್ ಫುಟ್ ಬಾಲ್ ಅಥ್ಲೇಟಿಕ್ ಹೊರತುಪಡಿಸಿ ಯಾವುದೇ ಕಾರಣಕ್ಕೂ ಕಾರು ಬೈಕು ರೇಸ್ ಗಳಿಗೆ ಕೊಡಬಾರದು ಎಂದು ಹಲವರು ತಮ್ಮ ಆಕ್ರೋಶ ಹೊರಹಾಕಿದ್ರು.
ಸಹ್ಯಾದ್ರಿ ಕಾಲೇಜು ಹಳೆ ವಿದ್ಯಾರ್ಥಿಗಳ ಸಂಘದಿಂದ ಪ್ರತಿಭಟನೆ ಎಚ್ಚರಿಕೆ
ಇನ್ನೂ ಸಹ್ಯಾದ್ರಿ ಕಾಲೇಜಿನ ಸ್ಟೇಡಿಯಂನ್ನ ಕುವೆಂಪು ವಿಶ್ವವಿದ್ಯಾನಿಲಯ ನಿರ್ಲಕ್ಷಿಸುತ್ತಿರುವುದಕ್ಕೆ ಸಹ್ಯಾದ್ರಿ ಕಾಲೇಜು ಹಳೆ ವಿದ್ಯಾರ್ಥಿ ಸಂಘ ತೀವ್ರವಾಗಿ ಖಂಡಿಸಿದೆ. ಹೇಗೋ ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವದ ಅಡಿಯಲ್ಲಿ ಸ್ಡೇಡಿಯಂ ಒಂದು ರೂಪಕ್ಕೆ ಬಂದಿದೆ. ಈಗ ಅದನ್ನು ಕಾರು ರೇಸಿಗೆ ಕೊಡುವ ಬಗ್ಗೆ ಮಾಹಿತಿ ಸಿಕ್ಕಿದೆ. ಒಂದು ವೇಳೆ ಕಾರು ರೇಸ್ ಗೆ ಅವಕಾಶ ಕೊಟ್ಟರೆ, ಸಂಘದ ವತಿಂದ ಪ್ರತಿಭಟಿಸುವುದಾಗಿ ಸಹ್ಯಾದ್ರಿ ಕಾಲೇಜು ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಗುರುಮೂರ್ತಿ ಎಚ್ಚರಿಸಿದ್ದರು.
ಹೀಗೆ ವಿರೋಧ ವ್ಯಕ್ತವಾಗುತ್ತಲೇ ಕಾರ್ ರೇಸ್‌ಗೆ ಅವಕಾಶ ನೀಡಲಾಗದು ಎಂಬ ಭರವಸೆಯ ಮಾತು ವಿವಿ ಕಡೆಯಿಂದ ಲಭ್ಯವಾಗಿದೆ. ಈ ಬಗ್ಗೆ ಮಲೆನಾಡು ಟುಡೆಗೆ ಮಾತನಾಡಿರುವ ಕುವೆಂಪು ವಿವಿ ಸಿಂಡಿಕೇಟ್ ಸದಸ್ಯ ಕೆಪಿ ಶ್ರೀಪಾಲ್, ಕಾರ್ ರೇಸ್‌ಗೆ ಅವಕಾಶ ನೀಡುತ್ತಿರುವ ಬಗ್ಗೆ ವಿಸಿಯವರ ಗಮನ ಸೆಳೆಯಾಗಿದೆ. ಅಲ್ಲದೆ ಅದರಿಂದ ಆಗುವ ಪರಿಣಾಮಗಳ ಬಗ್ಗೆಯು ವಿವರಿಸಲಾಗಿದೆ ಎಂದರು. ಇದಕ್ಕೆ ಪ್ರತಿಯಾಗಿ ಸಹ್ಯಾದ್ರಿ ಸ್ಟೇಡಿಯಂನ್ನ ಕಾರ್ ರೇಸ್ ನಡೆಸಲು ಅವಕಾಶ ನೀಡುವುದಿಲ್ಲವೆಂದು ತಿಳಿಸಿದ್ದಾರೆ ಅಂತಾ ಕೆಪಿ ಶ್ರೀಪಾಲ್ ಮಲೆನಾಡು ಟುಡೆಗೆ ತಿಳಿಸಿದರು.
ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ