ಶಿವಮೊಗ್ಗ ಸಿಟಿಯಲ್ಲಿ ಹಂದಿ ಹಿಡಿದ ಟೀಂ ಮೇಲೆ ಹಂಚಿನ ಸಿದ್ದಾಪುರದಲ್ಲಿ ಅಟ್ಯಾಕ್‌ !

13

SHIVAMOGGA | MALENADUTODAY NEWS | ಮಲೆನಾಡು ಟುಡೆ  Feb 24, 2025 ‌‌  

ಶಿವಮೊಗ್ಗ ಪಾಲಿಕೆ ವ್ಯಾಪ್ತಿಯಲ್ಲಿ ಎಲ್ಲಂದರಲ್ಲಿ ಓಡಾಡುತ್ತಿದ್ದ ಹಂದಿಗಳನ್ನ ಹಿಡಿದು ಸಾಗಿಸಿದ ಮೇಲೆ ಹಲ್ಲೆ ನಡೆಸಿದ ಘಟನೆ ಸಂಬಂಧ ಹೊಳೆಹೊನ್ನೂರು ಪೊಲೀಸ್‌ ಠಾಣೆಯಲ್ಲಿ FIR ದಾಖಲಾಗಿದೆ. 

ಶಿವಮೊಗ್ಗ ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬಿಡಾಡಿ ಹಂದಿಗಳನ್ನು ಹಿಡಿಯುವಂತೆ ಜನರು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪಾಲಿಕೆ ಹಂದಿ ಹಿಡಿಯುವವರನ್ನು ಕರೆಯಿಸಿ ಹಂದಿಗಳನ್ನ ಹಿಡಿಸಿತ್ತು. ತದನಂತರ ಈ ತಂಡವನ್ನು ಪೊಲೀಸ್‌ ಇಲಾಖೆ ತನ್ನ ಬಂದೋಬಸ್ತ್‌ನೊಂದಿಗೆ ಗಡಿ ದಾಟಿಸಿತ್ತು. 

ಇದರ ನಡುವೆ ಶಿವಮೊಗ್ಗ ನಗರ ಶರಾವತಿ ನಗರದ ಮೂವರು ಮತ್ತವರ ಗುಂಪು ಬೊಲೆರೋ ಹಾಗೂ ಬೈಕ್‌ಗಳಲ್ಲಿ ಹಂದಿ ಹಿಡಿದವರನ್ನ ಫಾಲೋ ಮಾಡಿಕೊಂಡು ಬಂದು ಹಂಚಿನ ಸಿದ್ದಾಪುರದ ಬಳಿಯಲ್ಲಿ ದಾಳಿ ಮಾಡಿದೆ. ಹಂದಿ ಹಿಡಿದ ತಂಡದ ವಾಹನದ ಮೇಲೆ ಕಲ್ಲುಗಳನ್ನ ತೂರಿ ಹಲ್ಲೆ ನಡೆಸಿದ್ದಾಗಿ ಆರೋಪಿಸಲಾಗಿದೆ. 

ಈ ಸಂಬಂಧ ಹೊಳೆಹೊನ್ನೂರು ಪೊಲೀಸ್‌ ಠಾಣೆಯ ಪೊಲೀಸರು ಸ್ಥಳಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

SUMMARY | FIR registered at the Holehonnur police station in connection with a case of assault on pig catchers team   

KEY WORDS |‌ Holehonnur police station, team carrying pigs, Shivamogga Municipal Corporation ,

Share This Article