SHIVAMOGGA | MALENADUTODAY NEWS | ಮಲೆನಾಡು ಟುಡೆ Jan 27, 2025
ಶಿವಮೊಗ್ಗ ಸಾಗರ ಹೆದ್ದಾರಿಯಲ್ಲಿ ಆನೆಗಳ ಕಾಟ ಅತಿಯಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಆಯನೂರು ಟು ಆನಂದಪುರದವರೆಗೂ ಹೆದ್ದಾರಿಯ ಆ ಕಡೆ ಈ ಕಡೆ ಓಡಾಡಿಕೊಂಡಿರುವ ಕಾಡಾನೆಗಳು ಸಿರಿಗೆರೆಯಲ್ಲಿ ಭಾರೀ ಹಾನಿ ಮಾಡಿವೆ. ಐದು ಆನೆಗಳ ಹಿಂಡು ಇಲ್ಲಿನ ಮನೆಯೊಂದರ ಹೆಂಚುಗಳನ್ನು ಸೊಂಡಿಲಲ್ಲಿ ಬಡಿದು ಪುಡಿಮಾಡಿವೆ. ಅಲ್ಲದೆ ಅಂಗಳದಲ್ಲಿದ್ದ ಟಾರ್ಪಲ್ ಕಿತ್ತುಹಾಕಿರುವ ಆನೆಗಳು, ಬಾಳೆಗಿಡಗಳನ್ನ ಹತ್ತ ಮಣ್ಣುಪಾಲು ಮಾಡಿವೆ.
ಇದೇ ವೇಳೆ ಯುವಕನೊಬ್ಬ ಆನೆಯ ದಾಳಿಯಿಂದ ಬಚಾವ್ ಆಗಿದ್ದಾನೆ.ಆನೆಗಳ ಓಡಾಟ ಊರಿನೊಳಗೆ ಶುರುವಾಗುತ್ತಲೇ ಊರಿನವರು ತಮಟೆ ಬಾರಿಸಿ ಸುತ್ತಮುತ್ತಲಿನ ಜನರಿಗೆ ಎಚ್ಚರಿಕೆಯನ್ನು ನೀಡಿದ್ದಾರೆ. ಹೀಗಾಗಿ ಯಾವುದೆ ಅಪಾಯ ಸಂಭವಿಸಿಲ್ಲ. ಇನ್ನೂ 30 ವರ್ಷಗಳ ನಂತರ ಹೀಗೆ ಕಾಡಾನೆಗಳು ಊರಿಗೆ ಲಗ್ಗೆ ಇಟ್ಟಿವೆ ಎಂದು ಊರಿನವರು ಹೇಳುತ್ತಿದ್ದಾರೆ.
ಆನಂದಪುರ ಸಮೀಪದ ಕೊಲ್ಲಿ ಬಚ್ಚಲು ನಿಂದ ಹಿಡಿದು ಕೋಣೆ ಹೊಸೂರು, ತುಪ್ಪೂರು, ಹೊರಬೈಲು, ಮಂಡಘಟ್ಟ ಹೀಗೆ ಇದೇ ಭಾಗದಲ್ಲಿ ಸುತ್ತಾಡಿಕೊಂಡಿರುವ ಕಾಡಾನೆಗಳು ಕಾಡಿಗೆ ಅಟ್ಟಿದರೂ ಮತ್ತೆ ಪುನಃ ಇಲ್ಲಿಯೇ ಬರುತ್ತಿವೆ. ನಾಲ್ಕು ದೊಡ್ಡಾನೆಗಳು ಒಂದು ಸಣ್ಣಾನೆ ಇರುವ ಈ ಕಾಡಾನೆಗಳ ತಂಡ ತನ್ನದೆ ಆನೆ ಸಂಚಾರದ ಮಾರ್ಗ (wild elephants corridor) ವನ್ನು ಮಾಡಿಕೊಂಡಂತಿದೆ.
ಸದ್ಯ ಚೋಡನಾಳ ಭಾಗದಿಂದ ಮಾದಾಪುರ ಅರಣ್ಯ ಪ್ರದೇಶಕ್ಕೆ ತಲುಪಿದ್ದ 5 ಕಾಡಾನೆಗಳು, ಅರಸಾಳು ಭಾಗದಲ್ಲಿ ಆಯನೂರು ರಿಪ್ಪನ್ ಪೇಟೆ ಹೆದ್ದಾರಿ ದಾಟಿಸಲಾಗುತ್ತಿದೆ. ಸಕ್ರೆಬೈಲ್ ಆನೆ ಬಿಡಾರದ ಮಾವತರು ಈ ಕಾರ್ಯದಲ್ಲಿ ತೊಡಗಿದ್ದಾರೆ.
SUMMARY | Shivamogga Sirigere, Ayanur, Sagar, Rippanpet, Kolli Bachalu, Chomo Hosur, Tuppur, Horabailu, Chodanala, wild elephant attacks
KEY WORDS | Shivamogga Sirigere, Ayanur, Sagar, Rippanpet, Kolli Bachalu, Chomo Hosur, Tuppur, Horabailu, Chodanala, wild elephant attack