SHIVAMOGGA | MALENADUTODAY NEWS | ಮಲೆನಾಡು ಟುಡೆ Oct 28, 2024
ಶಿವಮೊಗ್ಗ ರಾಜಕಾರಣ ಹಾಗೂ ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಂಡಿದ್ದ ನಗರಸಭೆ ಮಾಜಿ ಅಧ್ಯಕ್ಷ (Former President), ವೀರಶೈವ ಲಿಂಗಾಯತ ಸಮುದಾಯದ ಮುಖಂಡ ಮತ್ತು ಬಿಜೆಪಿ ನಾಯಕ ಎನ್.ಜೆ.ರಾಜಶೇಖರ್ (72) (ಸುಭಾಷ್) ನಿಧನರಾಗಿದ್ದಾರೆ.
ಅನಾರೋಗ್ಯದ ಹಿನ್ನೆಲೆ ಇವರು ಶಿವಮೊಗ್ಗದ ನಂಜಪ್ಪ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ರಾಜಶೇಖರ್ ಅವರು ಶ್ರೀ ಬಸವೇಶ್ವರ ವೀರಶೈವ ಸಮಾಜ ಸೇವಾ ಸಂಘದ ಅಧ್ಯಕ್ಷರಾಗಿದ್ದರು. ಬಿಜೆಪಿಯಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದರು .ಮೃತರಿಗೆ ಪತ್ನಿ, ಮಗ ಮತ್ತು ಇಬ್ಬರು ಪುತ್ರಿಯರನ್ನು ಇದ್ದಾರೆ. ಮೃತರ ತೋಟದಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ
ರಾಜಶೇಖರ್‌ರವರ ನಿಧನಕ್ಕೆ ಗಣ್ಯರು ಸಂತಾಪ ಸೂಚಿಸಿದ್ದಾರೆ. ಆರ್ ಎಸ್ ಎಸ್ ನ ಪಟ್ಟಾಭಿರಾಮ್ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ, ಸಂಸದ ರಾಘವೇಂದ್ರ, ಶಾಸಕ ಚೆನ್ನಬಸಪ್ಪ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಮಂಜುನಾಥ್ ಗೌಡ, ಉಪಾಧ್ಯಕ್ಷ ಮರಿಯಪ್ಪ, ಹೆಚ್ ಸಿ ಯೋಗೀಶ್ ಸೇರಿದಂತೆ ಹಲವು ನಾಯಕರು ಮೃತರ ಅಂತಿಮ ದರ್ಶನ ಪಡೆದು ಸಂತಾಪ ಸೂಚಿಸಿದರು.
ನಗರ ಸಭೆ ಮಾಜಿ ಅಧ್ಯಕ್ಷರು ವೀರಶೈವ ಸಮಾಜದ ಪ್ರಮುಖರೂ ಆದ ಎನ್.ಜೆ.ರಾಜಶೇಖರ್ (ಸುಭಾಷ್) ನಿಧನಕ್ಕೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವರು ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಮಧುಬಂಗಾರಪ್ಪರವರು ಸಂತಾಪ ವ್ಯಕ್ತಪಡಿಸಿದ್ದಾರೆ.
ಸರಳ ಮತ್ತು ಸಹೃದಯಿ ವ್ಯಕ್ತಿಯಾಗಿದ್ದ ಸುಭಾಷ್ ನಿಧನ ನೋವು ತಂದಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಕುಟುಂಬಕ್ಕೆ ನೋವು ಸಹಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಅವರು ತಮ್ಮ ಸಂತಾಪ ಸೂಚಕ ಸಂದೇಶದಲ್ಲಿ ತಿಳಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಉದ್ಯಮ ವಲಯಕ್ಕೆ ತಮ್ಮದೇ ಆದ ಸೇವೆ ಸಲ್ಲಿಸಿರುವ ರಾಜಶೇಖರ್ ಕುಟುಂಬ ರಾಜಕೀಯವಾಗಿಯೂ ಸೇವೆ ಸಲ್ಲಿಸಿದೆ. ಶುಭಾಷ್ ಹಿರಿಯ ಸೋದರ ಎನ್.ಜೆ.ವೀರಣ್ಣ ಅವರು ತಮ್ಮ ಕುಟುಂಬಕ್ಕೆ ಆತ್ಮೀಯರಾಗಿದ್ದು, ತಂದೆ ಬಂಗಾರಪ್ಪ ಅವರಿಗೆ ಅತ್ಯಾಪ್ತರಾಗಿದ್ದರು ಎಂದು ಹೇಳಿರುವ ಸಚಿವರು,ಸುಭಾಷ್ ನಿಧನದಿಂದ ಶಿವಮೊಗ್ಗ ಜಿಲ್ಲೆ ಒಬ್ಬ ಸಭ್ಯ ವ್ಯಕ್ತಿಯನ್ನು ಕಳೆದುಕೊಂಡಂತಾಗಿದೆ ಎಂದು ದುಃಖ ವ್ಯಕ್ತಪಡಿಸಿದ್ದಾರೆ.
SUMMARY | N.J. Rajasekhar, former President of Shivamogga City Municipal Council (SMC) and leader of Veerashaiva Lingayat community and BJP leader N.J. Rajashekar (72) passed away. Former Home Minister Araga Jnanendra, MP Raghavendra, MLA Chennabasappa, DCC Bank President Manjunath Gowda, Vice-President Mariyappa, HC Yogesh and Madhu Bangarappa condoled the death.
KEYWORDS | N.J. Rajasekhar, former President of Shivamogga City Municipal Council (SMC), Veerashaiva Lingayat community , BJP leader N.J. Rajashekar passed away , Former Home Minister Araga Jnanendra, MP Raghavendra, MLA Chennabasappa, DCC Bank President Manjunath Gowda, Vice-President Mariyappa, HC Yogesh, Madhu Bangarappa,