SHIVAMOGGA | MALENADUTODAY NEWS | ಮಲೆನಾಡು ಟುಡೆ
Oct 3, 2024 | ಶಿವಮೊಗ್ಗ ನಗರದಲ್ಲಿಯು ನಾಡ ಹಬ್ಬ ದಸರಾಕ್ಕೆ ವಿದ್ಯುಕ್ತ ಚಾಲನೆ ಸಿಕ್ಕಿದೆ. ದಸರಾಕ್ಕೆ ಚಾಲನೆ ನೀಡಿ ಮಾತನಾಡಿದ ನಿರ್ದೇಶಕ ಸುನಿಲ್ ಕುಮಾರ್ ದೇಸಾಯಿ ಪ್ರತಿ ತಿಂಗಳಲ್ಲಿಯು ಒಂದಲ್ಲ ಒಂದು ಹಬ್ಬ ಉತ್ಸವಗಳು ನಮ್ಮ ಸಂಸ್ಕೃತಿಯಲ್ಲಿದೆ ಮತ್ತು ಈ ಎಲ್ಲಾ ಹಬ್ಬಗಳಿಗೂ ಒಂದೊಂದು ಹಿನ್ನೆಲೆ ಇದೆ ಎಂದು ಹೇಳಿದರು.
ರಾವಣ ಅತ್ಯಂತ ಮೇಧಾವಿ. ಎಲ್ಲಾ ವೇದಗಳನ್ನು ಅರಿತವನು. ಅಲ್ಲದೇ ಶಿವ ಭಕ್ತ ಆದರೆ ಈತನಲ್ಲಿ ಅಹಂಕಾರವೆಂಬ ದುರ್ಗುಣವಿತ್ತು. ಆದರ ಪರಿಣಾಮ ತನ್ನ ಬದುಕನ್ನೇ ಹಾಳು ಮಾಡಿಕೊಂಡ ರಾಮನ ಮುಖಾಂತರ ಹತನಾದ ಎಂದ ನಿರ್ದೇಶಕರು ನಮ್ಮಲ್ಲಿಯೂ ಸಹ ರಾಮನಿದ್ದಾನೆ. ರಾವಣನಿದ್ದಾನೆ. ಅದರಲ್ಲಿ ರಾಮನ ಸದ್ಗುಣಗಳನ್ನು ಆರಿತು ಕೊಂಡು, ರಾವಣನ ದುರ್ಗುಣ ವನ್ನು ಬಿಟ್ಟುಕೊಡುವುದೇ ನಿಜವಾದ ಹಬ್ಬದ ಆಚರಣೆ ಎಂದರು.
ಅದೇ ರೀತಿಯಲ್ಲಿ ದುರ್ಗೆಯ ಶಕ್ತಿಯನ್ನು ನಾವುಗಳು ಅಳವಡಿಸಿಕೊಂಡು. ರಾಕ್ಷರ ರೂಪದ ನಮ್ಮ ಅವಗುಣಗಳನ್ನ ಸಂಹಾರ ಮಾಡಬೇಕು ಎಂದರು ಅವಗುಣಗಳನ್ನು ಸಂಹಾರ ಮಾಡಬೇಕು ಎಂದು ಸಲಹೆ ನೀಡಿದರು.