SHIVAMOGGA | MALENADUTODAY NEWS | ಮಲೆನಾಡು ಟುಡೆ
Oct 4, 2024 | SHIVAMOGGA NEWS | ಶಿವಮೊಗ್ಗ ದಸರಾ ನಡುವೆ, ಸಿನಿಮಾ ನಿರ್ಮಾಣದ ವಿಚಾರವೊಂದು ಚರ್ಚೆಯಾಗಿರುವ ಬಗೆಗಿನ ವರದಿಯಿದು. ನಿನ್ನೆ ದಿನ ಶಿವಮೊಗ್ಗ ನವರಾತ್ರಿ ಉತ್ಸವಕ್ಕೆ ಚಾಲನೆ ಸಿಕ್ಕಿದೆ. ಈ ವೇಳೆ ಮಾತನಾಡಿದ ಸಂಸದ ಬಿ ವೈ ರಾಘವೇಂದ್ರರವರು, ದಸರಾ ಉದ್ಘಾಟನೆ ಮಾಡಿದ ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿಯವರ ಬಳಿ ಮನವಿಯೊಂದನ್ನ ಮಾಡಿದ್ದರು.
ಸುನೀಲ್ ಕುಮಾರ್ ದೇಸಾಯಿಯವರ ಸಿನಿಮಾಗಳು ದೊಡ್ಡ ಹಿಟ್ ಪಡೆದಿದ್ದವು, ಅವರನ್ನ ನೋಡುವ ಭಾಗ್ಯ ಇವತ್ತು ನನಗೆ ಸಿಕ್ಕಿದೆ. ಅವರಿಗೆ ನಾನೊಬ್ಬ ಸಂಸದನಾಗಿ ವಿನಂತಿಯೊಂದನ್ನ ಮಾಡುತ್ತಿದ್ದೇವೆ. ಮೈಸೂರು ದಸರಾದಂತೆ ಶಿವಮೊಗ್ಗ ದಸರಾ ಸಹ ವಿಶೇಷವಾಗಿ ನಡೆಯುತ್ತಿದೆ. ಇವತ್ತು ಶಿವಮೊಗ್ಗದಲ್ಲಿ ತಾಯಿ ಚಾಮುಂಡೇಶ್ವರಿಯ ದರ್ಶನವನ್ನು ನೀವು ಪಡೆದಿದ್ದೀರಿ. ಶಿವಮೊಗ್ಗ ಈ ದಸರಾದ ಉತ್ಸವವನ್ನು ನಿಮ್ಮ ಕಣ್ಮುಂದೆ ಇಟ್ಟುಕೊಂಡು ಒಂದು ಸಿನಿಮಾವನ್ನ ಇಡೀ ರಾಜ್ಯಕ್ಕೆ ತೋರಿಸುವ ಪ್ರಯತ್ನವನ್ನು ನೀವು ಮಾಡಬೇಕು, ಆ ಮೂಲಕ ಶಿವಮೊಗ್ಗದ ನವರಾತ್ರಿ ಉತ್ಸವಕ್ಕೆ ಇನ್ನಷ್ಟು ಮಂದಿ ಬರಬೇಕು ಎಂದು ಕೈ ಮುಗಿದು ಪ್ರಾರ್ಥಿಸುತ್ತೇನೆ ಎಂದರು.
ಇನ್ನೂ ಸಂಸದರ ಮಾತಿಗೆ ತಮ್ಮ ಭಾಷಣದ ವೇಳೆ ಪ್ರತಿಕ್ರಿಯಿಸಿದ ಸುನೀಲ್ ಕುಮಾರ್ ದೇಸಾಯಿ ಅವರು ನಾನು ನಿಮಗೆ ಕೇವಲ ಭರವಸೆಯನ್ನ ನೀಡುವುದಿಲ್ಲ. ಚಾಮುಂಡೇಶ್ವರಿಯ ದರ್ಶನ ಪಡೆದಿದ್ದೇನೆ. ಈ ವೇಳೆ ನಾನು ಮೊದ್ದಾಮ್ ಆಗಿ ಶಿವಮೊಗ್ಗ ದಸರಾ ಹೊಂದಿರುವ ಸಿನಿಮಾವನ್ನು ನಿರ್ಮಿಸಿ ತೋರಿಸುತ್ತೇನೆ ಎಂದಿದ್ದಾರೆ.