SHIVAMOGGA | MALENADUTODAY NEWS | ಮಲೆನಾಡು ಟುಡೆ Oct 21, 2024
ಶಿವಮೊಗ್ಗ | ಮಳೆಯ ನಡುವೆ ಶಿವಮೊಗ್ಗದ ಹಲವು ಏರಿಯಾಗಳಲ್ಲಿ ಇವತ್ತು ಸಂಜೆಯವರೆಗೂ ಕರೆಂಟ್ ಇರಲ್ಲ ಎಂದು ಮೆಸ್ಕಾಂ ತನ್ನ ಪ್‌ರಕಟಣೆಯಲ್ಲಿ ತಿಳಿಸಿದೆ.
ಶಿವಮೊಗ್ಗ ನಗರದ ಗಾಂಧಿಬಜಾರ್, ಹರಳೆಣ್ಣೆಕೇರಿ, ಎಲೆರೇವಣ್ಣ ಕೇರಿ, ಓ.ಟಿ.ರಸ್ತೆಗಳಲ್ಲಿ ಕಂಬಗಳನ್ನು ಬದಲಿಸುವ ಕಾಮಗಾರಿಯನ್ನು ಮೆಸ್ಕಾಂ ಹಮ್ಮಿಕೊಂಡಿದೆ. ಈ ಹಿನ್ನೆಲೆಯಲ್ಲಿ ಇವತ್ತು ಅಂದರೆ ಅಕ್ಟೋಬರ್ 21 ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 6 ರವರೆಗೆ ವಿವಿಧೆಡೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ತಿಳಿಸಿದೆ.
ಇವತ್ತು ಪವರ್ ಕಟ್
ಗಾಂಧಿಬಜಾರ್, ಹರಳೆಣ್ಣೆಕೇರಿ, ಎಲೆರೇವಣ್ಣ ಕೇರಿ, ಲಷ್ಕರ್ ಮೊಹಲ್ಲಾ, ನಾಗಪ್ಪಕೇರಿ, ಅಶೋಕರಸ್ತೆ, ಕುಚ್ಚುಲಕ್ಕಿ ಕೇರಿ, ತುಳುಜಾ ಭವಾನಿ ರಸ್ತೆ, ಸಾವರ್ಕರ್ ನಗರ, ಫಿಶ್ ಮಾರ್ಕೆಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.
SUMMARY | There will be power cuts in Gandhibazar, Harlennekeri, Elrevanna Keri, Lashkar Mohalla, Nagappakeri, Ashoka Road, Kuchulakki Keri, Tuluja Bhavani Road, Savarkar Nagar, Fish Market and surrounding areas today, according to a mescom release.
KEYWORDS | power cuts in Gandhibazar, Harlennekeri, Elrevanna Keri, Lashkar Mohalla, Nagappakeri, Ashoka Road, Kuchulakki Keri, Tuluja Bhavani Road, Savarkar Nagar, Fish Market ,, mescom release,