ಶಿವಮೊಗ್ಗ ಅಶೋಕ ಸರ್ಕಲ್‌ನಲ್ಲಿ ಪ್ರತಿಭಟನೆ | ಪ್ರತಿಕೃತಿಗೆ ಬೆಂಕಿ ಹಚ್ಚಿ ಆಕ್ರೋಶ | ಕಾರಣ !?

13

SHIVAMOGGA | MALENADUTODAY NEWS | ಮಲೆನಾಡು ಟುಡೆ  Feb 23, 2025 ‌‌ 

ಕನ್ನಡದಲ್ಲಿ ಮಾತನಾಡಿ ಎಂದಿದ್ದಕ್ಕೆ ಬೆಳಗಾವಿ ತಾಲ್ಲೂಕು ಬಾಳೇಕುಂದ್ರಿಯಲಲ್ಲಿ KSRTC ಬಸ್‌ ಕಂಡಕ್ಟರ್‌ಗೆ ಅವರ ವಯಸ್ಸಿಗೂ ಬೆಲೆ ಕೊಡದೇ ಹಲ್ಲೆ ಮಾಡಿದ್ದಕ್ಕೆ ರಾಜ್ಯದೆಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ಕಂಡಕ್ಟರ್‌ ಮಹಾದೇವಪ್ಪ ಹುಕ್ಕೇರಿಯವರ ಮೇಲೆ ಹಲ್ಲೆ ಮಾಡಿದ ಸಂಬಂಧ ಶಿವಮೊಗ್ಗದಲ್ಲಿಯು ಆಕ್ರೋಶ ವ್ಯಕ್ತವಾಗಿದೆ. ನಿನ್ನೆ ದಿನದ ಶಿವಮೊಗ್ಗದಲ್ಲಿ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಅಷ್ಟೆಅಲ್ಲದೆ ಶಿವಮೊಗ್ಗಕ್ಕೆ ಬರುವ ಮಹಾರಾಷ್ಟ್ರದ ಬಸ್‌ಗಳಿಗೆ ಮಸಿ ಬಳಿಯುವ ಎಚ್ಚರಿಕೆಯನ್ನು ನೀಡಿದೆ. 

ಬೆಳಗಾವಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ಕಂಡಕ್ಟರ್‌ ಮೇಲೆ ಹಲ್ಲೆ ಮಾಡಿದ ಪ್ರಕರಣವನ್ನು ಬೆಳಗಾವಿ ಪೊಲೀಸರು ಸೀರಿಯಸ್‌ ಆಗಿ ತೆಗೆದುಕೊಂಡಿದ್ದು, ಈಗಾಗಲೇ ಕೆಲವು ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರತಿಯಾಗಿ ಪ್ರಯಾಣಿಕ ಮಹಿಳೆ ನೀಡಿದ ದೂರಿನನ್ವಯ ಕಂಡಕ್ಟರ್‌ರವರ ವಿಚಾರಣೆಯು ನಡೆಯುತ್ತಿದೆ. ಇನ್ನೂ ಪ್ರಕರಣ ಸಾಕಷ್ಟು ವೈರಲ್‌ ಆಗಿದ್ದು, ಮಹಾರಾಷ್ಟ್ರದಲ್ಲಿ ಕರ್ನಾಟಕದ ಬಸ್‌ಗೆ ಮಸಿ ಬಳಿದಿರುವ ಘಟನೆ ನಡೆದಿದೆ. ಅಲ್ಲದೆ ಕರ್ನಾಟಕಕ್ಕೆ ಬಸ್‌ಗಳ ಸಂಖ್ಯೆಯನ್ನು ಮಹಾರಾಷ್ಟ್ರ ಕಡಿಮೆ ಮಾಡಿದೆ. 

ಈ ವಿಚಾರವಾಗಿ ಶಿವಮೊಗ್ಗದ ಅಶೋಕ ಸರ್ಕಲ್‌ನಲ್ಲಿ ಕನ್ನಡ ಪರ ಸಂಘಟನೆ ಪ್ರತಿಭಟನೆ ನಡೆಸಿದೆ. ಅಲ್ದೆ ಮರಾಠಿ ದಾಳಿಕೋಋರ ಬ್ಯಾನರ್‌ಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿತು. ಇದೇ ವೇಳೆ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳದೆ ಹೋದ ಪಕ್ಷದಲ್ಲಿ ಶಿವಮೊಗ್ಗಕ್ಕೆ ಬರುವ  ಮಹಾರಾಷ್ಟ್ರ ಬಸ್‌ನ ಸಿಬ್ಬಂದಿಯ ಮುಖಕ್ಕೆ ಮಸಿ ಬಳಿಯಲಾಗುವುದು ಎಂದು ಎಚ್ಚರಿಸಿದು. 

SUMMARY |  in shivamogga protest against assault on conductor of belagavi bus

KEY WORDS |‌ in shivamogga,  protest against assault on conductor of belagavi bus

Share This Article