ಶಿರಸಿಯಲ್ಲಿ KSRTC ಬಸ್‌ನಲ್ಲಿಯೇ ಸಾಗರದ ನಿವಾಸಿಯ ಹತ್ಯೆ!? ಪತ್ನಿ, ಪ್ರಿಯಕರ ಅರೆಸ್ಟ್‌!

sagara man killed in ksrtc bus , sirasi bus stand 

ಶಿರಸಿಯಲ್ಲಿ KSRTC ಬಸ್‌ನಲ್ಲಿಯೇ ಸಾಗರದ ನಿವಾಸಿಯ ಹತ್ಯೆ!? ಪತ್ನಿ, ಪ್ರಿಯಕರ ಅರೆಸ್ಟ್‌!
sagara man killed in ksrtc bus , sirasi bus stand 

SHIVAMOGGA | MALENADUTODAY NEWS | ಮಲೆನಾಡು ಟುಡೆ  Feb 23, 2025 ‌‌ 

ಶಿರಸಿಯಲ್ಲಿ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ನಿವಾಸಿಯೊಬ್ಬರನ್ನು ಬಸ್‌ನಲ್ಲಿಯೇ ಇರಿದು ಹತ್ಯೆ ಮಾಡಲಾಗಿದೆ. ಸಾಗರ ತಾಲ್ಲೂಕು ನಿಚಡಿಯ ಗಂಗಾಧರ್‌ ಮೃತ ಯುವಕ. ಇವರು ಶಿರಸಿಯ ಯವತಿಯ ಜೊತೆ ನಾಲ್ಕು ತಿಂಗಳ ಹಿಂದೆಷ್ಟೆ ಮದುವೆಯಾಗಿದ್ದರು. ಬೆಂಗಳೂರಿನಲ್ಲಿ ನೆಲಸಿದ್ದವರು, ಸಂಬಂಧಿಕರ ಮನೆಯ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳುವ ಸಲುವಾಗಿ ಶಿರಸಿಗೆ ಬಂದಿದ್ದರು. ವಾಪಸ್‌ ಬೆಂಗಳೂರಿಗೆ ಹೋಗಲು KSRTC ಬಸ್‌ ಹತ್ತಿದ್ದ ದಂಪತಿಯ ಜೊತೆ ಪ್ರೀತಮ್‌ ಡಿಸೋಜಾ ಎಂಬಾತ ಜಗಳ ತೆಗೆದು ಬಸ್‌ನಲ್ಲಿಯೇ ಗಂಗಾಧರ್‌ರವರ ಎದೆಗೆ ಇರಿದು ಅವರನ್ನು ಹತ್ಯೆ ಮಾಡಿದ್ದಾನೆ. 

ಘಟನೆ ಕಾರಣ!?

ಪ್ರೀತಮ್‌ ಡಿಸೋಜಾ ಎಂಬಾತ 10 ವರ್ಷಗಳಿಂದ ಶಿರಸಿ ಯುವತಿಯನ್ನು ಪ್ರೀತಿಸ್ತಿದ್ದ. ಆಕೆಯು ಸಹ ಪ್ರೀತಿಯಲ್ಲಿದ್ದಳು. ಈ ನಡುವೆ ಬೆಂಗಳೂರಿಗೆ ಕೆಲಸಕ್ಕೆ ಸೇರಿದ್ದ ಯುವತಿ ಅಲ್ಲಿ ನಾಲ್ಕು ತಿಂಗಳ ಹಿಂದೆ ಗಂಗಾಧರ್‌ರನ್ನು ಮದುವೆಯಾಗಿದ್ದರು. ಇದರಿಂದ ಪ್ರೀತಮ್‌ ಡಿಸೋಜಾ ಆಕ್ರೋಶ ಗೊಂಡಿದ್ದ. ಸಂಬಂಧಿಕರ ಮನೆಗೆ ಯುವತಿ ಹಾಗೂ ಗಂಗಾಧರ್‌ ಬರುವ ಮಾಹಿತಿ ಹೊಂದಿದ್ದ ಪ್ರೀತಮ್‌ ಶಿರಸಿ ಬಸ್‌ ನಿಲ್ದಾಣದ ಸಮೀಪ, ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಗಂಗಾಧರ್‌ ಜೊತೆ ಜಗಳ ತೆಗೆದಿದ್ದಾನೆ. ಜಗಳದ ನಡುವೆ ಪ್ರೀತಮ್‌ ಗಂಗಾಧರ್‌ರವರ ಎದೆಗೆ ಚಾಕುವನಿಂದ ಇರಿದಿದ್ದ. ಗಂಭೀರವಾಗಿ ಗಾಯಗೊಂಡಿದ್ದ ಗಂಗಾಧರ್‌ರವರನ್ನು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಅವರು ಮೃತಪಟ್ಟಿದ್ದರು. 

ಇತ್ತ ಪ್ರೀತಮ್‌ ಕೃತ್ಯವೆಸಗಿದ ಬೆನ್ನಲ್ಲೆ ಪೊಲೀಸರಿಗೆ ಶರಣಾಗಿದ್ದಾನೆ. ಪ್ರಕರಣ ದಾಖಲಿಸಿರುವ ಪೊಲೀಸರು ಗಂಗಾಧರ್‌ ರವರ ಪತ್ನಿಯನ್ನು ಸಹ ಅರೆಸ್ಟ್‌ ಮಾಡಿ ವಿಚಾರಣೆ ನಡೆಸ್ತಿದ್ದಾರೆ.



SUMMARY |  sagara man killed in ksrtc bus at sirasi bus stand 

KEY WORDS |‌  sagara man killed in ksrtc bus , sirasi bus stand