SHIVAMOGGA | MALENADUTODAY NEWS | ಮಲೆನಾಡು ಟುಡೆ | Nov 18, 2024
ಶಿವಮೊಗ್ಗ | ಬಿಸಿಸಿಐ 15 ವರ್ಷದೊಳಗಿನ ದೇಶೀಯ ಮಹಿಳಾ ಕ್ರಿಕೇಟ್ ಪಂದ್ಯಾವಳಿಯನ್ನು ನವಂಬರ್ 21 ರಿಂದು ನವಂಬರ್ 29 ರವರೆಗೆ ನಗರದ ಕೆ ಎಸ್ ಸಿ ಎ ಕ್ರೀಡಾಂಗಣ ಮತ್ತು ಜೆ.ಎನ್ ಎನ್ ಸಿ. ಶಿವಮೊಗ್ಗ ಟರ್ಫ್ ಅಂಕಣದಲ್ಲಿ ಆಯೋಜಿಸಿದೆ. ಈ ಕುರಿತು ರಾಜ್ಯ ಕ್ರಿಕೆಟ್ ಸಂಸ್ಥೆಯ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಸಮಿತಿಯ ಸಂಚಾಲಕರು ಹಾಗೂ ಮಾಜಿ ಶಿವಮೊಗ್ಗ ವಲಯ ಸಂಚಾಲಕರಾದ ಡಿ.ಎಸ್. ಅರುಣ್ ತಿಳಿಸಿದರು.
ಶಿವಮೊಗ್ಗದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು. ಮಹಿಳಾ ಕ್ರಿಕೇಟ್ ಆಟಗಾರರನ್ನು ಪ್ರೋತ್ಸಾಹಿಸುವ ದೃಷ್ಠಿಯಲ್ಲಿ ಬಿಸಿಸಿಐ ಕಳೆದ ಎರಡು ವರ್ಷಗಳಿಂದ 15 ವರ್ಷದೊಳಗಿನ ಅಂತರ್ ರಾಜ್ಯ ಮಹಿಳಾ ಕ್ರಿಕೆಟ್ ಪಂದ್ಯಾವಳಿಗಳನ್ನು ಅಯೋಜಿಸುತ್ತಿದೆ. ಕಳೆದ ಎರಡು ವರ್ಷಗಳಂತೆ ಈ ಬಾರಿಯೂ ಸಹ ಬಿಸಿಸಿಐ ಶಿವಮೊಗ್ಗದಲ್ಲಿ ಪಂದ್ಯವನ್ನು ಏರ್ಪಡಿಸಿರುವುದು ನಮಗೆಲ್ಲ ಹೆಮ್ಮೆ ತಂದಿದೆ ಎಂದರು.
ಎಷ್ಟು ತಂಡಗಳು ಬರುತ್ತೆ, ಪಂದ್ಯವನ್ನು ಯಾವರೀತಿ ನಡೆಸಲಾಗುತ್ತೆ.
ಈ ಪಂದ್ಯದಲ್ಲಿ ರಾಷ್ಟ್ರದ ವಿವಿಧ ರಾಜ್ಯಗಳ 36 ತಂಡಗಳು ಪಾಲ್ಗೊಳ್ಳುತ್ತಿದ್ದು, ಈ 36 ತಂಡಗಳನ್ನು ತಲಾ ಆರು ತಂಡಗಳಂತೆ ಆರು ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ಈ ಪೈಕಿ ‘ಎ’ ಗುಂಪಿನ ಆರು ತಂಡಗಳ ಪಂದ್ಯಾವಳಿಗಳು ಶಿವಮೊಗ್ಗದ ನವುಲೆ ರಸ್ತೆಯಲ್ಲಿರುವ ಕೆ.ಎಸ್.ಸಿ.ಎ. ಕ್ರೀಡಾಂಗಣದಲ್ಲಿ ಮತ್ತು ಜೆ.ಎನ್.ಎನ್.ಸಿ.ಇ. ಶಿವಮೊಗ್ಗ, ಟರ್ಫ್ ಅಂಕಣಗಳಲ್ಲಿ ನಡೆಯಲಿದೆ.
‘ಎ’ ಗುಂಪಿನಲ್ಲಿ ಬಿಹಾರ, ತಮಿಳುನಾಡು, ಹರಿಯಾಣ, ಕೇರಳ, ನಾಗಾಲ್ಯಾಂಡ್ ಮತ್ತು ಹೈದೆರಾಬಾದ್ ರಾಜ್ಯಗಳ ತಂಡಗಳನ್ನೊಳಗೊಂಡಿರುತ್ತದೆ. ಕರ್ನಾಟಕ ರಾಜ್ಯ ಮಹಿಳಾ ತಂಡವು ಬಿ ಗುಂಪಿನಲ್ಲಿ ಡೆಹ್ರಾಡೂನ್ನಲ್ಲಿ ಆಡುತ್ತಿದ್ದು ದೆಹಲಿ, ಬರೋಡ, ಅಸ್ಸಾಂ, ಚಂಡೀಗಢ ಮತ್ತು ತ್ರಿಪುರ ರಾಜ್ಯಗಳು ಈ ಗುಂಪಿನಲ್ಲಿರುತ್ತದೆ.
21ನೇ ನವೆಂಬರ್, 2024 ರಿಂದ ಪ್ರಾರಂಭವಾಗುವ ಈ ಪಂದ್ಯಾವಳಿಗಳು 29ನೇ ನವೆಂಬರ್ 2024ರ ವರೆಗೆ ನಡೆಯಲ್ಲಿದ್ದು, ಪ್ರತಿ ದಿನ ಮೂರು ಪಂದ್ಯಗಳಂತೆ ಒಟ್ಟಾರೆ 15 ಪಂದ್ಯಗಳು ನಡೆಯಲಿದೆ (ಒಂದು ಪಂದ್ಯಕ್ಕೂ ಮತ್ತೊಂದು ಪಂದ್ಯಕ್ಕೂ ಮಧ್ಯ ಒಂದು ದಿವಸದ ವಿಶ್ರಾಂತಿ ಇರುತ್ತದೆ). ಈ ಪಂದ್ಯವನ್ನು ಆಟಗಾರರು ಬಿಳಿ ಬಣ್ಣದ ಬಾಲ್‌ನಲ್ಲಿ ಆಡಲಿದ್ದು, ಆಟಗಾರರು ಕಲರ್ಸ್ ನಲ್ಲಿ ಆಡುತ್ತಾರೆ.
35 ಓವರ್ ಮಿತಿಯಲ್ಲಿ ನಡೆಯಲಿರುವ ಪಂದ್ಯಾವಳಿಯು ಒನ್ ಡೆ ಲಿಮಿಟೆಡ್ ಓವರ್ ನಿಯಮಾವಳಿಯಂತೆ ನಡೆಯಲಿದೆ. ಪ್ರತಿ ದಿನ ಪಂದ್ಯಾವಳಿಯು ಬೆಳಗ್ಗೆ 09.00 ಗಂಟೆಯಿಂದ ಪ್ರಾರಂಭವಾಗಲಿದೆ.
ಈ ಪಂದ್ಯಾವಳಿಯನ್ನು ವೀಕ್ಷಿಸಲು ರಾಷ್ಟ್ರೀಯ ಮಹಿಳಾ ತಂಡದ ಆಯ್ಕೆದಾರರು ಸಹ ಅಗಮಿಸುತ್ತಿದ್ದಾರೆ.
21ನೇ ನವೆಂಬರ್ 2024ರಂದು ಪ್ರಾರಂಭವಾಗುವ ಮೊದಲ ಪಂದ್ಯವನ್ನು ನವುಲೆಯ ಕೆ.ಎಸ್.ಸಿ.ಎ. ಕ್ರೀಡಾಂಗಣದಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆಯ ಆಯುಕ್ತರಾದ ಡಾ ಕವಿತಾ ಯೋಗಪ್ಪನವರ್ ರವರು ಹಾಗೂ ಕರ್ನಾಟಕ ಸರ್ಕಾರದ ವಿಧಾನ ಪರಿಷತ್ ಸದಸ್ಯರಾದ ಡಿ. ಎಸ್. ಅರುಣ್ ರವರು ಉದ್ಘಾಟಿಸಲಿದ್ದಾರೆ.
ಹಾಗೆಯೇ, ಇದೇ ದಿನ ಜೆ.ಎನ್.ಎನ್.ಸಿ.ಇ. ಶಿವಮೊಗ್ಗದಲ್ಲಿ ಪ್ರಾರಂಭವಾಗುವ ಪಂದ್ಯಾವಳಿಯನ್ನು ಎನ್.ಇ.ಎಸ್. ಸಂಸ್ಥೆಯ ಕಾರ್ಯದರ್ಶಿಗಳಾದ ಎಸ್. ಎನ್ ನಾಗರಾಜರವರು ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ಜೆ.ಎನ್.ಎನ್.ಸಿ.ಇ. ಕಾಲೇಜಿನ ಪ್ರಾಂಶುಪಾಲರಾದ ಡಾ. ವೈ. ವಿಜಯ ಕುಮಾರ್ ರವರು ಸಹ ಉಪಸ್ಥಿತರಿರಲಿದ್ದಾರೆ.
SUMMARY |The Under-15 domestic women’s cricket tournament, organised by the BCCI, will also be held from November 21 to November 29 at the KSCA Stadium and JNNC Stadium in the city. It will be held at Shivamogga Turf Court.
KEYWORDS| women’s cricket tournament,organised by the BCCI, JNNC Stadium, shivamogga,