SHIVAMOGGA | MALENADUTODAY NEWS | ಮಲೆನಾಡು ಟುಡೆ
Sep 30, 2024 | chinese garlic ಚೀನಾ ಬೆಳ್ಳುಳ್ಳಿ ಶಿವಮೊಗ್ಗಕ್ಕೂ ಬಂದಿದ್ಯಾ? ಹೀಗೊಂದು ಅನುಮಾನದ ಮೇರೆಗೆ ಶಿವಮೊಗ್ಗ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ನ ಅಧಿಕಾರಿಗಳು ಶಿವಮೊಗ್ಗ ಎಪಿಎಂಸಿ ತರಕಾರಿ ಮಾರುಕಟ್ಟೆ, ಗಾಂಧಿ ಬಜಾರ್, ಲಷ್ಕರ್ ಮೊಹಲ್ಲಾದ ಏಳೆಂಟು ಅಂಗಡಿಗಳ ಮೇಲೆ ದಾಳಿ ನಡೆಸಿದ್ದಾರೆ. ದಾಳಿವೇಳೆ ಅನುಮಾಸ್ಪದ ಬೆಳ್ಳುಳ್ಳಿಗಳನ್ನ ವಶಕ್ಕೆ ಪಡೆದು ಅವುಗಳನ್ನ ಬೆಂಗಳೂರಿನ ಪ್ರಯೋಗಾಲಯದಲ್ಲಿ ಪರೀಕ್ಷೆಗಾಗಿ ರವಾನೆ ಮಾಡಿದ್ದಾರೆ.
ಏನಿದು ಚೀನಾ ಬೆಳ್ಳುಳ್ಳಿchinese garlic
ಸದ್ಯ ಮಾರುಕಟ್ಟೆಗಳಲ್ಲಿ ಬೆಳ್ಳುಳ್ಳಿ ರೇಟ್ ದುಬಾರಿಯಾಗಿದೆ ಕೆಜಿಗೆ 250-400 ರೂಪಾಯಿಯವರೆಗೂ ರೇಟ್ ನಡೆಯುತ್ತಿದೆ. ಇದರ ನಡುವೆ ಮಾರುಕಟ್ಟೆಗಳಲ್ಲಿ ಕೆಲವು ವ್ಯಾಪಾರಸ್ಥರು ಚೀನಾ ಬೆಳ್ಳುಳ್ಳಿಯನ್ನು ದೇಶಿ ಬೆಳ್ಳುಳ್ಳಿಯ ಜೊತೆಗೆ ಮಾರಾಟ ಮಾಡುತ್ತಿದ್ದಾರೆ ಎನ್ನುವ ದೂರು ಕೇಳಿಬಂದಿದೆ. ಚೀನಾ ಬೆಳ್ಳುಳ್ಳಿ ಕೆಜಿಗೆ 80 ರೂಪಾಯಿ ಆಗಿದ್ದು, ಸಸ್ತಾ ಮಾಲ್‌ನೊಂದಿಗೆ ಲಾಭದಾಯಕ ವ್ಯಾಪಾರ ನಡೆಸಲಾಗುತ್ತಿದೆ. ಇದರಿಂದ ಗ್ರಾಹಕರ ಆರೋಗ್ಯಕ್ಕೂ ಹಾನಿಕಾರಕ ಆಗಬಹುದು ಎಂಬ ಅನುಮಾನದ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಶಿವಮೊಗ್ಗದ ಎಫ್‌ಎಸ್‌ಎಸ್‌ಎಐ ತಂಡ ರೇಡ್ ನಡೆಸಿದೆ.
ಚೀನಾ ಬೆಳ್ಳುಳ್ಳಿಗೆ ನಿಷೇಧ ಏಕೆ? chinese garlic
ಚೀನಾದ ಬೆಳ್ಳುಳ್ಳಿ ಅತಿಹೆಚ್ಚು ರಸಾಯನಿಕಗಳಿಂದ ಬಳಕೆ ಮಾಡಿ ಬೆಳೆಯಲಾಗುತ್ತದೆ. ಅಲ್ಲದೆ ಬೆಳ್ಳುಳ್ಳಿಯ ಸಂಸ್ಕರಣೆಯಲ್ಲಿ ಬಹಳಷ್ಟು ಕೃತಕ ವಸ್ತುಗಳನ್ನ ಬಳಸಲಾಗುತ್ತದೆ. ಇದು ಆರೋಗ್ಯಕ್ಕೆ ಹಾನಿಕಾರಕ, ಈ ಬೆಳ್ಳುಳ್ಳಿಯ ಸೇವೆನಯಿಂದಾಗಿ ಹೊಟ್ಟೆಗೆ ಹುಣ್ಣು, ಸೋಂಕು ಇತ್ಯಾದಿ ಕಾಯಿಲೆಗಳು ಬರುವುದರ ಜೊತೆಗೆ ಮೂತ್ರಪಿಂಡಗಳ ಮೇಲೆಯು ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ತಜ್ಞರು ಹೇಳುತ್ತಾರೆ.
ಚೀನಾ ಬೆಳ್ಳುಳ್ಳಿ ಕಂಡು ಹಿಡಿಯುವುದು ಹೇಗೆ?chinese garlic
ಚೀನಾ ಬೆಳ್ಳುಳ್ಳಿ ಫಳಫಲ ಹೊಳೆಯುತ್ತದೆ. ಅದರ ಘಾಟು ದೇಸಿ ಬೆಳ್ಳುಳ್ಳಿಗಿಂತ ಕಡಿಮೆ ಇರುತ್ತದೆ. ಹಾಗೆನೆ ಅದರ ಸೈಜ್ ದೇಸಿ ಬೆಳ್ಳುಳ್ಳಿಗಿಂತಲೂ ಚಿಕ್ಕದಿರುತ್ತದೆ. ಬೆಳ್ಳುಳ್ಳಿ ಬಿಡಿಸಲು ಸಲೀಸಾಗಿ ಬರುತ್ತದೆ. ಈ ರೀತಿಯಲ್ಲಿ ಚೀನಾ ಬೆಳ್ಳುಳ್ಳಿಯನ್ನು ಕಂಡು ಹಿಡಿಯಬಹುದಾಗಿದೆ. ಇನ್ನೂ ಚೀನಾ ಬೆಳ್ಳುಳ್ಳಿ ಮಾದರಿಯಲ್ಲಿಯೇ ಹಿಮಾಚಲ ಪ್ರದೇಶ, ರಾಜಸ್ಥಾನ, ಹರಿಯಾಣ, ಪಂಜಾಬ್, ಮಧ್ಯಪ್ರದೇಶದಿಂದಲೂ ಬೆಳ್ಳುಳ್ಳಿಗಳು ಲೋಕಲ್ ಮಾರುಕಟ್ಟೆಗೆ ಬರುತ್ತದೆ. ಆದಾಗ್ಯು ಈ ಬೆಳ್ಳುಳ್ಳಿಗಳು ಚೀನಿ ಬೆಳ್ಳುಳ್ಳಿಗಿಂತಲೂ ವಿಭಿನ್ನವಾಗಿರುತ್ತದೆ.
ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ, ಶಿವಮೊಗ್ಗ ಎಪಿಎಂಸಿ ತರಕಾರಿ ಮಾರುಕಟ್ಟೆ, ಗಾಂಧಿ ಬಜಾರ್, ಲಷ್ಕರ್ ಮೊಹಲ್ಲಾ , ಚೀನಾ ಬೆಳ್ಳುಳ್ಳಿ , Food Safety and Standards Authority of India, Shivamogga APMC Vegetable Market, Gandhi Bazar, Lashkar Mohalla, China Garlic