SHIVAMOGGA | MALENADUTODAY NEWS
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ
Sep 24, 2024
ಎಲ್ಲಾ ಕಾರ್ಡ್‌ಗಳಂತೆ ಇದೀಗ ಡಿಎಲ್ ಹಾಗೂ ಆರ್‌ಸಿ ಕಾರ್ಡ್‌ಗಳು ಸಹ ಬದಲಾಗಲಿವೆ. ಒಂದು ದೇಶ ಒಂದು ಕಾರ್ಡ್ ಮಾದರಿಯಲ್ಲಿ ರಾಜ್ಯದಲ್ಲಿ ಹೊಸವರ್ಷಕ್ಕೆ ಡಿಎಲ್ ಹಾಗೂ ಆರ್‌ಸಿ ಬುಕ್‌ಗೆ ಸಂಬಂಧಿಸಿದಂತೆ ಸ್ಮಾರ್ಟ್ ಕಾರ್ಡ್ ಬರಲಿದೆ. ಇದರಲ್ಲಿರುವ ಕ್ಯೂ ಆರ್ ಕೋಡ್ ಹಾಗೂ ಚಿಪ್ ವಾಹನ ಸವಾರರ ಸಂಪೂರ್ಣ ಜಾತಕವನ್ನ ನೀಡಲಿದೆ.
ಅಂದಹಾಗೆ 2019 ರಲ್ಲಿ ಈ ರೀತಿಯಲ್ಲಿ ಇಡೀ ದೇಶಕ್ಕೆ ಒಂದೇ ರೀತಿಯ ಸಾರಿಗೆ ಇಲಾಖೆಗೆ ಸಂಬಂಧಿಸಿದ ಕಾರ್ಡ್‌ಗಳು ಇರಬೇಕು ಎಂದು ಹೇಳಲಾಗಿತ್ತು. ಆದರೆ ಸ್ಮಾರ್ಟ್ ಚಾಲನಾ ಪರವಾನಗಿ (ಡಿಎಲ್) ಮತ್ತು ವಾಹನಗಳ ನೋಂದಣಿ ಪ್ರಮಾಣಪತ್ರ (ಆರ್‌ಸಿ) ಯ ಗುತ್ತಿಗೆ ಪಡೆದಿದ್ದ ಕಂಪನಿಗಳ ಅವಧಿ ಮುಗಿಯದ ಕಾರಣಕ್ಕೆ ರಾಜ್ಯದಲ್ಲಿ ಇದು ಜಾರಿ ವಿಳಂಬವಾಗಿತ್ತು.
ಇದೀಗ ಮುಂದಿನ ವರ್ಷಕ್ಕೆ ರಾಜ್ಯದ ವಾಹನ ಸವಾರರ ಕೈಗೆ ಹೈಟೆಕ್ ಕಾರ್ಡ್ ಸಿಗಲಿದೆ. ಈ ಸಂಬಂಧ ರಾಜ್ಯದ ಮಾಧ್ಯಮಗಳು ವರದಿ ಮಾಡಿವೆ.