ವರ್ಷಾಂತ್ಯ | ಪ್ರವಾಸಿ ತಾಣಗಳಲ್ಲಿ ಗುಡ್‌ ನ್ಯೂಸ್‌ | ಮುಗಿಬಿದ್ದ ಟೂರಿಸ್ಟ್‌

13

SHIVAMOGGA | MALENADUTODAY NEWS | ಮಲೆನಾಡು ಟುಡೆ Dec 29, 2024 ‌‌ 

ಶಿವಮೊಗ್ಗ ಜಿಲ್ಲೆಯಲ್ಲಿ ವರ್ಷಾಂತ್ಯದ ಚಟುವಟಿಕೆಗಳು ಜೋರಾಗಿ ನಡೆಯುತ್ತಿದೆ. ಡಿಸೆಂಬರ್‌ ರಜೆ ಹಾಗೂ ವರ್ಷಾಂತ್ಯದ ಹಿನ್ನೆಲೆಯಲ್ಲಿ ಜನರು ಪ್ರವಾಸಿ ಸ್ಥಳಗಳಿಗೆ ಲಗ್ಗೆ ಇಡುತ್ತಿದ್ದಾರೆ. ಪತ್ರಿಕೆಯೊಂದರ ಮಾಹಿತಿ ಪ್ರಕಾರ, ಈ ವಾರ ಜೋಗ ಹಾಗೂ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮಕ್ಕೆ ದಾಖಲೆಯ ಪ್ರವಾಸಿಗರು ವಿಸಿಟ್‌ ಕೊಟಿದ್ದಾರೆ. ಜೋಗದಲ್ಲಿ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧವಿದೆಯಾದರೂ ವಿಷಯ ತಿಳಿಯದೇ ಬರುವ ಪ್ರವಾಸಿಗರು ಎಂಟ್ರಿ ಗೇಟ್‌ನ ಬಳಿಯಲ್ಲಿಯೇ ಜೋಗ ನೋಡಲು ಅನುವು ಮಾಡಿಕೊಡಲಾಗುತ್ತಿದೆ. ಈ ನಿಟ್ಟಿನಲ್ಲಿ ಶುಕ್ರವಾರ 2300 ಮಂದಿ, ಶನಿವಾರ 3600ಕ್ಕೂ ಅಧಿಕ ಮಂದಿ ಇಲ್ಲಿಗೆ ಭೇಟಿ ನೀಡಿದ್ದಾರೆ. 

ಇತ್ತ ತಾವರೆಕೊಪ್ಪ ಸಿಂಹಧಾಮಕ್ಕೆ ಶುಕ್ರವಾರ , ಶನಿವಾರ ಆರು ಸಾವಿರ ಮಂದಿ ಪ್ರವಾಸಿಗರು ಭೇಟಿ ನೀಡಿದ್ದಾರೆ. ಸಕ್ರೆಬೈಲು ಆನೆ ಬಿಡಾರಕ್ಕೆ ಸಾವಿರಾರು ಮಂದಿ ಭೇಟಿ ನೀಡಿದ್ದಾರೆ. 

SUMMARY | Tourists visit many tourist spots including Jog Falls, Tyavarekoppa Tiger and Lion Sanctuary, Sakrebail Elephant Camp

KEY WORDS | Tourists visit many tourist spots ,Jog Falls, Tyavarekoppa Tiger and Lion Sanctuary, Sakrebail Elephant Camp,

Share This Article