SHIVAMOGGA | MALENADUTODAY NEWS | ಮಲೆನಾಡು ಟುಡೆ Oct 22, 2024
ಶಿವಮೊಗ್ಗ | ದೊಡ್ಡಪೇಟೆ ಪೊಲೀಸ್ ಠಾಣೆಯ ಸಿಬ್ಬಂದಿ ಸಂಶಯವೊಂದು ಲ್ಯಾಪ್‌ಟಾಪ್ ಕಳ್ಳನನ್ನ ಹಿಡಿದುಕೊಟ್ಟಿದೆ. ಹೌದು ಕದ್ದ ಲ್ಯಾಪ್‌ಟಾಪ್ ಮಾರುತ್ತಿದ್ದ ಆರೋಪಿಯನ್ನ ಅರೆಸ್ಟ್ ಮಾಡಿರುವ ಪೊಲೀಸರು ಕಡೂರು, ಶಿವಮೊಗ್ಗ, ಭದ್ರಾವತಿ ಬಸ್ ನಿಲ್ದಾಣದಲ್ಲಿ ನಡೆಸಿದ ಕಳ್ಳತನ ಪ್ರಕರಣ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.
ಏನಿದು ಕೇಸ್
ಶಿವಮೊಗ್ಗ KSRTC ಬಸ್ ನಿಲ್ದಾಣದ ಹಿಂಭಾಗದಲ್ಲಿ ವ್ಯಕ್ತಿಯೊಬ್ಬ ಸೆಕೆಂಡ್ ಲ್ಯಾಪ್ ಟಾಪ್ ಮಾರುತ್ತಿರುವ ಬಗ್ಗೆ ದೊಡ್ಡಪೇಟೆ ಪೊಲೀಸರಿಗೆ ಮಾಹಿತಿ ಬಂದಿದೆ. ರೋಡಲ್ಲಿ ಲ್ಯಾಪ್ ಟ್ಯಾಪ್ ಮಾರುತ್ತಿರೋದು ಏಕೆ? ಎಂಬ ಸಂಶಯಕ್ಕೆ ಬಿದ್ದ ಪೊಲೀಸರು ಸ್ಥಳಕ್ಕೆ ತೆರಳಿದ್ದಾರೆ. ಅಲ್ಲಿ ಲ್ಯಾಪ್‌ಟಾಪ್ ಮಾರುತ್ತಿದ್ದವನನ್ನ ವಿಚಾರಿಸಿದ್ದಾರೆ.
ಈ ವೇಳೆ ಲ್ಯಾಪ್‌ಟಾಪ್‌ನ ಮೂಲದ ಬಗ್ಗೆ ತಿಳಿಸಲಿಲ್ಲ. ಹೀಗಾಗಿ ಇನ್ನಷ್ಟು ಅನುಮಾನಗೊಂಡ ಪೊಲೀಸರು ಆತನನ್ನ ಬಾರಪ್ಪ ಸ್ಟೇಷನ್‌ಗೆ ಎಂದು ಕರೆದುಕೊಂಡು ಬಂದು ವಿಚಾರಿಸಿದ್ದಾರೆ. ಠಾಣೆಯಲ್ಲಿ ಆತನ ಬಂಡವಾಳ ಬಯಲಾಗಿದ್ದು, ಆತ ಜ್ಯೋತಿನಗರದ ಶಕೀಲ್ ತಾನು ಎಂದು ಗುರುತಿಸಿಕೊಂಡಿದ್ದಾನೆ. ಅಲ್ಲದೆ ಭದ್ರಾವತಿ, ಶಿವಮೊಗ್ಗ, ಕಡೂರುನಲ್ಲಿ ಕಳ್ಳತನವೆಸಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
SUMMARY | staff of Doddapete police station caught the laptop thief on suspicion. theft at Kadur, Shivamogga and Bhadravathi bus stands.
KEYWORDS | staff of Doddapete police station, caught the laptop thief, theft at Kadur, Shivamogga , Bhadravathi bus stands,