SHIVAMOGGA | MALENADUTODAY NEWS | ಮಲೆನಾಡು ಟುಡೆ | Feb 13, 2025
ತೀರ್ಥಹಳ್ಳಿ | ಫೆಬ್ರವರಿ 9 ರಂದು ಭಾರತೀಯ ಯೋಗ ಶಿಕ್ಷಣ ಟ್ರಸ್ಟ್ ವತಿಯಿಂದ ಅಖಂಡ ಸೂರ್ಯ ನಮಸ್ಕಾರ ಕಾರ್ಯಕ್ರಮವು ಪ್ರೇರಣಾ ಕಾರ್ಯಾಲಯದ ಸಾಧನಾ ಯೋಗ ಮಂದಿರದಲ್ಲಿ ಯಶಸ್ವಿಯಾಗಿ ಜರುಗಿತು.
ಬೆಳಿಗ್ಗೆ 6 ಘಂಟೆಗೆ ಆದಿತ್ಯ ಮಂಡಲ ಪೂಜೆಯೊಂದಿಗೆ ಆರಂಭವಾದ ಸೂರ್ಯ ನಮಸ್ಕಾರ ಸಂಜೆ 7 ಘಂಟೆಯವರೆಗೆ ನಿರಂತರವಾಗಿ ನಡೆಯಿತು. ಯೋಗ ಸಮಿತಿಯ ಸದಸ್ಯರು ನಿರಂತರವಾಗಿ ಗುಂಪುಗಳಾಗಿ ಸೂರ್ಯ ನಮಸ್ಕಾರವನ್ನು ಮಾಡಿದರು. ಯೋಗ ಬಂಧುಗಳ ಜೊತೆಗೆ ಸೇವಾಭಾರತಿ ವಿದ್ಯಾಕೇಂದ್ರದ ಮಕ್ಕಳು, ಶಿಕ್ಷಕರು ಮತ್ತು ಕುವೆಂಪು ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಸೂರ್ಯನಮಸ್ಕಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ವಿಶೇಷ. ಅಖಂಡ ಸೂರ್ಯ ನಮಸ್ಕಾರ ಕಾರ್ಯಕ್ರಮದಲ್ಲಿ ಒಟ್ಟು 25512 ಸೂರ್ಯನಮಸ್ಕಾರ ಮಾಡುವ ಮೂಲಕ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ಸಂಪನ್ನವಾಯಿತು. ವೈಯಕ್ತಿಕವಾಗಿ ಕೆಲವು ಯೋಗ ಬಂಧುಗಳು ಅತಿ ಹೆಚ್ಚು ಸೂರ್ಯ ನಮಸ್ಕಾರ ಮಾಡುವ ಮೂಲಕ ವಿಶೇಷ ಸಾಧನೆ ಮಾಡಿದರು. ಶ್ರೀಲತಾ ಇಂದಿರಾನಗರ 1233. ನಾಗರಾಜ್ ಬುಕ್ಲಾಪುರ 1121.ಪ್ರದೀಪ್ ಆಚಾರ್ಯ ಬಾಳೇಬೈಲು 1065 ಸೂರ್ಯ ನಮಸ್ಕಾರವನ್ನು ಮಾಡಿ ವಿಶೇಷ ಸಾಧನೆ ಮಾಡಿದರು.
ಯೋಗ ಶಿಕ್ಷಣ ಟ್ರಸ್ಟ್ ನ ಗೌರವಾಧ್ಯಕ್ಷರಾದ ಡಾ.ಜೀವಂಧರ್ ಜೈನ್ ದಂಪತಿಗಳು ಪೂಜಾ ಕಾರ್ಯಕ್ರಮವನ್ನು ನಡೆಸಿದರು, ಟ್ರಸ್ಟ್ ನ ಅಧ್ಯಕ್ಷರಾದ ಶ್ರೀ ಹೆಚ್.ಎಂ.ಕೃಷ್ಣಮೂರ್ತಿಯವರು ಕಾರ್ಯಕ್ರಮವನ್ನು ನಿರ್ವಹಿಸಿದರು.
SUMMARY | On February 9, the Bharatiya Yoga Shiksha Trust successfully organized the Akhand Surya Namaskar programme at Sadhana Yoga Mandir, Prerana Karyalaya.
KEYWORDS | yoga, Surya Namaskar, Sadhana Yoga Mandir, thirthahalli,