SHIVAMOGGA | MALENADUTODAY NEWS | ಮಲೆನಾಡು ಟುಡೆ Nov 2, 2024
ರಾಜಕಾರಣದ ನಡುವೆ ಜನಸಾಮಾನ್ಯ ತನಗಿಷ್ಟದ ಹಾಗೆ ಬದುಕಿದುತ್ತಿದ್ದಾನೆ ಎನ್ನುವುದಕ್ಕೆ ಶಿವಮೊಗ್ಗ ಸಾಕ್ಷ್ಯ ಹೇಳುತ್ತಿದೆ. ಈ ಸಲದ ದೀಪಾವಳಿ ಎರಡು ವಿಶಿಷ್ಟ ಘಟನೆಗಳಿಗೆ ಫೋಟೋ ಸಾಕ್ಷ್ಯವನ್ನ ನೀಡಿದೆ. ಅಂದರೆ, ಸಾಮಾನ್ಯವಾಗಿ ಹಳ್ಳಿಗಳಲ್ಲಿ ಧಾರ್ಮಿಕ ಚೌಕಟ್ಟನ್ನ ಮೀರಿದ ಸ್ನೇಹ, ಸಲುಗೆ ಬಾಂಧವ್ಯಗಳು ಗಟ್ಟಿಗೊಂಡು ಊರು ಕೇರಿ ನಮ್ಮವರು ತಮ್ಮವರು ಎಂಬ ಭಾವಗಳಿರುತ್ತದೆ. ಅದಕ್ಕೆ ಪೂರಕವಾಗಿ ಹಬ್ಬಗಳ ಸಂದರ್ಭದಲ್ಲಿ ಪಾಲ್ಗೊಂಡು ವಿಶೇಷತೆಯನ್ನ ಸರಳವಾಗಿ ಮೆರೆವ ಪರಿಪಾಠವೂ ಇದೆ. ಆದರೆ ಇವುಗಳು ಎಷ್ಟೋ ಸಲ ಬೆಳಕಿಗೆ ಬರುವುದಿಲ್ಲ.
ಅಂತಹ ಸರಳ ಭಾವನೆಯ ವಿಶಿಷ್ಟ ಘಟನೆಗಳೆರಡು ಈ ಸಲ ಮಾಧ್ಯಮಗಳಿಗೆ ದೊರಕಿವೆ. ಆ ಪೈಕಿ ಮುಸ್ಲಿಮ್ ಯುವಕನ ಲಕ್ಷ್ಮೀ ಪೂಜೆ. ಹಿಂದೂಗಳು ನಡೆಸುವ ಹಾಗೆ ತನ್ನ ಮೊಬೈಲ್ ಶಾಪ್‌ವೊಂದರ ಅಂಗಡಿ ಪೂಜೆಯನ್ನ ನಡೆಸಿದ ಮುಸ್ಲಿಮ್ ಯುವಕ ಬದುಕು ಕಟ್ಟಿಕೊಡುವ ಭವಿಷ್ಯ ಶುಭವಾಗಿರಲಿ ಎಂದು ತನ್ನ ಹಾಗೂ ಪರಧರ್ಮದ ಆಶೀರ್ವಾದವನ್ನ ಕೋರಿದ್ದಾರೆ. ಅದರ ಬಗ್ಗೆ ಮಲೆನಾಡು ಟುಡೆ ವರದಿ ಮಾಡಿತ್ತು. ಲಿಂಕ್ ಇಲ್ಲಿದೆ : ಲಕ್ಷ್ಮೀ ಪೂಜೆ ಮಾಡಿದ ಮುಸ್ಲಿಮ್ | ವೈರಲ್ ಆಗುತ್ತಿದೆ ಈ ಸೋಶಿಯಲ್ ಟ್ರೆಂಡ್ | ವಿಶೇಷ ಏನು ಗೊತ್ತಾ
ಇದೇ ರೀತಿಯಲ್ಲಿ ರಿಪ್ಪನ್‌ಪೇಟೆಯ ಆಟೋ ಚಾಲಕ ಆಟೋ ಗಫುರ್ ಎಂಬವರು ತಮ್ಮ ಮನೆಯ ಗೋವುಗಳಿಗೆ ಗೋಪೂಜೆ ಮಾಡಿದ್ದಾರೆ. ತಾವು ಪ್ರೀತಿಯಿಂದ ಸಲಹುವ ಧನಕರುಗಳ ಮೈತೊಳೆದು, ಸಿಂಗರಿಸಿ, ಪೂಜೆ ಮಾಡಿದ್ದಾರೆ. ಇದಕ್ಕೆ ಅವರ ಇಡೀ ಕುಟುಂಬ ಸಾಥ್ ನೀಡಿದೆ.
SUMMARY Muslims performed ‘Gau Puja’ and ‘Lakshmi Puja’ at Riponpete in Hosanagara taluk of Shivamogga district and witnessed communal harmony
KEYWORDS | Muslims performed Gau Puja ,’Lakshmi Puja‘ , Riponpete in Hosanagara taluk , Shivamogga district