ಲಕ್ಷ್ಮೀ ಪೂಜೆ ಮಾಡಿದ ಮುಸ್ಲಿಮ್‌ | ವೈರಲ್‌ ಆಗುತ್ತಿದೆ ಈ ಸೋಶಿಯಲ್‌ ಟ್ರೆಂಡ್‌ | ವಿಶೇಷ ಏನು ಗೊತ್ತಾ

On the occasion of Deepavali last year, Malnad Today exclusively reported on the puja at a mobile shop of a Muslim youth. Interestingly, this year's puja at his shop is going viral everywhere. 

ಲಕ್ಷ್ಮೀ ಪೂಜೆ ಮಾಡಿದ ಮುಸ್ಲಿಮ್‌ | ವೈರಲ್‌ ಆಗುತ್ತಿದೆ ಈ ಸೋಶಿಯಲ್‌ ಟ್ರೆಂಡ್‌ | ವಿಶೇಷ ಏನು ಗೊತ್ತಾ
On the occasion of Deepavali, MalenaduToday , puja at a mobile shop of a Muslim youth going viral ,

SHIVAMOGGA | MALENADUTODAY NEWS | ಮಲೆನಾಡು ಟುಡೆ Nov 2, 2024  

ಕಳೆದ ವರ್ಷ ದೀಪಾವಳಿಯ ಸಂದರ್ಭದಲ್ಲಿ ಮಲೆನಾಡು ಟುಡೆ ಎಕ್ಸ್‌ಕ್ಲ್ಯೂಸಿವ್‌ ಆಗಿ ಮುಸ್ಲಿಮ್‌ ಯುವಕನ ಮೊಬೈಲ್‌ ಅಂಗಡಿ ಪೂಜೆಯ ಬಗ್ಗೆ ರಿಪೋರ್ಟ್‌ ಮಾಡಿತ್ತು. ವಿಶೇಷ ಅಂದರೆ, ಈತನ ಅಂಗಡಿಯ ಈ ವರುಷದ ಪೂಜೆ ಎಲ್ಲೆಡೆ ವೈರಲ್‌ ಆಗುತ್ತಿದೆ. 

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ರಿಪ್ಪನ್‌ಪೇಟೆಯ ಮುಸ್ಲಿಮ್‌ ಯುವಕರೊಬ್ಬರು ಪ್ರತಿವರ್ಷ ತನ್ನ ಮೊಬೈಲ್‌ ಶಾಪ್‌ನ ಅಂಗಡಿ ಪೂಜೆಯನ್ನ ನಡೆಸುತ್ತಾರೆ. ದೀಪಾವಳಿಯ ಸಂದರ್ಭದಲ್ಲಿ ಪುರೋಹಿತರನ್ನು ಕರೆಯಿಸಿ ಶ್ರಾಸ್ತ್ರಬದ್ಧವಾಗಿ ಅಂಗಡಿ ಪೂಜೆ ನಡೆಸುವ ಇವರು ಇದೇ ಸಮಯದಲ್ಲಿ ಮುಸ್ಲಿಮ್‌ ಧಾರ್ಮಿಕ ಮುಖಂಡರನ್ನ ಕರೆಸಿ ಅವರಿಂದಲೂ ಪ್ರಾರ್ಥನೆ ಮಾಡಿಸುತ್ತಾರೆ. 

ಪ್ರತಿ ವರುಷ ಇವರು ಎರಡು ಧರ್ಮಗಳ ಆಧಾರದಲ್ಲಿ ಅಂಗಡಿ ಪೂಜೆ ಮಾಡುತ್ತಿದ್ದಾರೆ. ಇವರ ಈ ಧಾರ್ಮಿಕ ಸೌಹಾರ್ಧತೆ ಈ ಸಲ ಎಲ್ಲೆಡೆ ವೈರಲ್‌ ಅಗುತ್ತಿದೆ. ರಿಪ್ಪನ್ ಪೇಟೆಯ ವಿನಾಯಕ ವೃತ್ತದಲ್ಲಿ ಇವರ ಮೊಬೈಲ್ ಅಂಗಡಿ ಇದೆ. ಇದರ ಮಾಲೀಕ ತನ್ವಿ ಅರಸಾಳು  ಕಳೆದ ಐದು ವರ್ಷಗಳಿಂದ ಅಂಗಡಿ ಪೂಜೆ ಮಾಡುತ್ತಿದ್ದಾರೆ. ಪುರೋಹಿತ ಕೋಡೂರು ಪ್ರಮೋದ್‌ ಜೋಯಿಸರು ತನ್ವಿಯ ಅಂಗಡಿ ಪೂಜೆ ನೆರವೇರಿಸಿ ಶುಭವಾಗಲಿ ಎಂದು ಪ್ರಾರ್ಥಿಸಿದ್ದಾರೆ. ಇದೇ ಮುಸ್ಲಿಮ್‌ ಧಾರ್ಮಿಕ ಮುಖಂಡರು ವಿಶೇಷ ಪ್ರಾರ್ಥನೆ ಸಲ್ಲಿಸಿ ಯುವಕನ ಭವಿಷ್ಯ ಸುಂದರವಾಗಲಿ ಎಂದು ಆಶೀರ್ವದಿಸಿದರು 

pro kabaddi points table 2024

SUMMARY | On the occasion of Deepavali last year, Malnad Today exclusively reported on the puja at a mobile shop of a Muslim youth. Interestingly, this year's puja at his shop is going viral everywhere. 




KEYWORDS | On the occasion of Deepavali, MalenaduToday , puja at a mobile shop of a Muslim youth going viral ,