SHIVAMOGGA | MALENADUTODAY NEWS
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ
Sep 14, 2024 shimoga court case
ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕು ಶಿರಾಳಕೊಪ್ಪದಲ್ಲಿ ಕಳೆದ ದಿನಾಂಕಃ 15-05-2022 ರಂದು ನಡೆದ ಘಟನೆ ಸಂಬಂಧ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿವಮೊಗ್ಗ (Principal District and Sessions Court, Shivamogga) ಮಹತ್ವದ ತೀರ್ಪು ನೀಡಿದೆ. ಪ್ರಕರಣದಲ್ಲಿ ಆರೋಪ ಸಾಬೀತಾಗಿದ್ದು , ಅಪರಾಧಿ ಹಯಾತ್ ಸಾಬ್ ಎಂಬವರಿಗೆ 01 ವರ್ಷ 06 ತಿಂಗಳು ಸಾಧಾ ಕಾರಾವಾಸ ಶಿಕ್ಷೆ ವಿಧಿಸಿದ್ದಾರೆ.
ಏನಿದು ಕೇಸ್
ಶಿರಾಳಕೊಪ್ಪ ಟೌನ್ ನಿವಾಸಿ ಹಯಾತ್ ಸಾಬ್ ಹಾಗೂ ಜಿಯಾವುಲ್ಲ ಇವರ ನಡುವೆ ಮಾವಿನ ತೋಟದ ಗುತ್ತಿಗೆ ವ್ಯವಹಾರ ನಡೆದಿತ್ತು. ಇದಕ್ಕೆ ಸಂಬಂಧಿಸಿದಂತೆ ಹಯಾತ್ ಜಿಯಾವುಲ್ಲಾರಿಗೆ 25 ಸಾವಿರ ಹಣ ಬಾಕಿ ಕೊಡಬೇಕಿತ್ತು. ಈ ದುಡ್ಡನ್ನ ಅವರು ಪದೇಪದೆ ಕೇಳಿದ್ದಾರೆ. ಇದರಿಂದ ಸಿಟ್ಟಿಗೆದ್ದ ಹಯಾತ್ ಜಿಯಾವುಲ್ಲಾರನ್ನ ಟೀ ಹೋಟೆಲ್ ವೊಂದಕ್ಕೆ ಕರೆದು ಚಾಕುವನಿಂದ ಬೆನ್ನಿಗೆ ಚುಚ್ಚಿದ್ದಾರೆ.


ಶಿರಾಳಕೊಪ್ಪ ಟೌನ್ -Shiralakoppa Town
ಈ ಸಂಬಂಧ ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ 307, 324 ಐಪಿಸಿ ಅಡಿ ಕೇಸ್ ಆಗಿತ್ತು. ಆನಂತರ ಪ್ರಕರಣದ ಚಾರ್ಜ್‌ಶೀಟ್ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿವಮೊಗ್ಗದಲ್ಲಿ ವಿಚಾರಣೆಗೆ ಬಂದಿತ್ತು. ಸರ್ಕಾರದ ಪರವಾಗಿ
ಸುರೇಶ್ ಕುಮಾರ್ ಎ. ಎಂ. ಸರ್ಕಾರಿ ಅಭಿಯೋಜಕರವರು ವಾದ ಮಂಡಿಸಿದ್ದರು. ಇದೀಗ ಪ್ರಕರಣದ ತೀರ್ಪು ಹೊರಬಿದ್ದಿದೆ.
ಶಿವಮೊಗ್ಗ ಕೋರ್ಟ್- Shivamogga Court
ಆರೋಪಿತನ ವಿರುದ್ಧ ಆರೋಪ ದೃಡಪಟ್ಟ ಹಿನ್ನೆಲೆಯಲ್ಲಿ, ಮಾನ್ಯ ನ್ಯಾಯಾಧಿಶರಾದ ಮಂಜುನಾಥ್ ನಾಯಕ್ ರವರು ದಿನಾಂಕಃ 13-09-2024 ರಂದು ಹಯಾತ್ ಸಾಬ್ ಗೆ 01 ವರ್ಷ 06 ತಿಂಗಳು ಸಾಧಾ ಕಾರಾವಾಸ ಶಿಕ್ಷೆ ಮತ್ತು ರೂ 15,000/- ದಂಡ, ದಂಡ ಕಟ್ಟಲು ವಿಫಲರಾದಲ್ಲಿ ಹೆಚ್ಚುವರಿ 03 ತಿಂಗಳು ಸಾಧಾ ಕಾರಾವಾಸ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ.
ಅಲ್ಲದೆ ಪರಿಹಾರ ರೂಪವಾಗಿ ದಂಡದ ಮೊತ್ತದಲ್ಲಿ 5,000 ರೂಗಳನ್ನು ಗಾಯಾಳು ಜಿಯಾವುಲ್ಲಾ ಖಾನ್ ರವರಿಗೆ ನೀಡಲು ಆದೇಶಿಸಿದ್ದಾರೆ.
ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ
ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು ಕ್ಲಿಕ್ ಮಾಡಿ https://chat.whatsapp.com/FxYXrxP9Vbq6Xd5jML5sQN
TODAY ವಾಟ್ಸ್ಯಾಪ್ ಚಾನಲ್ ಫಾಲೋ ಮಾಡಿ https://whatsapp.com/channel/0029Va9I91s3LdQVrdq7yl1h
ಗೂಗಲ್ ನ್ಯೂಸ್ ಜಸ್ಟ್ ಫಾಲೋಕೊಡಿ https://news.google.com/publications/CAAqBwgKMLWipQwwx5q0BA?ceid=IN:en&oc=3