ಶಿರಾಳಕೊಪ್ಪ ಪೊಲೀಸ್ ಸ್ಟೇಷನ್‌ ಮುಂದೆ ಹೈಬ್ರೀಡ್‌ ಹಸುಗಳು | ನಡೆದಿತ್ತು ಈ ಘಟನೆ

ಶಿರಾಳಕೊಪ್ಪ ಪೊಲೀಸ್‌ ಸ್ಟೇಷನ್‌ ಪೊಲೀಸರು ದನಳ್ಳತನ ಪ್ರಕರಣ ಭೇದಿಸಿದ್ದಾರೆ Shiralakoppa police station police have cracked the cattle smuggling case

ಶಿರಾಳಕೊಪ್ಪ ಪೊಲೀಸ್ ಸ್ಟೇಷನ್‌ ಮುಂದೆ ಹೈಬ್ರೀಡ್‌ ಹಸುಗಳು | ನಡೆದಿತ್ತು ಈ ಘಟನೆ
Shiralakoppa police station, cattle smuggling case , ದನಗಳ್ಳತನ ಪ್ರಕರಣ,

SHIVAMOGGA | MALENADUTODAY NEWS | Aug 25, 2024 ಮಲೆನಾಡು ಟುಡೆ  

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕು ಶಿರಾಳಕೊಪ್ಪ ಪೊಲೀಸರು ಅಪರೂಪದ ಪ್ರಕರಣವನ್ನು ಭೇದಿಸಿದ್ದಾರೆ. ಜಿಲ್ಲೆಯಲ್ಲಿ ಹಸುಗಳ ಕಳ್ಳತನ ಪ್ರಕರಣಗಳು ಸಾಮಾನ್ಯ ಎಂಬಂತೆ ನಡೆಯುತ್ತಿದೆ. ಇದರ ನಡುವೆ ಕಳುವಾದ ಹಸುಗಳು ಬಹುತೇಕ ಮಾಯವಾಗುತ್ತವೆ. ಅವುಗಳು ಪುನಃ ಸಿಗುವುದು ತೀರಾ ಅಪರೂಪ . ಇದಕ್ಕೆ ವ್ಯತಿರಿಕ್ತವಾಗಿ ಶಿರಾಳಕೊಪ್ಪ ಪೊಲೀಸ್‌ ಠಾಣೆ ಪೊಲೀಸರು ಪ್ರಕರಣದಲ್ಲಿ ಕಳುವಾಗಿದ್ದ ನಾಲ್ಕು ಹೈಬ್ರಿಡ್‌ ಹಸುಗಳನ್ನ ಪುನಃ ಅದರ ಮಾಲೀಕರಿಗೆ ಒಪ್ಪಿಸಿದ್ದಾರೆ. 

ದನ ಕಳ್ಳತನ ಪ್ರಕರಣ 

ದಿನಾಂಕಃ 09-08-2024  ರಂದು ರಾತ್ರಿ ಶಿರಾಳಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಜಂಬೂರು ಗ್ರಾಮದ ವಾಸಿ  ಮೊಹಮದ್ ಆಲಿ ಖಾನ್ ರವರ ಫಾರಂ ಹೌಸ್ ನಲ್ಲಿದ್ದ 04 ಹಸುಗಳು ಕಳ್ಳತನವಾಗಿತ್ತು. ಈ ಸಂಬಂಧ ಅವರು ಪೊಲೀಸ್‌ ಕಂಪ್ಲೆಂಟ್‌ ನೀಡಿದ್ದರು.  

ಶಿರಾಳಕೊಪ್ಪ ಪೊಲೀಸ್‌ ಠಾಣೆ (Shiralakoppa Police Station)

ಇದೀಗ ಪ್ರಕರಣವನ್ನು ಭೇದಿಸುವಲ್ಲಿ  ಪ್ರಶಾಂತ್ ಕುಮಾರ್ ಟಿ.ಬಿ ಪಿ.ಎಸ್.ಐ ಶಿರಾಳಕೊಪ್ಪ ಠಾಣೆ ರವರ ನೇತೃತ್ವದ,  ಪುಷ್ಪಾ, ಪಿಎಸ್ಐ ಶಿರಾಳಕೊಪ್ಪ ಪೊಲೀಸ್ ಠಾಣೆ, ಮತ್ತು ಸಿಬ್ಬಂಧಿಗಳಾದ ಹೆಚ್.ಸಿ ಸಂತೋಷ್, ಟೀಕಪ್ಪ, ಪಿಸಿ ಸಲ್ಮಾನ್, ಕಾರ್ತಿಕ್, ಅಶೋಕ್  ಮತ್ತು  ಪ್ರೇಮಾ ಬಾಯಿ ರವರುಗಳನ್ನೊಳಗೊಂಡ ತಂಡ ಯಶಸ್ವಿಯಾಗಿದೆ. 

ಈ ಟೀಂ ದಿನಾಂಕಃ 23-08-2024  ರಂದು ಪ್ರಕರಣದ ಆರೋಪಿ ಹಾವೇರಿ ಜಿಲ್ಲೆಯ ಹಿರೇಕರೂರಿನ ಆರೋಪಿಯೊಬ್ಬನನ್ನ ಅರೆಸ್ಟ್‌ ಮಾಡಿ ಅಂದಾಜು ಮೌಲ್ಯ 2,40,000/- ರೂಗಳ 04 ಹಸುಗಳನ್ನು ವಶಪಡಿಸಿಕೊಂಡಿದೆ. 

  ಇನ್ನಷ್ಟು ಸುದ್ದಿಗಳು