SHIVAMOGGA | MALENADUTODAY NEWS | Aug 22, 2024 ಮಲೆನಾಡು ಟುಡೆ
ತೀರ್ಥಹಳ್ಳಿಯಲ್ಲಿ ಪತ್ರಕರ್ತನಿಗೆ ಬೆದರಿಕೆ ಹಾಕಿ ಹಲ್ಲೆಗೆ ಯತ್ನಿಸಿದ ಪೊಲೀಸ್ ಅಧಿಕಾರಿ ವಿರುದ್ಧ ಶಿವಮೊಗ್ಗದ ಪತ್ರಿಕೋದ್ಯಮ ದಿಟ್ಟ ನಿಲುವನ್ನ ತೆಗೆದುಕೊಂಡಿದೆ. ಮಾಧ್ಯಮಗಳನ್ನು ಬೆದರಿಸುವ ಪ್ರಯತ್ನವನ್ನು ನಡೆಸುವ ಅಧಿಕಾರಿಗಳಿಗೆ ಇವತ್ತು ಎಚ್ಚರಿಕೆಯ ಸಂದೇಶವೊಂದು ರವಾನೆಯಾಗಿದೆ.ಈ ಸಂಬಂಧ ಶಿವಮೊಗ್ಗ ಎಸ್‌ಪಿ ಮಿಥುನ್ ಕುಮಾರ್‌ರವರೊಂದಿಗೆ ಶಿವಮೊಗ್ಗ ಪ್ರೆಸ್ ಟ್ರಸ್ಟ್ ಹಾಗೂ ಕಾರ್ಯನಿರತ ಪತ್ರಕರ್ತರ ಸಂಘ ಚರ್ಚೆ ನಡೆಸಿದೆ.
ಜಿಲ್ಲಾಡಳಿತಕ್ಕೆ ಒತ್ತಾಯ
ಕೇವಲ ಪೊಲೀಸ್ ಇಲಾಖೆಗೆ ಅಷ್ಟೆ ಅಲ್ಲದೆ ಇದೇ ವಿಚಾರದಲ್ಲಿ ಶಿವಮೊಗ್ಗ ಜಿಲ್ಲಾಡಳಿತದ ಗಮನ ಸೆಳೆದಿರುವ ಶಿವಮೊಗ್ಗ ಪ್ರೆಸ್ ಟ್ರಸ್ಟ್ ಹಾಗೂ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾಧಿಕಾರಿ ಗುರುದತ್ತ ಹೆಗೆಡೆಯವರಿಗೆ ನಡೆದ ಘಟನೆ ಬಗ್ಗೆ ವಿವರಿಸಿ ಕ್ರಮಕ್ಕೆ ಒತ್ತಾಯಿಸಿದೆ.
ನಡೆದಿದ್ದೇನು?
ತೀರ್ಥಹಳ್ಳಿಯಲ್ಲಿ ಪ್ರಜಾವಾಣಿ ವರದಿಗಾರ ನಿರಂಜನ್ ನಿನ್ನೆ ಬುಧವಾರ ರಥಬೀದಿಯಲ್ಲಿ ಪೋಟೋ, ವಿಡಿಯೋ ತೆಗೆಯುವಾಗ ಪೊಲೀಸ್ ಇನ್ಸ್ ಪೆಕ್ಟರ್ ಅಶ್ವಥ್ ಗೌಡ ಅವರು ಬಲವಂತವಾಗಿ ಪತ್ರಕರ್ತ ನಿರಂಜನ್ ರಿಂದ ಮೊಬೈಲ್ ಕಿತ್ತುಕೊಂಡು ಠಾಣೆಗೆ ಹೋಗಿದ್ದಾರೆ. ಮೊಬೈಲ್ ಪಡೆಯಲು ಠಾಣೆಗೆ ಹೋದ ನಿರಂಜನ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಸುಳ್ಳು ಕೇಸು ಹಾಕಿ ಜೈಲಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಇದನ್ನು ಪ್ರಶ್ನಿಸಿದ ಪತ್ರಕರ್ತರ ಸಂಘದ ಪ್ರಮುಖರೊಂದಿಗೂ ಉದ್ದಟತನದಿಂದ ವರ್ತಿಸಿದ್ದಾರೆ
ಖಂಡನಾ ನಿರ್ಣಯ
ಈ ವಿಚಾರವಾಗಿ ಇವತ್ತು ಶಿವಮೊಗ್ಗ ಪತ್ರಿಕಾ ಭವನದಲ್ಲಿ ಶಿವಮೊಗ್ಗ ಪ್ರೆಸ್ ಟ್ರಸ್ಟ್ ಹಾಗೂ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರ ಸಭೆ ಕರೆದು ವಿಷಯ ಪ್ರಸ್ತಾಪ ಮಾಡಲಾಯ್ತು. ಈ ವೇಳೆ ಅಭಿವ್ಯಕ್ತಿ ಸ್ವಾತಂತ್ರ್ಯ ಹರಣಕ್ಕೆ ಯತ್ನಿಸಿದ ಅಧಿಕಾರಿ ವರ್ತನೆಯನ್ನು ಖಂಡಿಸಲಾಯಿತು. ಜಿಲ್ಲಾಧಿಕಾರಿ ಮತ್ತು ಜಿಲ್ಲಾ ರಕ್ಷಣಾಧಿಕಾರಿಗೆ ದೂರು ಸಲ್ಲಿಸಬೇಕು. ಪತ್ರಕರ್ತರೊಂದಿಗೆ ದುಂಡಾವರ್ತನೆ ಮಾಡಿದ ಅಧಿಕಾರಿ ವಿರುದ್ಧ ಶಿಸ್ತುಕ್ರಮ ಕೈಗೊಳ್ಳದಿದ್ದಲ್ಲಿ ಮುಂದೆ ಹೋರಾಟ ನಡೆಸುವ ನಿರ್ಣಯ ಕೈಗೊಳ್ಳಲಾಯಿತು.
ಈ ಸಂದರ್ಭ ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್, ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ವಿ.ಶಿವಕುಮಾರ್, ಹಿರಿಯ ಪತ್ರಕರ್ತರಾದ ನಾಗರಾಜ್ ನೇರಿಗೆ ,ವೈದ್ಯನಾಥ್, ಎನ್.ರವಿಕುಮಾರ್,ಪಿ. ಜೇಸುದಾಸ್, ಗಿರೀಶ್ ಉಮ್ರಾಯ್, ಹೊನ್ನಾಳಿ ಚಂದ್ರಶೇಖರ್, ಶೃಂಗೇರಿ ಚಂದ್ರಶೇಖರ್, ಆರಗ ರವಿ, ವಿ.ಸಿ.ಪ್ರಸನ್ನ, ವೆಂಕಟೇಶ್ ಜಿ.ಹೆಚ್, ಶಿವಮೊಗ್ಗನಂದನ್, ಶಿವಾನಂದ ಕರ್ಕಿ, ಟಿ.ಕೆ.ರಮೇಶ್ ಶೆಟ್ಟಿ, ಕೆ.ಎಸ್.ಹುಚ್ಚರಾಯಪ್ಪ, ವಿ.ಟಿ.ಅರುಣ್, ಆರ್.ಎಸ್. ಹಾಲಸ್ವಾಮಿ, ಮೋಹನ್ ಶೆಟ್ಟಿ, ಮುರುಗರಾಜ ಕೋಣಂದೂರು, ನವೀನ್ ಪುರದಾಳ್, ವಿನಯ್ ತೇಕಲೆ, ಎಸ್.ಕೆ.ಗಜೇಂದ್ರ ಸ್ವಾಮಿ ಸೇರಿದಂತೆ ಅನೇಕ ಪತ್ರಕರ್ತರು ಭಾಗವಹಿಸಿದ್ದರು.
ಇನ್ನೂ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಗೆ ವರದಿಗಾರಿಕೆಯ ವೇಳೆಯಲ್ಲಿ ಅಧಿಕಾರಿ ತೋರಿದ ವರ್ತನೆಯ ಬಗ್ಗೆ ವಿವರಿಸಲಾಗಿದೆ. ಈ ವೇಳೆ ಜಿಲ್ಲೆಯ ಇಬ್ಬರು ಪ್ರಮುಖ ಅಧಿಕಾರಿಗಳು ಕ್ರಮ ವಹಿಸುವ ವಿಶ್ವಾಸ ನೀಡಿದ್ದಾರೆ.
ಇನ್ನಷ್ಟು ಸುದ್ದಿಗಳು
-
ಪತ್ರಕರ್ತನಿಗೆ ಪೋಕ್ಸೋ ಕೇಸ್ ವಾರ್ನಿಂಗ್ ಕೊಟ್ಟ ಪೊಲೀಸ್ ಆಫಿಸರ್ | ತೀರ್ಥಹಳ್ಳಿಯಲ್ಲಿ ಇದು ಸಾಧ್ಯನಾ?
-
ನೋಟು ಎಕ್ಸ್‌ಚೇಂಜ್‌ಗೆ ಡಬ್ಬಲ್ ದುಡ್ಡು ಆಫರ್ | ಹೊಸನಗರದ ವ್ಯಕ್ತಿಗೆ ಬಾಕ್ಸ್ ಕೊಟ್ಟು ಮೋಸ ಮಾಡಿದ ಐವರು ಅರೆಸ್ಟ್
-
ನಾಯಿ, ಬೆಕ್ಕುಗಳಿಗಾಗಿಯೇ ಶಿವಮೊಗ್ಗದಲ್ಲಿ ಓಪನ್ ಆಗಲಿದೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ | ಏಲ್ಲಿ ಗೊತ್ತಾ