SHIVAMOGGA | MALENADUTODAY NEWS | ಮಲೆನಾಡು ಟುಡೆ Oct 20, 2024
ಶಿವಮೊಗ್ಗದಲ್ಲಿ ಇವತ್ತು ಮಳೆಯ ಅಬ್ಬರ ಹೇಗಿತ್ತು ಅಂದರೆ ಬೆಳ್ಳಂಬೆಳಗ್ಗೆಯು ಮುಸಲಧಾರೆ ಅಬ್ಬರಿಸಿ ಬೊಬ್ಬರಿದಿತ್ತು. ಗುಡುಗು ಸಿಡಿಲಿನ ಆರ್ಭಟದ ನಡುವೆ ದೋ ಎಂದು ಸುರಿಯುತ್ತಿದ್ದ ನಡುವೆ ಮನೆಮನೆಗಳಿಗೆ ಪತ್ರಿಕೆ ಕೂಡ ಬರಲಿಲ್ಲ. ಅಷ್ಟರಮಟ್ಟಿಗೆ ಇವತ್ತು ಮಳೆ ಕಾಡಿತ್ತು.
ಮಳೆಯ ಆರ್ಭಟದಿಂದಾಗಿ ಪತ್ರಿಕಾವಿತರಕರು ಚಳಿಯಲ್ಲಿ ಪತರುಗಡುವಂತಾಗಿತ್ತು. ಮಳೆ ನಿಲ್ಲುವರೆಗೂ ಕಾಯದೇ ಪತ್ರಿಕಾ ವಿತರಕರಿಗೆ ಬೇರೆ ವಿಧಿಯಿರಲಿಲ್ಲ. ಹೀಗಾಗಿ ಇವತ್ತು ಶಿವಮೊಗ್ಗ ನಗರದಲ್ಲಿ ಒಂಬತ್ತು ಗಂಟೆಯ ನಂತರವೇ ಎಲ್ಲರ ಮನೆಗಳಿಗೆ ಪತ್ರಿಕೆ ರವಾನೆಯಾಗಿದೆ.
ಇನ್ನೂ ಅತ್ತಾ ಅಣ್ಣಾನಗರದ ಚಾನಲ್ ತುಂಬಿ ಹರಿಯುತ್ತಿದ್ದು ಅಪಾಯದ ಮನ್ಸೂಚನೆ ನೀಡುತ್ತಿದೆ. ನೀರು ಉಕ್ಕೇರಿ ಹರಿಯುತ್ತಿದ್ದ ಪರಿಣಾಮ ನೆಲ ಯಾವುದು ಚಾನಲ್ ಯಾವುದು ಗೊತ್ತಾಗುತ್ತಿರುಲಿಲ್ಲ. ಹೀಗಾಗಿ ವಾಹನಸವಾರರು ಸಂಚರಿಸಲು ಪರದಾಡುತ್ತಿದ್ದರು. ಇನ್ನೂ ಕೆಲಸಕ್ಕೆ ಹೋಗುವವರಿಗೆ ಸಾಕಷ್ಟು ಸಮಸ್ಯೆ ಉಂಟಾಗುತ್ತಿತ್ತು. ಹಲವು ಮನೆಯೊಳಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿತ್ತು.
ಇತ್ತ ಲಕ್ಕಿನಕೊಪ್ಪದಲ್ಲಿ ರಾತ್ರಿಯಿಡಿ ಸುರಿದ ಮಳೆಗೆ ಕೆರೆ ಕೋಡಿ ಬಿದ್ದು ಸುತ್ತಮುತ್ತಲಿ ಜಮೀನು, ತೋಟ ಜಲಾವೃತವಾಗಿವೆ. ಮಳೆ ಕಡಿಮೆ ಆಗದೆ ಇದ್ದಿದ್ದರೆ ಶಿವಮೊಗ್ಗ – ಎನ್.ಆರ್.ಪುರ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತಗೊಳ್ಳುವ ಆತಂಕವಿದೆ. ಲಕ್ಕಿನಕೊಪ್ಪದ ಹೊಸಕೆರೆಗೆ ಕಾಡಿನಿಂದ ಭಾರಿ ನೀರು ಹರಿದು ಬರುತ್ತಿದೆ. ಅಲ್ಲದೆ ಹೆದ್ದಾರಿ ಮೇಲೆ ಸುಮಾರು ಎರಡು ಅಡಿಯಷ್ಟು ನೀರು ಹರಿಯುತ್ತಿದೆ. ಇನ್ನು ನೀರಿನ ರಭಸಕ್ಕೆ ರಸ್ತೆ ಪಕ್ಕದ ಮಣ್ಣು ಜರಿದು ಹೋಗಿದೆ.
SUMMARY | Details of rain damage in Shivamogga, Lakkinakoppa
KEYWORDS | Details of rain damage in Shivamogga, Lakkinakoppa