SHIVAMOGGA | MALENADUTODAY NEWS | ಮಲೆನಾಡು ಟುಡೆ
Oct 9, 2024 | SHIVAMOGGA RAIN | ಶಿವಮೊಗ್ಗದಲ್ಲಿ ನಿನ್ನೆ ಸುರಿದ ಮಳೆಗೆ ರೈಲು ಹಳಿಗಳ ಅಡಿಯಿರುವ ಜಲ್ಲಿ ಸಂಪೂರ್ಣ ಕೊಚ್ಚಿ ಹೋಗಿ, ತಾಳಗುಪ್ಪ-ಬೆಂಗಳೂರು, ತಾಳಗುಪ್ಪ-ಮೈಸೂರು ಟ್ರೈನ್ ಸಂಚಾರಕ್ಕೆ ಅಡ್ಡಿಯಾಗಿರುವ ಬಗ್ಗೆ ವರದಿಯಾಗಿದೆ.
ಕಳೆದ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಕುಂಸಿ – ಆನಂದಪುರ ರೈಲ್ವೆ ಮಾರ್ಗದಲ್ಲಿ ಅಡಚಣೆಯಾಗಿದೆ. ಇಲ್ಲಿನ ಸೂಡೂರು ಬಳಿಯಲ್ಲಿ ರೈಲ್ವೆ ಟ್ರ್ಯಾಕ್‌ನಲ್ಲಿದ್ದ ಜಲ್ಲಿ ಪೂರ್ತಿ ಮಳೆ ನೀರಿನ ರಭಸಕ್ಕೆ ಕೊಚ್ಚಿ ಹೋಗಿದೆ. ಅದೃಷ್ಟಕ್ಕೆ ಟ್ರ್ಯಾಕ್ ಮ್ಯಾನ್‌ನಿಂದ ಸಂಭವನೀಯ ಅಪಾಯ ತಪ್ಪಿದೆ.
ಟ್ರ್ಯಾಕ್ ಮ್ಯಾನ್ ಈ ಭಾಗದ ಹಳಿಯನ್ನ ಗಮನಿಸುತ್ತಿದ್ದ ಸಂದರ್ಭಲ್ಲಿ ರೈಲ್ವೆ ಹಳಿಯು ಆಧಾರವಿಲ್ಲದೆ ನಿಂತಿರುವುದು ಕಾಣಿಸಿದೆ. ತಕ್ಷಣ ಅವರು ಮೇಲಾಧಿಕಾರಿಗಳ ಗಮನಕ್ಕೆ ವಿಷಯ ಮುಟ್ಟಿಸಿದ್ದಾರೆ. ಹೀಗಾಗಿ ತಾಳಗುಪ್ಪದಿಂದ ಬೆಂಗಳೂರು ಮತ್ತು ಮೈಸೂರಿಗೆ ಹೊರಟಿದ್ದ ರೈಲುಗಳು ಸಂಚಾರ ತಾತ್ಕಾಲಿಕ ಸ್ಥಗಿತಗೊಂಡಿದೆ.
ವಿಷಯ ತಿಳಿದು ಸ್ಥಳಕ್ಕೆ ರೈಲ್ವೆ ಇಂಜಿನಿಯರಿಂಗ್ ತಂಡ, ರೈಲ್ವೆ ಪೊಲೀಸರು ಭೇಟಿ ನೀಡಿ ರೈಲ್ವೆ ಟ್ರ್ಯಾಕ್ ರಿಪೇರಿಯ ಕೆಲಸವನ್ನ ನಿರ್ವಹಿಸುತ್ತಿದ್ದಾರೆ. ಸದ್ಯ ಬೆಳಗ್ಗೆ 5.15ಕ್ಕೆ ತಾಳಗುಪ್ಪದಿಂದ ಹೊರಟಿದ್ದ ಇಂಟರ್‌ಸಿಟಿ ರೈಲು ಸಾಗರ – ಆನಂದಪುರ ನಿಲ್ದಾಣಗಳ ನಡುವೆ ನಿಲ್ಲಿಸಲಾಗಿದೆ .

SUMMARY |Train services between Talaguppa-Bengaluru and Talaguppa-Mysuru were disrupted in Shivamogga after the gravel under the railway tracks was completely washed away due to heavy rains yesterday.
KEYWORDS | Train services, Talaguppa-Bengaluru Train ,Talaguppa-Mysuru Train, in Shivamogga railway tracks washed away, due to heavy rains
Train services disrupted in Shivamogga after the gravel under the railway tracks was completely washed away due to heavy rains yesterday. pic.twitter.com/L6DP1o0L8M
— malenadutoday.com (@malnadtoday) October 9, 2024