SHIVAMOGGA | MALENADUTODAY NEWS | Aug 23, 2024 ಮಲೆನಾಡು ಟುಡೆ
ಮಲೆನಾಡಿಗೆ ಮರಳು ದಂಧೆ ಹೊಸದಲ್ಲ, ಮರಳು ಗಣಿಗಾರಿಕೆಯು ಹೊಸದಲ್ಲ. ದೊಡ್ಡ ದೊಡ್ಡ ಕಾಣದ ಕೈಗಳು ಮರಳಿನ ವಹಿವಾಟವನ್ನ ಫಾಲೋ ಮಾಡುತ್ತಲೇ ಇರುತ್ತದೆ.
ಉಸುಕಿನ ಲೋಕದಲ್ಲಿ ಕಾಣದ ಕಣ್ಣುಗಳು ಅಕ್ರಮದ ಬೆನ್ನಿಗೆ ನಿಂತು ಕಾವಲು ಕಾಯುತ್ತಿರುತ್ತವೆ. ಹೀಗಿರುವಾಗಲೂ ಸಹ ಕೆಲವೊಂದು ಅಧಿಕಾರಿಗಳು, ಮರಳಿನ ಗಣಿಯಲ್ಲಿ ಸರ್ಕಾರದ ಬೊಕ್ಕಸ ತಲುಪಬೇಕಾದ ಹಣವನ್ನ ತಲುಪಿಸುವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಾರೆ. ಅಂತಹ ಒಬ್ಬ ಅಧಿಕಾರಿ ಭೂ ವಿಜ್ಞಾನಿ ನವೀನ್.. ಸದ್ಯ ವಿಷಯ ಏನಂದರೆ ಇವರ ಕೆಲಸಕ್ಕೆ ಕಾಣದ ಕೈಗಳು ವರ್ಗಾವಣೆಯ ಗಿಫ್ಟ್ ಕೊಡುತ್ತಿದೆ.
ಹೌದು, ಭೂವಿಜ್ಞಾನ ಇಲಾಖೆಯ ಅಡಿಯಲ್ಲಿ ಮಲೆನಾಡು ಶಿವಮೊಗ್ಗದ ಅಕ್ರಮ ಗಣಿಗಾರಿಕೆಗಳಿಗೆ ಬಹುತೇಕ ಕಡಿವಾಣ ಹಾಕಿದವರು ಭೂವಿಜ್ಞಾನಿ ನವೀನ್. ರಾಜಕೀಯ ಶಿಪಾರಸ್ಸು, ಪವರ್ ಫುಲ್ ಪೀಪಲ್‌ಗಳ ಪ್ರಭಾವಗಳ ನಡುವೆಯು ಹಲವು ಲಾರಿಗಳನ್ನ ಸೀಜ್ ಮಾಡಿದ್ರಲ್ಲಿ ನವೀನ್‌ರವರಿಗೆ ಹಲವು ಸಲ ಜೀವ ಬೆದರಿಕೆ ಬಂದಿದ್ದು ಉಂಟು. ಬೆದರಿಸುವ ಪ್ರಯತ್ನ ನಡೆದಿದ್ದು ಉಂಟು .
ವರ್ಗಾವಣೆ ರಾಜಕಾರಣ
ಹಾಗಿದ್ರೂ ನವೀನ್ ತಮ್ಮ ಕೆಲಸವನ್ನ ಮುಂದುವರಿಸಿದ್ದರು. ಶಿವಮೊಗ್ಗದಲ್ಲಿಯೇ ಅವರು ಕೆಲಸ ನಿರ್ವಹಿಸಲು ನವೀನ್‌ರವರಿಗೆ ಸಮಯ, ಅವಕಾಶ ಎರಡು ಕೂಡ ಇನ್ನೂ ಇದೆ. ಈ ನಡುವೆ ಅವರಿಗೆ ವರ್ಗಾವಣೆ ಶಿಕ್ಷೆಯನ್ನ ಗಿಫ್ಟ್ ಆಗಿ ಕೊಡಲು ಪ್ರಯತ್ನಗಳು ನಡೆದಿವೆ. ಮಲೆನಾಡಲ್ಲಿ ರಾಜಕಾರಣದ ಸೋಂಕಿಲ್ಲದೆ ಮರಳು ದಂಧೆ ನಡೆಯದು. ಅದರಲ್ಲಿಯು ಜಿಲ್ಲೆಯ ಎರಡು ತಾಲ್ಲೂಕುಗಳಲ್ಲಿ ಮರಳು ಚಿನ್ನದ ವ್ಯಾಪಾರವಾಗಿದೆ. ಅಂತಹ ವಹಿವಾಟಿನ ಮೇಲೆ ಆಡಳಿತಾಂಗ ನಿಗಾ ವಹಿಸದ ಪಕ್ಷದಲ್ಲಿ ಮರಳು ಎನನ್ನೂ ಸಹ ಬದಲಾಯಿಸಿಬಿಡುತ್ತದೆ. ಈ ನಿಟ್ಟಿನಲ್ಲಿ ನವೀನ್‌ರಂತಹ ಅಧಿಕಾರಿಗಳ ಅವಶ್ಯಕತೆ ಶಿವಮೊಗ್ಗಕ್ಕೆ ಇದೆ.
ಟ್ರಾನ್ಸಫರ್ ಮಾಡಿಸಬೇಕಾ
ಇನ್ನೂ ಇತ್ತೀಚೆಗೆ ಶಿವಮೊಗ್ಗ ಜಿಲ್ಲೆಯಲ್ಲಿ ವರ್ಗಾವಣೆಯ ವಿಚಾರದಲ್ಲಿ ಕಾಣದ ಕೈಗಳ ಓಡಾಟ ಜೋರು ಸದ್ದು ಮಾಡುತ್ತಿದೆ. ನವೀನ್ ರವರ ವಿಚಾರಕ್ಕೂ ಅಂತಹುದ್ದೆ ಪ್ರಯತ್ನ ನಡೆದಿದೆಯಾ ಗೊತ್ತಿಲ್ಲ. ಆದಾಗ್ಯು ಉಸ್ತುವಾರಿ ಸಚಿವ ಮಧು ಬಂಗಾರಪ್ಪನವರು ಈ ಬಗ್ಗೆ ಗಮನ ಹರಿಸುವುದು ಉತ್ತಮ ಎಂಬುದು ಮರಳಿನ ಅಕ್ರಮದ ವಿರುದ್ಧ ಹೋರಾಡುತ್ತಿರುವವರ ಅಭಿಪ್ರಾಯವಾಗಿದೆ.
ದಾಖಲೆ ಮಾತನಾಡುತ್ತದೆ
ನವೀನ್‌ರವರು ಕಾರ್ಯನಿರ್ವಹಿಸುತ್ತಿರುವ ಇಲಾಖೆಯಲ್ಲಿ ಅನಧಿಕೃತ ಗಣಿಗಾರಿಕೆ/ ಸಾಗಾಣಿಕೆ/ ದಾಸ್ತಾನು ಸಂಬಂಧ ಜಿಲ್ಲೆಯ ಅಧಿಕಾರಿಗಳು ಕೈಗೊಂಡ ಕ್ರಮಗಳ ಕುರಿತು ಮಲೆನಾಡು ಟುಡೆ ಎರಡು ವರ್ಷದ ಮಾಹಿತಿಯನ್ನು ಪಡೆದುಕೊಂಡಿದೆ. ಮತ್ತು ಅಂಕಿ ಅಂಶದ ವಿವರ ಹೀಗಿದೆ.
2023-24 ನೇ ಸಾಲಿನಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಒಟ್ಟು 137.69 ಲಕ್ಷಗಳು ಹಾಗೂ ಹೊಸನಗರ ಕಂದಾಯ ಇಲಾಖೆಯಿಂದ ಒಟ್ಟು 28.00 ಲಕ್ಷಗಳು ಸೇರಿ ಒಟ್ಟು 165.69 ಲಕ್ಷಗಳ ದಂಡವನ್ನು ವಿಧಿಸಿ ವಸೂಲು ಮಾಡಲಾಗಿದೆ.
2024-25 ನೇ ಸಾಲಿನಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಒಟ್ಟು 41.85 ಲಕ್ಷಗಳು ಹಾಗೂ ಹೊಸನಗರ ಕಂದಾಯ ಇಲಾಖೆಯಿಂದ ಒಟ್ಟು 8.27 ಲಕ್ಷಗಳು ಸೇರಿ ಒಟ್ಟು 50.12 ಲಕ್ಷಗಳ ದಂಡವನ್ನು ವಿಧಿಸಿ ವಸೂಲು ಮಾಡಲಾಗಿದೆ.
ಯಾವುದೆ ವಿಷಯವಾದರೂ ದಾಖಲೆ ಮಾತನಾಡಬೇಕು ಎನ್ನುತ್ತಾರೆ. ದಾಖಲೆಯ ಅಂಕಿ ಅಂಶ ಕೋಟಿಗಳ ಲೆಕ್ಕದಲ್ಲಿದೆ. ಸರ್ಕಾರಕ್ಕೆ ಲಾಭ ತಂದಿದೆ. ಅಕ್ರಮಕ್ಕೆ ಆದಷ್ಟು ಕಡಿವಾಣ ಬಿದ್ದಿದೆ. ಹಾಗಿದ್ದರೂ ಅಧಿಕಾರಿಯೊಬ್ಬರನ್ನ ವರ್ಗಾವಣೆಗೆ ಗುರಿ ಮಾಡುತ್ತಿರುವುದು ಸರ್ಕಾರಿ ಹುದ್ದೆಯ ಶ್ರಮಕ್ಕೆ ತಕ್ಕುದಾದ್ದಲ್ಲ ಎನ್ನುತ್ತಿದೆ ಈ ಅಂಕಿ ಅಂಶಗಳು
ಇನ್ನಷ್ಟು ಸುದ್ದಿಗಳು
-
ಪತ್ರಕರ್ತನಿಗೆ ಪೋಕ್ಸೋ ಕೇಸ್ ವಾರ್ನಿಂಗ್ ಕೊಟ್ಟ ಪೊಲೀಸ್ ಆಫಿಸರ್ | ತೀರ್ಥಹಳ್ಳಿಯಲ್ಲಿ ಇದು ಸಾಧ್ಯನಾ?
-
BREAKING NEWS | ಜೈಲಿಂದಲೇ ಭದ್ರಾವತಿ MLA ಮಗನ ಹತ್ಯೆಗೆ ಸ್ಕೆಚ್? | ಗಾಂಧಿ ಸರ್ಕಲ್‌ನಲ್ಲಿ ಸಂಚು, ಡಿಚ್ಚಿ & ಟಿಪ್ಪು ಡೀಲ್| FIR ನಲ್ಲಿ ಏನಿದೆದುಡ್ಡು ಆಫರ್ | ಹೊಸನಗರದ ವ್ಯಕ್ತಿಗೆ ಬಾಕ್ಸ್ ಕೊಟ್ಟು ಮೋಸ ಮಾಡಿದ ಐವರು ಅರೆಸ್ಟ್
-
ನೋಟು ಎಕ್ಸ್‌ಚೇಂಜ್‌ಗೆ ಡಬ್ಬಲ್ ನಾಯಿ, ಬೆಕ್ಕುಗಳಿಗಾಗಿಯೇ ಶಿವಮೊಗ್ಗದಲ್ಲಿ ಓಪನ್ ಆಗಲಿದೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ | ಏಲ್ಲಿ ಗೊತ್ತಾ