SHIVAMOGGA | MALENADUTODAY NEWS | ಮಲೆನಾಡು ಟುಡೆ Mar 3, 2025
ಶಿವಮೊಗ್ಗದ ಪ್ರಮುಖ ಸುದ್ದಿಗಳನ್ನು ಸಂಕ್ಷಿಪ್ತವಾಗಿ ವಿವರಿಸುವ ಮಲೆನಾಡು ಟುಡೆಯ ವರದಿ ಚಟ್‌ಪಟ್ ಸುದ್ದಿಯ ವಿವರ ಹೀಗಿದೆ.
ಸುದ್ದಿ 1: ಮಾವನನನ್ನು ಕೊಂದ ಅಳಿಯ ಅರೆಸ್ಟ್
ಭದ್ರಾವತಿಯಲ್ಲಿ ನಡೆದ ಕೊಲೆ ಪ್ರಕರಣವನ್ನು ಶಿವಮೊಗ್ಗ ಪೊಲೀಸರು ಭೇದಿಸಿದ್ದಾರೆ. ಇಲ್ಲಿನ ಹನುಮಂತಾಪುರದಲ್ಲಿ ಶಿವರಾತ್ರಿಯ ದಿನವೇ ಕೊಲೆಯೊಂದು ನಡೆದಿತ್ತು. ಪ್ರಕರಣದ ಸಂಬಂಧ ಕೇಸ್ ದಾಖಲಿಸಿಕೊಂಡಿದ್ದ ಪೊಲೀಸರು ಇದೀಗ ಮೃತರ ಅಳಿಯಯನ್ನು ಅರೆಸ್ಟ್ ಮಾಡಿದ್ದಾರೆ. ಕೊಲೆಯಾದ ರಾಜಶೇಖರಪ್ಪನವರ ಮಗಳ ಗಂಡ ಮಂಜುನಾಥ್ ತನಗೆ ಕುಡಿಯಲು ಹಣ ಕೊಟ್ಟಿಲ್ಲವೆಂದು ಮಾವನ ಮೇಲೆ ಕ್ರಿಕೆಟ್ ಬ್ಯಾಟ್‌ನಿಂದ ಹೊಡೆದು ಹಲ್ಲೆ ಮಾಡಿ ಕೊಲೆ ಮಾಡಿದ್ದಾನೆ ಎಂದು ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಸುದ್ದಿ 2 : ಬ್ರಾಸ್‌ಲೈಟ್ ಕದ್ದವರು ಅರೆಸ್ಟ್ , ಆಟೋ ಸೀಜ್
ಶಿವಮೊಗ್ಗ ರೈಲ್ವೆ ನಿಲ್ದಾಣದ ಬಳಿಯಲ್ಲಿ ವ್ಯಕ್ತಿಯೊಬ್ಬರಿಗೆ ಶೇಕ್ ಹ್ಯಾಂಡ್ ನೀಡಿ ಅವರ ಕೈಯಲ್ಲಿದ್ದ ಚಿನ್ನದ ಬ್ರಾಸ್ ಲೈಟ್ ದರೋಡೆ ಮಾಡಿಕೊಂಡು ಎಸ್ಕೇಪ್ ಆಗಿದ್ದವರನ್ನ ಜಯನಗರ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಕಳೆದ ಫೆಬ್ರವರಿ 19 ರಂದು ಈ ಘಟನೆ ನಡೆದಿತ್ತು. ಈ ಸಂಬಂಧ ತನಿಖೆ ನಡೆಸ್ತಿದ್ದ ಪೊಲೀಸರು ಮಂಜುನಾಥ ಬಡಾವಣೆಯ ಜಬೀರ್, ಬೊಮ್ಮನಕಟ್ಟೆಯ ಅಬ್ರಹಾರ್,ಬೊಮ್ಮನಕಟ್ಟೆ ಸಿ ಬ್ಲಾಕ್ ನ ಆಂಜನೇಯ, ಆರ್ ಎಂ ಎಲ್ ನಗರದ ಸೈಯ್ಯದ್‌ನನ್ನು ಬಂಧಿಸಿದ್ದಾರೆ.
ಸುದ್ದಿ 3 : ಮಂಡಿ ನೋವಿಗೆ ಔಷಧಿ ಕೊಡುವುದಾಗಿ ವಂಚನೆ
ಶಿವಮೊಗ್ಗ ನಗರದ ಊರುಗಡೂರಿನಲ್ಲಿ ವೃದ್ದೆಯೊಬ್ಬರಿಗೆ ಮಂಡಿ ನೋವಿಗೆ ಔಷಧಿ ಕೊಡುವುದಾಗಿ ಹೇಳಿ ಲಕ್ಷಗಟ್ಟಲೇ ವಂಚಿಸಿದ ಘಟನೆ ನಡೆದಿದೆ. ಈ ಸಂಬಂಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಲ್ಲಿನ ವೃದ್ದೆಯೊಬ್ಬರಿಗೆ ಪರಿಚಯವಾದ ವ್ಯಕ್ತಿಯೊಬ್ಬರು ಮಂಡಿ ನೋವಿಗೆ ಔಷಧಿ ಕೊಡುವುದಾಗಿ ಹೇಳಿ ಅವರನ್ನ ಆಸ್ಪತ್ರೆಯೊಂದಕ್ಕೆ ಕರೆದೊಯ್ದಿದ್ದಾನೆ. ಅಲ್ಲಿ ಅವರಿಗೆ ಭ್ರಮೆ ಬರುವಂತೆ ಮಾಡಿ, ಒಂದು ವರೆ ಲಕ್ಷ ರೂಪಾಯಿ ಪಡೆದುಕೊಂಡಿದ್ದಾರೆ. ಆನಂತರವೂ ಹಣಕ್ಕಾಗಿ ಪೀಡಿಸಿದ್ದಾರೆ. ಇದರಿಂದ ಗಾಬರಿಗೊಂಡ ವೃದ್ಧೆ ಪೊಲೀಸರಿಗೆ ದೂರು ನೀಡಿದ್ದಾರೆ.
ಸುದ್ದಿ 4 : ತಾಳಿ ಸರ ಕದ್ದ ಆರೋಪಿ ಅರೆಸ್ಟ್
ವೃದ್ಧೆಯ ಮಾಂಗಲ್ಯ ಸರ ಕಿತ್ತುಕೊಂಡು ಹೋಗಿರುವ ಪ್ರಕರಣವನ್ನು ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರು ಭೇದಿಸಿದ್ದಾರೆ. ಪ್ರಕರಣದಲ್ಲಿ ಘಟನೆ ನಡೆದು 24 ಗಂಟೆಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಕಳೆದ ಫೆಬ್ರವರಿ 28 ರಂದು ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಶೆಡ್ತಿಕೆರೆ ಗ್ರಾಮದಲ್ಲಿ ಟಿವಿ ನೋಡುತ್ತಿದ್ದ ವೇಳೆ ಕರೆಂಟ್ ತೆಗೆದು ಮಹಿಳೆಯೊಬ್ಬರ ತಾಳಿಸರವನ್ನು ಕಿತ್ತುಕೊಂಡು ಹೋಗಲಾಗಿತ್ತು. ಈ ಸಂಬಂದ ಸಾಗರ ಪೊಲೀಸರು ವಿಶೇಷ ಟೀಂ ರೆಡಿ ಮಾಡಿ ತನಿಖೆ ನಡೆಸಿದ್ದರು.
ಸುದ್ದಿ 5 : ಲಂಚ ಪಡೆದಿದ್ದ ಅಧಿಕಾರಿಗೆ ಶಿಕ್ಷೆ
ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ಲಂಚ ಪಡೆದ ಅಧಿಕಾರಿಗೆ ಕೋರ್ಟ್ ಶಿಕ್ಷೆ ವಿಧಿಸಿದೆ. ಭೂಮಾಪನ ಪರಿವೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಲ್ಲಿಕಾರ್ಜುನಯ್ಯ ಎಂಬವರು ಶಿಕ್ಷೆಗೆ ಗುರಿಯಾದವರು. ಪೋಡಿ ಮಾಡಿಕೊಡುವ ಸಲುವಾಗಿ ಇವರು ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ವೇಳೆ ಲೋಕಾಯುಕ್ತ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಶಿವಮೊಗ್ಗದ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಎಚ್.ಜೆ.ಮರುಳಸಿದ್ಧಾರಾಧ್ಯ ಅವರು ಮಲ್ಲಿಕಾರ್ಜುನ ಅವರಿಗೆ ಒಂದು ವರ್ಷ ಆರು ತಿಂಗಳು ಕಾರಾಗೃಹ ಶಿಕ್ಷೆ ಮತ್ತು ₹ 30,000 ದಂಡ ವಿಧಿಸಿ ಆದೇಶಿಸಿದ್ದಾರೆ.