SHIVAMOGGA | MALENADUTODAY NEWS | ಮಲೆನಾಡು ಟುಡೆ | Mar 11, 2025
ಶಿವಮೊಗ್ಗ | ಎ.ಸಿ ಕಛೇರಿಯಿಂದ ರೈತರಿಗೆ ನೀಡುತ್ತಿರುವ ನೋಟಿಸನ್ನು ಹಿಂಪಡೆಯಲು ಒತ್ತಾಯಿಸಿ ಇಂದು ತುಂಗಾ-ಭದ್ರ ಮುಳುಗಡೆ ಸಂತ್ರಸ್ಥರ ಹೋರಾಟ ಸಮಿತಿ ವತಿಯಿಂದ ರೈತರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ಆ ಸಂದರ್ಭದಲ್ಲಿ ಅಲ್ಲಿದ್ದ ಬ್ಯಾರಿಗೇಡ್‌ಗಳನ್ನು ಹಾಗೂ ಪೋಲೀಸರನ್ನು ತಳ್ಳಿ ರೈತರು ಡಿಸಿ ಕಚೇರಿಗೆ ಮುತ್ತಿಗೆ ಹಾಕಿದರು. ಅಷ್ಟೇ ಅಲ್ಲದೆ ಆ ಸಮಯದಲ್ಲಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ವಿರುದ್ದ ದಿಕ್ಕಾರವನ್ನುಕೂಗಿ ಆಕ್ರೋಶವನ್ನು ವ್ಯಕ್ತಪಡಿಸಿದರು. ಈ ವೇಳೆ ಪ್ರತಿಭಟನಾಕಾರರನ್ನು ತಡೆಯಲು ಪೊಲೀಸರು ಹರಸಾಹಸ ಪಟ್ಟರು.
ರೈತರ ಹೋರಾಟಕ್ಕೆ ಕಾರಣವೇನು
ಶಿವಮೊಗ್ಗ ತಾಲ್ಲೂಕು ನಿದಿಗೆ ಹೋಬಳಿ ಹಾಲಲಕ್ಕವಳ್ಳಿ ಗ್ರಾಮ, ಲಕ್ಕಿನಕೊಪ್ಪ, ತೋಟದಕೆರೆ, ಹುರಳಿಹಳ್ಳಿ ಗ್ರಾಮಗಳು 1951ರ ತುಂಗಾ ಹಾಗೂ 1956ರ ಭದ್ರ ಅಣೆಕಟ್ಟು ನಿರ್ಮಿತ ಸಂದರ್ಭದಲ್ಲಿನ ಮುಳುಗಡೆ ಸಂತ್ರಸ್ತರಿಗೆ ಮತ್ತು ಭೂಹೀನರಿಗೆ ಪುನರ್ವಸತಿ ಗ್ರಾಮ ಎಂದು ನಿರ್ಮಿಸಲಾಗಿರುತ್ತದೆ. ಶಿವಮೊಗ್ಗ ಜಿಲ್ಲೆಯಲ್ಲಿಯೇ ಅತ್ಯಂತ ಹಳೆಯ ಅಣೆಕಟ್ಟು ಇದಾಗಿದ್ದು, ಈ ಅಣೆಕಟ್ಟಿನಿಂದ ಸಂಗ್ರಹವಾದ ನೀರು ದೂರದ ಆಂಧ್ರ ಪ್ರದೇಶ ರಾಜ್ಯದ ರಾಯಲಸೀಮೆಯವರೆಗೂ ಹರಿಯುತ್ತಿದ್ದು, ಅಂತೆಯೇ ಭದ್ರಾ ನೀರು ಲಕ್ಷಾಂತರ ಎಕರೆ ಕೃಷಿ ಜಮೀನಿಗೆ ಹಾಗೂ ಬಯಲುಸೀಮೆ ಜಿಲ್ಲೆಗಳಿಗೆ ಸರಬರಾಜಾಗುತ್ತಿದ್ದು, ಇಲ್ಲೇ ಅಣೆಕಟ್ಟಿನ ಹಿನ್ನೀರಿನಲ್ಲಿ ಸಂತ್ರಸ್ಥರಾದ ಜನರ ಹಿತಾಸಕ್ತಿಯನ್ನು ಇಲ್ಲಿನ ಸರ್ಕಾರಗಳೇ ನಿರ್ಲಕ್ಷಿಸುತ್ತಿವೆ, ಅಷ್ಟೇ ಅಲ್ಲದೆ 1951 ರ ತುಂಗಾ ಅಣೆಕಟ್ಟು ಯೋಜನಾ ವರದಿಯಲ್ಲಿ ಹಾಲಲಕ್ಕವಳ್ಳಿಯ ಸರ್ವೆ ನಂ.18, 19, 20 ಮುಳುಗಡೆ ಸಂತ್ರಸ್ಥರಿಗೆ ಮತ್ತು ಭೂಹೀನರಿಗೆ ಭೂಮಿ ಮಂಜೂರಾತಿ, ಗ್ರಾಮ ನಿರ್ಮಾಣ, ದೇವಸ್ಥಾನ, ಶಾಲೆ, ಪ್ರಾಥಮಿಕ ಚಿಕಿತ್ಸಾ ಕೇಂದ್ರ ನಿರ್ಮಿಸಲು ಪ್ರಸ್ತಾಪಿಸಲಾಗಿದೆ. 1951 ರಿಂದಲೂ ಅಣೆಕಟ್ಟು ನಿರ್ಮಾಣದ ಸಂದರ್ಭದಲ್ಲಿ ಹಾಲಲಕ್ಕವಳ್ಳಿಯಲ್ಲಿ ಸುಮಾರು 690 ಎಕರೆ ತರಿ ಮತ್ತು ಖುಷಿ ಜಮೀನು ಕಂದಾಯ ಇಲಾಖೆಯಿಂದ ಈ ಕಾರಣದಿಂದಲೇ ಮಂಜೂರಾತಿ ನೀಡಲಾಗಿದೆ.
ತುಂಗಾ ಬಲದಂಡೆ ಅಚ್ಚುಕಟ್ಟು ಪ್ರದೇಶದಲ್ಲಿ ಹೆಚ್ಚಿನ ಪ್ರದೇಶವನ್ನು ನೀರಾವರಿಗೆ ಮಂಜೂರು ನೀಡಲಾಗಿದೆ. 1951 ರಿಂದಲೂ ಮಂಜೂರಾತಿ ಆಗಿದ್ದು ಕೆಲವು ಜಮೀನುಗಳಿಗೆ ಪಕ್ಕಾಪೋಡು ದುರಸ್ತಿ ಆಗಿದೆ. 1980ರ ಹೊಸ ಅರಣ್ಯ ಕಾಯ್ದೆ ಜಾರಿಗಿಂತಲೂ ಮುಂಚಿತ ಈ ಜಮೀನುಗಳು ಮಂಜೂರಾಗಿದೆ. ಈಗ ಅರಣ್ಯ ಇಲಾಖೆಯವರು ಅರ್ಧ ಎಕರೆ ಯಿಂದ 3 ಎಕರೆ ಜಮೀನು ಹೊಂದಿದವರಿಗೂ, ಪಕ್ಕಾ ಫೋಡು ಅದವರಿಗೂ ಎ.ಸಿ ಕೋರ್ಟ್‌ನಲ್ಲಿ ಮೂಲ ಮಂಜೂರಾತಿ ರದ್ದುಗೊಳಿಸಲು ವಾಜ್ಯ ಹೂಡಿರುತ್ತಾರೆ.
ಕರ್ನಾಟಕ ಸರ್ಕಾರದ ಅರಣ್ಯ ಮಂತ್ರಿಗಳಿಗೆ, ಶಿವಮೊಗ್ಗ ಸಿಸಿಎಫ್ ಕಛೇರಿಗೆ ಹಾಗೂ ಶಿವಮೊಗ್ಗ ಜಿಲ್ಲಾಧಿಕಾರಿಗಳಿಗೆ ಡಿ-ನೋಟಿಫಿಕೇಶನ್ ಪ್ರಸ್ತಾವನೆಗೆ ಕೋಟಿ ಸಲ್ಲಿಸಿದ ಅರ್ಜಿ ಪರಿಶೀಲನಾ ಹಂತದಲ್ಲಿದೆ. ಉದ್ದೇಶಪೂರ್ವಕವಾಗಿ నిರ್ಲಕ್ಷ್ಯ ಮಾಡಿದ್ದು, ಡಿ-ನೋಟಿಫಿಕೇಶನ್ ಬಗ್ಗೆ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ . ಸುಮಾರು 60-70 ವರ್ಷಗಳಿಂದ ಕಂದಾಯ ಇಲಾಖೆಯಿಂದಲೇ ಮಂಜೂರಾತಿ ನೀಡಿದ ಜಮೀನು ಸಾಗುವಳಿ ಪತ್ರ, ಮನೆ ಹಕ್ಕುಪತ್ರ, ಪುನರ್ವಸತಿ ಸೌಕರ್ಯ ಮುಂತಾದುವುಗಳನ್ನು ಸಮರ್ಥಿಸಿಕೊಳ್ಳಲು ಕಂದಾಯ ಇಲಾಖೆಯು ಮುಂದೆ ಬರದ ಕಾರಣ, ಈ ಚಳುವಳಿಯನ್ನು ಪಕ್ಷಾತೀತವಾಗಿ ಹಬ್ಬಮ್ಮಿಕೊಂಡಿದ್ದು, ಕಂಗಾಲಾಗಿರುವ ಅಸಹಾಯಕ ರೈತರಿಗೆ ಪರಸ್ಪರ ಧೈರ್ಯ ನೀಡಲು ನೈತಿಕ ಬೆಂಬಲ ಕೋರಿ ಈ ಹೊರಾಟ ನಡೆಸುತ್ತಿದ್ದೇವೆ ಎಂದರು.
ರೈತರ ಹಕ್ಕೊತ್ತಾಯಗಳೇನು
ರೈತರ ಹಕ್ಕೊತ್ತಾಯಗಳನ್ನು ನೋಡುವುದಾದರೆ ರಾಜ್ಯ ಸರ್ಕಾರ ಸಾಲಲಕ್ಕವಳ್ಳಿ ಗ್ರಾ ಗ್ರಾಮ ಸರ್ವೆ ನಂ.18,19 ಮತ್ತು 20 ರ ಡಿ-ನೋಟಿಫಿಕೇಶನ್ ಮತ್ತು ಡಿ-ಂಸರ್ವ್ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮತ್ತು ಕಂದಾಯ ಇಲಾಖೆಯ ವತಿಯಿಂದ ಅರಣ್ಯ ಇಲಾಖೆಗೆ ಪ್ರಸ್ತಾವನೆ ಕಳಿಸಲು ಆಡಳಿತಾತ್ಮಕ ವ್ಯವಸ್ಥೆಯನ್ನು ಕಾಲಮಿತಿಯಲ್ಲಿ ಕೈಗೊಳ್ಳಲು ಕೋರಿದೆ.
ಶಿವಮೊಗ್ಗ ಜಿಲ್ಲೆಯಲ್ಲಿಯೇ ಹೆಚ್ಚಿನ ಒತ್ತುವರಿ ಪ್ರಕರಣ ಇದೆ ಎಂದು ಅರಣ್ಯ ಇಲಾಖೆಯವರು ಹೇಳುತ್ತಿದ್ದು, ಶಿವಮೊಗ್ಗ ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಅಂದರೆ ? ಅಣೆಕಟ್ಟುಗಳು ನಿರ್ಮಾಣವಾಗಿದ್ದು, ಮನವರ್ಸತಿ ಮತ್ತು ಅರಣ್ಯದಿಂದ ಭೂಮಿ ಬಿಡುಗಡೆ ಬಗ್ಗೆ ರಾಜ್ಯ ಸರ್ಕಾರವು ಚಕಾರವೆತ್ತದೆ ಇರುವುದು ಸೋಜಿಗವಾಗಿದ್ದು, ಹಾಲಲಕ್ಕವಳ್ಳಿ ಗ್ರಾಮದ ಸರ್ವೆ ನಂ.18,19 ಮತ್ತು 20 ರ ಭೂಮಿಯನ್ನು ತುಂಗಾ ಅಣೆಕಟ್ಟು ನಿರಾಶ್ರಿತರ ಮತ್ತು ಭೂಹೀನರಿಗೆ ಮಂಜೂರಾತಿ ಎಂಬ ವಿಶೇಷ ಪ್ರಕರಣವೆಂದು ಪರಿಗಣಿಸಿ ಈ ಜಮೀನುಗಳಿಗೆ ಡಿ ನೋಟಿಫಿಕೇಶನ್ ಮಾಡಿಕೊಡಲು ಮತ್ತು ಎ.ಸಿ.ಎಫ್ ಮತ್ತು ಎ.ಸಿ ಕೋರ್ಟ್‌ನಲ್ಲಿ ಅರಣ್ಯ ಇಲಾಖೆ ವತಿಯಿಂದ ವಾಜ್ಯ ಹೂಡುವುದನ್ನು ನಿಲ್ಲಿಸಲು ಹಾಗೂ ಈಗ ಹೂಡಿರುವ ರಾಜ್ಯಗಳನ್ನು, ನೀಡಲಾದ ನೋಟೀಸುಗಳನ್ನು ಹಿಂಪಡೆಯಲು ಆಗ್ರಹಿಸಿದೆ.
ಹಾಲಲಕ್ಕವಳ್ಳಿ ಗ್ರಾಮವನ್ನು ಪುನವರ್ಸತಿ ಗ್ರಾಮವೆಂದು ಅಧಿಕೃತವಾಗಿ ಘೋಷಿಸಿ ಯೋಜನೆಯಿಂದ ಬಾಧಿತರೆಂದು ಪರಿಗಣಿಸಿ ಸರ್ಕಾರವು ಅಗತ್ಯ ಮೂಲಭೂತ ಸೌಕರ್ಯ ನೀಡಲು, ಅಭಿವೃದ್ಧಿ ಕಾರ್ಯದಲ್ಲಿ ಆದ್ಯತೆಯ ಮೇರೆಗೆ ಪರಿಗಣಿಸಲು ಮತ್ತು ಮುಳುಗಡೆ ಸಂತ್ರಸ್ಥ ಕುಟುಂಬಗಳಿಗೆ ಯೋಜನಾ ಭಾಧಿತ ಕುಟುಂಬ ಪ್ರಮಾಣ ಪತ್ರ ನೀಡಲು ಕೋರಿದೆ.
ಈಗಾಗಲೇ ವಿವಿಧ ನ್ಯಾಯಾಲಯಗಳಲ್ಲಿ ಅರಣ್ಯ ಮತ್ತು ಕಂದಾಯ ಇಲಾಖೆಯ ಭೂಮಿಯ ಒಡೆತನದ ಬಗ್ಗೆ ವ್ಯಾಜ್ಯಗಳು ನಡೆಯುತ್ತಿರುವುದರಿಂದ ಮತ್ತು ಇತ್ತೀಚಿನ ವನ ಸಂರಕ್ಷಣಾ ಅಧಿನಿಯಮ, 2023 ಯನ್ನು ರಾಜ್ಯ ಸರ್ಕಾರವು ಇನ್ನೂ ಜಾರಿಗೆ ತೆರದ ಕಾರಣ, ಈ ಎಲ್ಲಾ ನ್ಯಾಯಾಲಯ ಪ್ರಕ್ರಿಯೆಗಳು ಮುಗಿಯುವವರೆಗೆ ರೈತರಿಗೆ ನೀಡಿರುವ ನೋಟೀಸನ್ನು ಹಿಂಪಡೆಯಲು ಒತ್ತಾಯಿಸಲಾಗಿದೆ
ಹಾಲಲಕ್ಕವಳ್ಳಿ ಗ್ರಾಮ, ಲಕ್ಕಿನಕೊಪ್ಪ, ತೋಟದ ಕೆರೆ, ಹುರಳಿಹಳ್ಳಿ ಗ್ರಾಮಗಳು ಪುನರ್ವಸತಿ ಗ್ರಾಮಗಳು ಎಂದು ಸ್ಪಷ್ಟವಾಗಿ ಸರ್ಕಾರದ ವಿವಿಧ ಇಲಾಖೆಗಳ ದಾಖಲೆಗಳಲ್ಲಿ ನಮೂದಿಸಿದ್ದಾಗ್ಯೂ ಸಹ ಕಾಲ ಕಾಲಕ್ಕೆ ಕೈಗೊಳ್ಳಬೇಕಾದ ಡಿ-ನೋಟಿಫಿಕೇಶನ್ ಕ್ರಮವನ್ನು ನಿರ್ಲಕ್ಷ್ಯತನದಿಂದ ಕೈಬಿಟ್ಟ ಕಾರಣ ಅರಣ್ಯ ಇಲಾಖೆಯು ತನ್ನ ಜಾಗವೆಂದು ಪ್ರತಿಪಾದಿಸುತ್ತಿದೆ. ಈ ಕ್ರಮ ಸರ್ವಥಾ ಖಂಡನೀಯ, ಎಂಬುದ ರೈತರ ಹಕ್ಕೊತ್ತಾಯ ವಾಗಿದೆ.
SUMMARY | The farmers, under the banner of Tunga-Bhadra Submergence Victims’ Action Committee, staged a massive protest at the deputy commissioner’s office demanding the withdrawal of the notice issued to the farmers by the AC office
KEYWORDS | farmers, Tunga-Bhadra Submergence protest, commissioner’s office, shivamogga,